T20 World Cup 2024: 2024ನೇ ಸಾಲಿನ ಐಪಿಎಲ್‌ ಟೂರ್ನಿ ಮುಕ್ತಾಯವಾಗಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತೊಮ್ಮೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು. ಐಪಿಎಲ್‌ ಹಬ್ಬ ಮುಗಿದ ಬಳಿಕ ಇದೀಗ ಟಿ-20 ವಿಶ್ವಕಪ್‌ನ ರಂಗು ಶುರುವಾಗಲಿದೆ. ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದಲ್ಲಿ ಆಯೋಜಿಸಲಾಗಿರುವ ಈ ಚುಟುಕು ಸಮರಕ್ಕೆ ಭಾರತ ಸೇರಿದಂತೆ ಎಲ್ಲಾ ತಂಡಗಳು ಸಿದ್ಧಗೊಂಡಿವೆ. 


COMMERCIAL BREAK
SCROLL TO CONTINUE READING

ಜೂನ್‌ 1ರಿಂದ ಒಟ್ಟು 29 ದಿನಗಳ ಕಾಲ ನಡೆಯಲಿರುವ ಈ ಚುಟುಕು ಸಮರದಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿವೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಟೀಂ ಇಂಡಿಯಾ ಲೀಗ್‌ನ ತನ್ನ ಎಲ್ಲಾ 4 ಪಂದ್ಯಗಳನ್ನು ಆಡಲಿದೆ. ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ. ಟಿ-20 ವಿಶ್ವಕಪ್‌ನ ಟೀಂ ಇಂಡಿಯಾದ ವೇಳಾಪಟ್ಟಿ, ಪಂದ್ಯದ ಸಮಯ, ತಂಡದ ಆಟಗಾರರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...


ಇದನ್ನೂ ಓದಿ: T20 ವಿಶ್ವಕಪ್ 2024 ಪ್ರಾರಂಭಕ್ಕೆ ದಿನಗಣನೆ ಶುರು: ಭಾರತ ಸೇರಿ 20 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆ


T20 ವಿಶ್ವಕಪ್‌ಗೆ ಭಾರತ ತಂಡ  


ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ(ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.


ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.


T20 ವಿಶ್ವಕಪ್ 2024ಕ್ಕೆ ಟೀಂ ಇಂಡಿಯಾ ವೇಳಾಪಟ್ಟಿ


ದಿನಾಂಕ   ಪಂದ್ಯಗಳು ಸಮಯ  ಸ್ಥಳ
05-ಜೂನ್-24  ಭಾರತ vs ಐರ್ಲೆಂಡ್ 8:00 PM   ನ್ಯೂ ಯಾರ್ಕ್
09-ಜೂನ್-24  ಭಾರತ vs ಪಾಕಿಸ್ತಾನ  8:00 PM ನ್ಯೂ ಯಾರ್ಕ್
12-ಜೂನ್-24   USA vs ಭಾರತ 8:00 PM ನ್ಯೂ ಯಾರ್ಕ್
15-ಜೂನ್-24   ಭಾರತ vs ಕೆನಡಾ 8:00 PM ಫ್ಲೋರಿಡಾ

T20 ವಿಶ್ವಕಪ್ 2024 ತಂಡಗಳು


ಗುಂಪು A ಗುಂಪು B  ಗುಂಪು C   ಗುಂಪು D
ಕೆನಡಾ ಆಸ್ಟ್ರೇಲಿಯಾ ಅಫ್ಘಾನಿಸ್ತಾನ ಬಾಂಗ್ಲಾದೇಶ
ಭಾರತ ಇಂಗ್ಲೆಂಡ್ ನ್ಯೂಜಿಲ್ಯಾಂಡ್ ಶ್ರೀಲಂಕಾ
ಐರ್ಲೆಂಡ್ ನಮೀಬಿಯಾ ಪಪುವಾ ನ್ಯೂ ಗಿನಿಯಾ ನೆದರ್ಲ್ಯಾಂಡ್ಸ್
ಪಾಕಿಸ್ತಾನ  ಓಮನ್‌ ಉಗಾಂಡ   ದಕ್ಷಿಣ ಆಫ್ರಿಕಾ
ಯುಎಸ್‌ಎ ಸ್ಕಾಟ್ಲೆಂಡ್ ವೆಸ್ಟ್‌ ಇಂಡೀಸ್‌ ನೇಪಾಳ

ಇದನ್ನೂ ಓದಿ: ‘All Eyes on Rafah'- ಪ್ಯಾಲೆಸ್ತೀನ್ ಬೆಂಬಲಿಸಿ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ಪೋಸ್ಟ್ ಶೇರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.