Afghanistan vs New Zealand: ನ್ಯೂಜಿಲೆಂಡ್ vs ಅಫ್ಘಾನಿಸ್ತಾನ್ ಪಂದ್ಯದ ಬಗ್ಗೆ ಅಖ್ತರ್ ನುಡಿದ ಭವಿಷ್ಯವೇನು ಗೊತ್ತೇ?

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಈಗ ಸೆಮಿಫೈನಲ್ ಗೆ ತಲುಪಬೇಕಾದರೆ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ್ ನಡುವಿನ ಪಂದ್ಯ ಸಾಕಷ್ಟು ಮಹತ್ವದ ಪಾತ್ರವನ್ನು ವಹಿಸಲಿದೆ.ಏಕೆಂದರೆ ಈ ಪಂದ್ಯದಲ್ಲಿ ಒಂದು ವೇಳೆ ಅಫ್ಘಾನಿಸ್ತಾನ್ ತಂಡವು ಕೀವಿಸ್ ವಿರುದ್ಧ ಗೆಲುವನ್ನು ಸಾಧಿಸಿದ್ದೆ ಆದಲ್ಲಿ ಭಾರತ ತಂಡವು ಸರಾಸರಿ ಆಧಾರದ ಮೇಲೆ ಸೆಮಿಫೈನಲ್ ತಲುಪಲಿದೆ.

Written by - Zee Kannada News Desk | Last Updated : Nov 7, 2021, 12:46 AM IST
  • ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಈಗ ಸೆಮಿಫೈನಲ್ ಗೆ ತಲುಪಬೇಕಾದರೆ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ್ ನಡುವಿನ ಪಂದ್ಯ ಸಾಕಷ್ಟು ಮಹತ್ವದ ಪಾತ್ರವನ್ನು ವಹಿಸಲಿದೆ.
  • ಏಕೆಂದರೆ ಈ ಪಂದ್ಯದಲ್ಲಿ ಒಂದು ವೇಳೆ ಅಫ್ಘಾನಿಸ್ತಾನ್ ತಂಡವು ಕೀವಿಸ್ ವಿರುದ್ಧ ಗೆಲುವನ್ನು ಸಾಧಿಸಿದ್ದೆ ಆದಲ್ಲಿ ಭಾರತ ತಂಡವು ಸರಾಸರಿ ಆಧಾರದ ಮೇಲೆ ಸೆಮಿಫೈನಲ್ ತಲುಪಲಿದೆ.
 Afghanistan vs New Zealand: ನ್ಯೂಜಿಲೆಂಡ್ vs ಅಫ್ಘಾನಿಸ್ತಾನ್ ಪಂದ್ಯದ ಬಗ್ಗೆ ಅಖ್ತರ್ ನುಡಿದ ಭವಿಷ್ಯವೇನು ಗೊತ್ತೇ? title=
file photo

ನವದೆಹಲಿ: ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಈಗ ಸೆಮಿಫೈನಲ್ ಗೆ ತಲುಪಬೇಕಾದರೆ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ್ ನಡುವಿನ ಪಂದ್ಯ ಸಾಕಷ್ಟು ಮಹತ್ವದ ಪಾತ್ರವನ್ನು ವಹಿಸಲಿದೆ.ಏಕೆಂದರೆ ಈ ಪಂದ್ಯದಲ್ಲಿ ಒಂದು ವೇಳೆ ಅಫ್ಘಾನಿಸ್ತಾನ್ ತಂಡವು ಕೀವಿಸ್ ವಿರುದ್ಧ ಗೆಲುವನ್ನು ಸಾಧಿಸಿದ್ದೆ ಆದಲ್ಲಿ ಭಾರತ ತಂಡವು ಸರಾಸರಿ ಆಧಾರದ ಮೇಲೆ ಸೆಮಿಫೈನಲ್ ತಲುಪಲಿದೆ.

ಇದನ್ನು ಓದಿ : Petrol Price Today : ವಾಹನ ಸವಾರರೆ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ

ಈಗ ಉಭಯದೇಶಗಳ ನಡುವಿನ ಪಂದ್ಯಕ್ಕೂ ಮೊದಲು ರಾವಲ್ಪಿಂಡಿ ಎಕ್ಷ್ಪ್ರೆಸ್ ಶೋಯಬ್ ಅಖ್ತರ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಈಗ ತಮ್ಮ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಅವರು ಮಾತನಾಡುತ್ತಾ "ಭಾರತದ ಹಣೆಬರಹ ಈಗ ನ್ಯೂಜಿಲೆಂಡ್ ತಂಡದ ಕೈಯಲ್ಲಿದೆ.ಒಂದು ವೇಳೆ ನ್ಯೂಜಿಲೆಂಡ್ ತಂಡವು ಆಫ್ಘಾನ್ ವಿರುದ್ಧ ಸೋತಿದ್ದೆ ಆದಲ್ಲಿ ಸಾಕಷ್ಟು ಪ್ರಶ್ನೆಗಳು ಉದ್ಬವವಾಗುತ್ತವೆ.ಹಾಗಾಗಿ ನಾನು ಎಚ್ಚರಿಕೆ ನೀಡುವುದೆನೆಂದರೆ ಇದು ಮತ್ತೊಂದು ಟ್ರೆಂಡಿಂಗ್ ಟಾಪಿಕ್ ಆಗಬಹುದು.ಹಾಗಾಗಿ ನಾನು ಈ ವಿಚಾರವಾಗಿ ಯಾವುದೇ ವಿವಾದಾತ್ಮಕ ಹೇಳಿಕೆಯನ್ನು ನೀಡಲು ಹೋಗುವುದಿಲ್ಲ' ಆದರೆ ಈಗ ಪಾಕಿಸ್ತಾನದ ಭಾವನೆಗಳು ಈಗ ನ್ಯೂಜಿಲೆಂಡ್ ಪರವಾಗಿ ಅಧಿಕವಾಗಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ನೂರು ಕೋಟಿ ವಸೂಲಿ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನ

ಇನ್ನೂ ಮುಂದುವೆರೆದು ಮಾತನಾಡಿದ ಅವರು 'ಸದ್ಯ ನ್ಯೂಜಿಲೆಂಡ್ ತಂಡವು ಅಫ್ಘಾನಿಸ್ತಾನ್ ದಕ್ಕಿಂತ ಉತ್ತಮವಾಗಿದೆ,ಆದರೆ ದುರಾದೃಷ್ಟದಿಂದಾಗಿ ಒಂದು ವೇಳೆ ಅವರು ಚೆನ್ನಾಗಿ ಆಡದೆ ಹೋದಲ್ಲಿ ಅದು ಸಮಸ್ಯೆಯಾಗಲಿದೆ.ಸಾಮಾಜಿಕ ಮಾಧ್ಯಮಗಳಲ್ಲಿ ಯಾರನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ-ಪಡಿತರಾದಾರರಿಗೆ ಬಿಗ್ ಶಾಕ್ : ಇಂದಿನಿಂದ ಉಚಿತ ಪಡಿತರ ಯೋಜನೆ ಬಂದ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News