T20 World Cup 2022: ಅರ್ಷದೀಪ್ ಸಿಂಗ್ ಬೌಲಿಂಗ್ ಮಾಡುವಾಗ ತಾಯಿ ಏನ್ ಮಾಡ್ತಾರೆ ಗೊತ್ತಾ..?
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದ ಯುವ ವೇಗಿ ಅರ್ಷದೀಪ್ ಸಿಂಗ್ 32 ರನ್ ನೀಡಿ 3 ವಿಕೆಟ್ ಪಡೆದರು.
ನವದೆಹಲಿ: ಯುವ ವೇಗಿ ಅರ್ಷದೀಪ್ ಸಿಂಗ್ ಟಿ-20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಿದರು. ಈ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿರೋಚಿತ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ 32 ರನ್ ನೀಡಿ 3 ವಿಕೆಟ್ ಪಡೆದರು. ಕೊನೆ ಎಸೆತದವರೆಗೂ ಹೋರಾಟ ನಡೆಸಿದ ಟೀಂ ಇಂಡಿಯಾ ಸೋಲುವ ಪಂದ್ಯದಲ್ಲಿ 4 ವಿಕೆಟ್‍ಗಳ ಗೆಲುವು ಸಾಧಿಸಿತು. ಅರ್ಷದೀಪ್ ಬೌಲಿಂಗ್ ಮಾಡುವಾಗ ಅವರ ತಾಯಿ ಏನು ಮಾಡುತ್ತಾರೆ ಗೊತ್ತಾ..? ಈ ಬಗ್ಗೆ ಇಂಟರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಕೆಟ್ಟದಾಗಿ ಟ್ರೋಲ್ ಆಗಿದ್ದ ಅರ್ಷದೀಪ್!
ಪಂಜಾಬ್ ಮೂಲದ ಅರ್ಷ್‌ದೀಪ್ ಸಿಂಗ್ ಅತ್ಯುತ್ತಮ ಬೌಲಿಂಗ್‍ನಿಂದ ಗಮನ ಸಳೆದಿದ್ದಾರೆ. ಪಂದ್ಯದ ಗತಿಯನ್ನೇ ಬದಲಿಬಲ್ಲ ಸಾಮರ್ಥ್ಯ ಹೊಂದಿರುವ ಅರ್ಷದೀಪ್ ಟಿ-20 ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಆದರೆ ಕಳೆದ ಕೆಲವು ತಿಂಗಳುಗಳು ಅವರಿಗೆ ತುಂಬಾ ಕಷ್ಟಕರವಾಗಿದ್ದವು. ಏಷ್ಯಾಕಪ್‍ನಲ್ಲಿ ಆಸಿಫ್ ಅಲಿ ಕ್ಯಾಚ್ ಕೈಬಿಟ್ಟ ನಂತರ ಅರ್ಷದೀಪ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಲಾಗಿತ್ತು. ಅಷ್ಟೇ ಅಲ್ಲ ಅವರನ್ನು ಖಲಿಸ್ತಾನಿ ಅಂತಾ ಹೀಯಾಳಿಸಲಾಗಿತ್ತು. ಇದೀಗ ಪಾಕಿಸ್ತಾನದಂತಹ ಬಲಿಷ್ಠ ತಂಡದ ಎದುರು ಹರ್ಷದೀಪ್ ಅದ್ಭುತ ಬೌಲಿಂಗ್ ಮೂಲಕ ದಿಟ್ಟ ಪ್ರದರ್ಶನ ನೀಡಿದ್ದಾರೆ.
ಇದನ್ನೂ ಓದಿ: T20 World Cup 2022: ಪಾಕಿಸ್ತಾನ ತಂಡಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದ ರಮೀಝ್ ರಾಜಾ..!
ರಹಸ್ಯ ಬಹಿರಂಗಪಡಿಸಿದ ಅರ್ಷದೀಪ್ ತಾಯಿ
23 ವರ್ಷದ ಅರ್ಷದೀಪ್ ಪಾಕಿಸ್ತಾನದ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು. ಇನ್ ಫಾರ್ಮ್ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಆಜಮ್ ಸೇರಿದಂತೆ 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಟೀಂ ಇಂಡಿಯಾ ಗೆಲುವಿನಲ್ಲಿ ಅರ್ಷದೀಪ್ ಪ್ರಮುಖ ಪಾತ್ರ ವಹಿಸಿದರು. ಅವರ ತಾಯಿ ಬಲ್ಜಿತ್ ಕೌರ್ ಮಗ ಬೌಲಿಂಗ್ ಮಾಡುವುದನ್ನು ಅಪರೂಪವಾಗಿ ನೋಡುತ್ತಾರಂತೆ. ಇದರ ಹಿಂದಿನ ರಹಸ್ಯವನ್ನು ಅವರೇ ಬಹಿರಂಗಪಡಿಸಿದ್ದಾರೆ. ಭಾರತ ಪರ ಅರ್ಷದೀಪ್ ಆಡಲು ಶುರುಮಾಡಿದ ದಿನದಿಂದಲೇ ನಾನು ಈ ರೀತಿ ಮಾಡುತ್ತಿದ್ದೇನೆ ಅಂತಾ ಬಲ್ಜಿತ್ ಕೌರ್ ಹೇಳಿದ್ದಾರೆ.
ಪಂದ್ಯದ ವೇಳೆ ಗುರುದ್ವಾರದಲ್ಲಿ ಪೂಜೆ
ಅರ್ಷದೀಪ್ ಆಡುವಾಗ ಅವರ ತಾಯಿ ಗುರುದ್ವಾರದಲ್ಲಿ ಉಳಿಯುತ್ತಾರಂತೆ. ಈ ವೇಳೆ ಅವರು ಗುರು ನಾನಕ್ ದೇವರ ಮುಂದೆ ಕುಳಿತು ವಿಶೇಷ ಪೂಜೆ ಮಾಡುತ್ತಲೇ ಇರುತ್ತಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ‘ಅರ್ಷದೀಪ್ ಭಾರತಕ್ಕಾಗಿ ಆಡಲು ಶುರುಮಾಡಿದ ದಿನದಿಂದಲೂ ನಾನು ಇದೇ ರೀತಿ ಮಾಡುತ್ತಿದ್ದೇನೆ. ಅರ್ಷದೀಪ್ ಯಾವಾಗಲೂ ಕಠಿಣವಾಗಿ ಬೌಲ್ ಮಾಡುತ್ತಾನೆ. ಈ ಆಟದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಬ್ಯಾಟ್ಸ್‌ಮನ್‌ಗಳು ಮಗನ ಬೌಲಿಂಗ್ ದಂಡಿಸುವುದನ್ನು ನೋಡಲು ನನಗೆ ಆಗುವುದಿಲ್ಲ’ ಅಂತಾ ಬಲ್ಜಿತ್ ಕೌರ್ ಹೇಳಿದ್ದಾರೆ.
ಇದನ್ನೂ ಓದಿ: Viral Video: ಸೋತ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು!
ತಂದೆ ಕೂಡ ಬೌಲರ್
ಅರ್ಷದೀಪ್ ಅವರ ತಂದೆ ದರ್ಶನ್ ಸಿಂಗ್ ಕೂಡ ಬೌಲರ್ ಆಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗನನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಯಾರೂ ಸಹ ಪ್ರತಿದಿನ ಉತ್ತಮ ಪ್ರದರ್ಶನ ನೀಡಲು ಸಾಧ‍್ಯವಿಲ್ಲ. ಒಂದೊಂದು ಬಾರಿ ಆಟಗಾರರಿಗೆ ಆ ರೀತಿ ಆಗುತ್ತದೆ. ಹೀಗಾಗಿ ಕೆಟ್ಟದಾಗಿ ಟ್ರೋಲ್ ಮಾಡಬಾರದು’ ಅಂತಾ ಅವರು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ