ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆದ ಟಿ-20 ವಿಶ್ವಕಪ್‍ನ ಗ್ರೂಪ್- A ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ 5 ರನ್‌ಗಳಿದ ಭರ್ಜರಿ ಗೆಲವು ಸಾಧಿಸಿದ ಐರ್ಲೆಂಡ್ ಸಂಭ್ರಮಿಸಿದೆ.


COMMERCIAL BREAK
SCROLL TO CONTINUE READING

ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಐರ್ಲೆಂಡ್‍ಗೆ  19.2 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 157 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಐರ್ಲೆಂಡ್ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ಆಂಡ್ರ್ಯೂ ಬಾಲ್ಬಿರ್ನಿ(62) ಆಕರ್ಷಕ ಅರ್ಧಶತಕ ಸಿಡಿಸಿದರು. ಲೊರ್ಕನ್ ಟುಕರ್(34), ಕರ್ಟಿಸ್ ಕ್ಯಾಂಫರ್(18), ಪಾಲ್ ಸ್ಟಿರ್ಲಿಂಗ್(14) ಮತ್ತು ಗರೆಥ್ ಡೆಲಾನಿ(ಅಜೇಯ 12) ರನ್ ಗಳಿಸಿದರು.


ಜೀವನದಲ್ಲಿ ಕಿಂಗ್ ಕೊಹ್ಲಿಯ ಈ 5 ಗುಣ ಅಳವಡಿಸಿಕೊಂಡ್ರೆ ಖಂಡಿತ ಯಶಸ್ಸು ಸಿಗುತ್ತಂತೆ..!


158 ರನ್‍ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‍ಗೆ ಮಳೆರಾಯಣ ಅಡ್ಡಿಯಾಯಿತು. ಇಂಗ್ಲೆಂಡ್ 14.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದ್ದಾಗ ಮಳೆ ಆರಂಭವಾಯಿತು. ಮಳೆ ನಿಂತ ಬಳಿಕವೂ ಔಟ್‌ಫೀಲ್ಡ್ ಒದ್ದೆಯಾಗಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐರ್ಲೆಂಡ್ 5 ರನ್‌ಗಳಿಂದ ಗೆದ್ದಿದೆ ಎಂದು ಘೋಷಿಸಲಾಯಿತು.


ಅರ್ಹತಾ ಸುತ್ತಿನಲ್ಲಿ 2 ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್ ಅಂತರದಲ್ಲಿ ಸೋಲಿಸಿದ್ದ ಐರ್ಲೆಂಡ್, ಇದೀಗ ಸೂಪರ್ 12ರ ಪಂದ್ಯದಲ್ಲೂ ಬಲಿಷ್ಠ ಇಂಗ್ಲೆಂಡ್ ಎದುರು ಅದ್ಬುತ ಪ್ರದರ್ಶನ ತೋರಿದೆ. ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ ಐರ್ಲೆಂಡ್ ಆಟಗಾರರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು. ಇತ್ತ ಇಂಗ್ಲೆಂಡ್ ಆಟಗಾರರು DLS ನಿಯಮಕ್ಕೆ ಶಾಪ ಹಾಕಿ ಬೇಸರ ವ್ಯಕ್ತಪಡಿಸಿದರು.


ಇದನ್ನೂ ಓದಿ: ಕಾಲೆಳೆದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ರಿಷಬ್‌ ಪಂತ್‌ ಪ್ರೇಯಸಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ