ಜೀವನದಲ್ಲಿ ಕಿಂಗ್ ಕೊಹ್ಲಿಯ ಈ 5 ಗುಣ ಅಳವಡಿಸಿಕೊಂಡ್ರೆ ಖಂಡಿತ ಯಶಸ್ಸು ಸಿಗುತ್ತಂತೆ..!

ವಿರಾಟ್ ಕೊಹ್ಲಿಯ ಈ 5 ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ಐಎಎಸ್ ಅಧಿಕಾರಿ ಅವನೀಶ್ ಶರಣ್ ಸಲಹೆ ನೀಡಿದ್ದಾರೆ.  

Written by - Puttaraj K Alur | Last Updated : Oct 26, 2022, 04:57 PM IST
  • ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ
  • ಜೀವನದಲ್ಲಿ ವಿರಾಟ್ ಕೊಹ್ಲಿಯಿಂದ ಕಲಿಯಬೇಕಾದ 5 ಗುಣಗಳ ಬಗ್ಗೆ ತಿಳಿಸಿದ ಐಎಎಸ್ ಅಧಿಕಾರಿ
  • ಕೊಹ್ಲಿಯ 5 ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡ್ರೆ ಖಂಡಿತ ಯಶಸ್ಸು ಎಂದ ಅವನೀಶ್ ಶರಣ್
ಜೀವನದಲ್ಲಿ ಕಿಂಗ್ ಕೊಹ್ಲಿಯ ಈ 5 ಗುಣ ಅಳವಡಿಸಿಕೊಂಡ್ರೆ ಖಂಡಿತ ಯಶಸ್ಸು ಸಿಗುತ್ತಂತೆ..! title=
ವಿರಾಟ್ ಕೊಹ್ಲಿಯ 5 ಗುಣಗಳು

ನವದೆಹಲಿ: ಭಾನುವಾರ ನಡೆದ ಟಿ-20 ವಿಶ್ವಕಪ್‍ನ ಮಹತ್ವದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಟೀಂ ಇಂಡಿಯಾ ಬಗ್ಗುಬಡಿದಿದೆ. ಈ ಮೂಲಕ ಕಳೆದ ಟಿ-20 ವಿಶ್ವಕಪ್‍ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿ ತಾನು ಕ್ರಿಕೆಟ್ ಲೋಕದ ಕಿಂಗ್ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್, 6 ಬೌಂಡರಿ ಇದ್ದ ಅಜೇಯ 82 ರನ್ ಬಾರಿಸಿದ ಕೊಹ್ಲಿ ಸೋಲುವ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ಹೊಡೆತಕ್ಕೆ ಪಾಕ್ ಬೌಲರ್‍ಗಳು ಮೈದಾನದಲ್ಲಿಯೇ ಕೈಮೇಲೆ ತಲೆಹೊತ್ತುಕೊಂಡು ಕುಳಿತರು. ಗೆಲ್ಲುವ ಪಂದ್ಯದಲ್ಲಿ ವಿರೋಚಿತ ಸೊಲು ಕಂಡ ಪಾಕಿಸ್ತಾನ ತಂಡಕ್ಕೆ ಪಂದ್ಯದ ಕೊನೆಯ ಓವರ್ ದೊಡ್ಡ ಶಾಕ್ ನೀಡಿತು.

ಇದನ್ನೂ ಓದಿ: ನೋಟುಗಳಲ್ಲಿ ಲಕ್ಷ್ಮಿ, ಗಣೇಶ ದೇವರ ಭಾವಚಿತ್ರ ಮುದ್ರಿಸಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಸಲಹೆ

ಆರ್.ಅಶ್ವಿನ್ ಗೆಲುವಿನ ರನ್ ಬಾರಿಸುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಮೈದಾನದಲ್ಲಿ ಓಡಾಡಿ ಭರ್ಜರಿ ಸೆಲೆಬ್ರೆಷನ್ ಮಾಡಿದರು. ಅದ್ಭುತ ಬ್ಯಾಟಿಂಗ್ ಮಾಡಿ ಪಾಕಿಸ್ತಾನದ ವಿರುದ್ಧ ಗೆಲುವು ತಂದುಕೊಟ್ಟ ಕೊಹ್ಲಿ ಆನಂದಬಾಷ್ಪ ಸುರಿಸಿದರು. ಪಾಕ್ ವಿರುದ್ಧದ ಪಂದ್ಯಗಳಲ್ಲಿ ಕೊಹ್ಲಿ ನಡೆದುಕೊಂಡ ರೀತಿಯ ಬಗ್ಗೆ ಐಎಎಸ್ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಜೀವನದಲ್ಲಿ ಸೋಲು-ಗೆಲುವು, ಏಳು-ಬೀಳು ಸಹಜ. ಅದೇ ರೀತಿ ಈ ಹಿಂದೆ ವ್ಯಾಪಕ ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ಇದೀಗ ತಮ್ಮ ಅದ್ಭುತ ಬ್ಯಾಟಿಂಗ್‍ನಿಂದ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಭಾರತ-ಪಾಕ್ ಪಂದ್ಯದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿ ಅವನೀಶ್ ಶರಣ್, ವಿರಾಟ್ ಕೊಹ್ಲಿಯಿಂದ ಪ್ರತಿಯೊಬ್ಬರೂ ಕಲಿಯಬೇಕಾದ 5 ಗುಣಗಳನ್ನು ತಿಳಿಸಿದ್ದಾರೆ. ಆ 5 ಗುಣಗಳು ಯಾವವು ಎಂದು ತಿಳಿಯಿರಿ.

  1. ನಮ್ಮ ಜೀವನದಲ್ಲಿ ಕೆಟ್ಟ ಕ್ಷಣವೆಂಬುದು ಕೇವಲ ಕ್ಷಣಿಕ
  2. ಕೊನೆ ಕ್ಷಣದವರೆಗೂ ನಮ್ಮ ಭಾವನೆಗಳನ್ನು ನಿಯಂತ್ರಿಸಬೇಕು
  3. ಜನರ ಟೀಕೆ, ಹೊಗಳಿಕೆಗೆ ತಲೆ ಕಡೆಸಿಕೊಳ್ಳದೆ ಮುಂದುವರಿಯಬೇಕು
  4.  ಆತ್ಮಸ್ಥೈರ್ಯ ಇದ್ದಾಗ ಕಠಿಣ ಸಂದರ್ಭಗಳು ಸಹ ಸುಲಭವೆನಿಸುತ್ತವೆ
  5. ಪ್ರತಿಯೊಬ್ಬರೂ ಟೀಕೆಗಳಿಗೆ ತಮ್ಮ ಕೆಲಸದ ಮೂಲಕವೇ ಉತ್ತರಿಸಬೇಕು

ವಿರಾಟ್ ಕೊಹ್ಲಿಯ ಈ 5 ಗುಣಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ ಎಂದು ಐಎಎಸ್ ಅಧಿಕಾರಿ ಅವನೀಶ್ ಶರಣ್ ಉಪಯುಕ್ತ ಸಲಹೆ ನೀಡಿದ್ದಾರೆ.  

ಇದನ್ನೂ ಓದಿ: Dare To Dream: ‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022’; ನಾಮನಿರ್ದೇಶನಗಳು ಈಗ ತೆರೆದಿವೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News