Hardik Pandya and Virat Kohli: ಮೆಲ್ಬೋರ್ನ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾರತದ ಗೆಲುವಿನ ಹೀರೋ ಆಗಿದ್ದರು. ಟೀಮ್ ಇಂಡಿಯಾಗೆ ಬಹುತೇಕ ಸೋತ ಪಂದ್ಯವನ್ನು ಗೆಲ್ಲಲು ಭಾರತದ ಮಾಜಿ ನಾಯಕ ಸಹಾಯ ಮಾಡಿದ್ದರು. ಕಠಿಣ ಪರಿಸ್ಥಿತಿಯಲ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದರು. ಅದೇ ಸಮಯದಲ್ಲಿ, ಈ ಗೆಲುವಿನ ನಂತರ ಎಲ್ಲಾ ಆಟಗಾರರು ತುಂಬಾ ಭಾವನಾತ್ಮಕವಾಗಿ ಕಾಣಿಸಿಕೊಂಡರು.
ಇದನ್ನೂ ಓದಿ: Sunil Gavaskar: ಪಾಕ್ ವಿರುದ್ಧ ಟೀಂ ಇಂಡಿಯಾದ ಗೆಲುವನ್ನು ಮಗುವಿನಂತೆ ಕುಣಿದು ಸಂಭ್ರಮಿಸಿದ ಸುನಿಲ್ ಗವಾಸ್ಕರ್
ಭಾರತದ ಅದ್ಭುತ ಗೆಲುವಿನ ನಂತರ, ಪಾಕಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ ಪ್ರಮುಖ ಇನ್ನಿಂಗ್ಸ್ ಆಡಿದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಂದ್ಯದ ಹೀರೋ ವಿರಾಟ್ ಕೊಹ್ಲಿಯನ್ನು ಸಂದರ್ಶಿಸಿದರು. ಇಬ್ಬರ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪಂದ್ಯದ ಸಂಪೂರ್ಣ ಕಥೆ ಮತ್ತು ಭಾರತ ಹೇಗೆ ಗೆಲುವು ಸಾಧಿಸಿತು ಎಂಬುದರ ಕುರಿತು ಹೇಳಲಾಗಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 90 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 82 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ, ಈ ಗೆಲುವಿನ ನಂತರ, ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿರಾಟ್ ಕೊಹ್ಲಿಯನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ವಿರಾಟ್ ಈ ಪಂದ್ಯದ ಪರಿಸ್ಥಿತಿ ಮತ್ತು ಭಾರತ ಈ ಪಂದ್ಯವನ್ನು ಹೇಗೆ ಗೆದ್ದುಕೊಂಡಿತು ಎಂಬುದರ ಕುರಿತು ವಿವರಿಸಿದ್ದಾರೆ. ಈ ಪಂದ್ಯದಲ್ಲಿ ಹಾರ್ದಿಕ್ ಜತೆಗಿನ ಮಹತ್ವದ ಜೊತೆಯಾಟದ ಬಗ್ಗೆಯೂ ಮಾತನಾಡಿದ್ದಾರೆ.
ಸಂದರ್ಶನದ ವಿಡಿಯೋ ಇಲ್ಲಿದೆ: https://www.bcci.tv/videos/5557987/melbourne-magic-ft-virat-kohli--hardik-pandya
ಗವಾಸ್ಕರ್ ಸಂಭ್ರಮ:
ಭಾರತದ ಈ ವಿಜಯವನ್ನು ಆಚರಿಸಲು ಕೆಲವು ಮಾಜಿ ಭಾರತೀಯ ಹಿರಿಯ ಕ್ರಿಕೆಟಿಗರು ಮೆಲ್ಬೋರ್ನ್ ಕ್ರಿಕೆಟ್https://zeenews.india.com/kannada/entertainment/anushka-sharma-emotional-note-for-virat-kohli-india-vs-pakistan-99014 ಮೈದಾನದಲ್ಲಿ ಉಪಸ್ಥಿತರಿದ್ದರು. ಇರ್ಫಾನ್ ಪಠಾಣ್, ಸುನಿಲ್ ಗವಾಸ್ಕರ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಅವರಂತಹ ದಂತಕಥೆಗಳು ಭಾರತದ ಗೆಲುವಿನ ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಸಂಭ್ರಮದಿಂದ ಕ್ಷಣವನ್ನು ಆಚರಿಸಿದರು.
ಇದನ್ನೂ ಓದಿ: ಖೇಲೋ ಇಂಡಿಯಾ ಮಹಿಳಾ ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಅ. 27 ರಂದು ರಾಜ್ಯದ ಮಹಿಳಾ ತಂಡದ ಆಯ್ಕೆ
ಭಾರತದ ಈ ಗೆಲುವಿನ ನಂತರ ಎಲ್ಲಾ ಅನುಭವಿಗಳು ತಂಡವನ್ನು ಅಭಿನಂದಿಸಿದ್ದಾರೆ. 2007ರಲ್ಲಿ ಆಡಿದ ಮೊದಲ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಭಾರತ ತಂಡದ ಭಾಗವಾಗಿದ್ದ ಬಹುತೇಕ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ ಮತ್ತು ಹರ್ಭಜನ್ ಸಿಂಗ್ ಅವರಂತಹ ದಿಗ್ಗಜರು ಈ ಗೆಲುವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ