T20 World Cup 2021: ಮೊದಲೆರದು ಪಂದ್ಯಗಳಲ್ಲಿ ಈ ಆಟಗಾರನನ್ನು ಹೊರಗಿಟ್ಟಿದ್ದೇ ಸೋಲಿಗೆ ಕಾರಣವಾಯಿತೇ? ಕೊನೆಗೂ ಕೊಹ್ಲಿಗೆ ಅರಿವಾಯಿತು ತನ್ನ ತಪ್ಪು
ಹಲವು ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ಪರ ಟ್ವೆಂಟಿ-20 ಪಂದ್ಯ ಆಡುವ ಅವಕಾಶ ಅಶ್ವಿನ್‌ಗೆ ಲಭಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅವಕಾಶ ನೀಡಿರಲಿಲ್ಲ.
ನವದೆಹಲಿ : ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ (Team India) ಟಿ20 ವಿಶ್ವಕಪ್‌ನ (T20 World Cup) ತನ್ನ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 66 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಎರಡು ದೊಡ್ಡ ಬದಲಾವಣೆಗಳನ್ನು ಮಾಡಿತ್ತು. ಟೀಂ ಇಂಡಿಯಾ ಕೈಗೊಂಡ ಈ ನಿರ್ಧಾರ ಸರಿಯಾಗಿತ್ತು ಕೂಡಾ.
ಪಂದ್ಯವನ್ನೇ ಬದಲಾಯಿಸಿದ ಆಟಗಾರ :
ಹೌದು, ನಾವು ಮಾತನಾಡುತ್ತಿರುವುದು ಲೆಜೆಂಡರಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಬಗ್ಗೆ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ಪರ ಟ್ವೆಂಟಿ-20 ಪಂದ್ಯ ಆಡುವ ಅವಕಾಶ ಅಶ್ವಿನ್‌ಗೆ ಲಭಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರಿಗೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ತಂಡವು ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಅಶ್ವಿನ್ ಅದ್ಭುತವಾಗಿ ಬೌಲಿಂಗ್ ಮಾಡಿ 4 ಓವರ್ ಗಳಲ್ಲಿ ಕೇವಲ 14 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸಿದರು. ಪಾಕಿಸ್ತಾನ (Pakistan) ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಅಶ್ವಿನ್‌ಗೆ ಅವಕಾಶ (Ravichandran Ashwin)ನೀಡಿದಿದ್ದರೆ, ಫಲಿತಾಂಶ ಭಿನ್ನವಾಗಿರುತ್ತಿತ್ತೋ ಏನೋ ಎನ್ನಲಾಗಿದೆ.
ಇದನ್ನೂ ಓದಿ : T20 World Cup 2021: ದೀಪಾವಳಿಗೂ ಮೊದಲು ಭಾರತೀಯರಿಗೆ ಟೀಂ ಇಂಡಿಯಾ ಭರ್ಜರಿ ಉಡುಗೊರೆ
ಈ ಆಟಗಾರನಿಗೆ ಅವಕಾಶ ನೀಡಿದ್ದ ವಿರಾಟ್ :
ವಿರಾಟ್ ಕೊಹ್ಲಿ ಅಶ್ವಿನ್ ಬದಲಿಗೆ ವರುಣ್ ಚಕ್ರವರ್ತಿಗೆ ನಿರಂತರವಾಗಿ ಅವಕಾಶಗಳನ್ನು ನೀಡುತ್ತಿದ್ದರು. ಚಕ್ರವರ್ತಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರಬಹುದು, ಆದರೆ ವಿಶ್ವಕಪ್‌ನಂತಹ (World Cup) ದೊಡ್ಡ ಸ್ಟೇಜ್ ನ ಅನುಭವ ಅವರಿಗೆ ಇರಲಿಲ್ಲ. ಅವರು ಪಾಕಿಸ್ತಾನದ ವಿರುದ್ಧ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ನ್ಯೂಜಿಲೆಂಡ್ ವಿರುದ್ಧವೂ ಅದೇ ಕತೆ.
ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಜಯ :
ಟೀಂ ಇಂಡಿಯಾ (Team India) ತನ್ನ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 66 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 2 ವಿಕೆಟ್ ನಷ್ಟಕ್ಕೆ 210 ರನ್ ಕಲೆ ಹಾಕಿತ್ತು. ಉತ್ತರವಾಗಿ ಅಫ್ಘಾನಿಸ್ತಾನ ತಂಡ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಮೊಹಮ್ಮದ್ ಶಮಿ 3, ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ (Ravindra Jadeja) ತಲಾ ಒಂದು ವಿಕೆಟ್ ಪಡೆದರು. ಇದರೊಂದಿಗೆ ಇದೀಗ ಟೀಂ ಇಂಡಿಯಾ 3 ಪಂದ್ಯಗಳಲ್ಲಿ 2 ಅಂಕ ಗಳಿಸಿದೆ.
ಇದನ್ನೂ ಓದಿ : Rahul Dravid : ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ