‘All Eyes on Rafah'- ಪ್ಯಾಲೆಸ್ತೀನ್ ಬೆಂಬಲಿಸಿ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ಪೋಸ್ಟ್ ಶೇರ್

Ritika Sajdeh Post on Support Of Palestinians: ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ, ‘All Eyes on Rafah' ಎಂದು ಹೇಳಿತ್ತು. ಅಂದಹಾಗೆ ಗಾಜಾ ಪಟ್ಟಿಯ ದಕ್ಷಿಣದ ರಫಾ ಎಂಬಲ್ಲಿನ ಕ್ಯಾಂಪ್’​ಗಳ ಮೇಲೆ ಇಸ್ರೇಲ್ ಭಾನುವಾರ ಸಂಜೆ ಬಾಂಬ್ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ 45ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಲ್ಲದೆ, ಕೆಲವರು ಗಾಯಗೊಂಡಿದ್ದಾರೆ.

Written by - Bhavishya Shetty | Last Updated : May 28, 2024, 09:16 PM IST
    • ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ, ‘All Eyes on Rafah' ಎಂದು ಹೇಳಿತ್ತು
    • ರಫಾ ಎಂಬಲ್ಲಿನ ಕ್ಯಾಂಪ್’​ಗಳ ಮೇಲೆ ಇಸ್ರೇಲ್ ಭಾನುವಾರ ಸಂಜೆ ಬಾಂಬ್ ದಾಳಿ ನಡೆಸಿತ್ತು
    • ರಿತಿಕಾ ಸಜ್ದೇಹ್ ರಫಾದಲ್ಲಿ ವಾಸಿಸುವ ಜನರಿಗೆ ಬೆಂಬಲವನ್ನು ಸೂಚಿಸಿ ಪೋಸ್ಟ್ ಶೇರ್
‘All Eyes on Rafah'- ಪ್ಯಾಲೆಸ್ತೀನ್ ಬೆಂಬಲಿಸಿ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ಪೋಸ್ಟ್ ಶೇರ್ title=
Ritika Sajdeh Post on Support Of Palestinians

Ritika Sajdeh Post on Support Of Palestinians: ‘All Eyes on Rafah' ಎಂದರೆ ಎಲ್ಲರ ಕಣ್ಣುಗಳು ರಾಫಾ ಮೇಲೆ... ಗಾಜಾದಲ್ಲಿ ನೆಲೆಸಿರುವ ಪ್ಯಾಲೆಸ್ಟೀನಿಯನ್ನರ ಬೆಂಬಲಕ್ಕೆ ಪ್ರಪಂಚದಾದ್ಯಂತದ ಜನರು ನಿಂತಿದ್ದಾರೆ. ಇದೇ ಕಾರಣಕ್ಕೆ ಇಂದು ಬೆಳಗ್ಗೆ ವೇಳೆಗಾಗಲೇ ಈ ವಿಚಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌’ನಲ್ಲಿ ಭಾರೀ ಟ್ರೆಂಡಿಂಗ್ ಆಗಿತ್ತು.

ಇದನ್ನೂ ಓದಿ: ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ

ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ, ‘All Eyes on Rafah' ಎಂದು ಹೇಳಿತ್ತು. ಅಂದಹಾಗೆ ಗಾಜಾ ಪಟ್ಟಿಯ ದಕ್ಷಿಣದ ರಫಾ ಎಂಬಲ್ಲಿನ ಕ್ಯಾಂಪ್’​ಗಳ ಮೇಲೆ ಇಸ್ರೇಲ್ ಭಾನುವಾರ ಸಂಜೆ ಬಾಂಬ್ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ 45ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಲ್ಲದೆ, ಕೆಲವರು ಗಾಯಗೊಂಡಿದ್ದಾರೆ. ಅಂದಹಾಗೆ ಈ ಪ್ರದೇಶದಲ್ಲಿ 1.4 ಮಿಲಿಯನ್‌’ಗಿಂತಲೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಆಶ್ರಯ ಪಡೆಯುತ್ತಿದ್ದಾರೆ.

ಇವೆಲ್ಲದರ ನಡುವೆ, ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ರಫಾದಲ್ಲಿ ವಾಸಿಸುವ ಜನರಿಗೆ ಬೆಂಬಲವನ್ನು ಸೂಚಿಸಿ ಪೋಸ್ಟ್ ಶೇರ್ ಮಾಡಿದ್ದಾರೆ. ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ "ಎಲ್ಲರ ಕಣ್ಣು ರಫಾ ಮೇಲೆ" ಎಂದು ಪೋಸ್ಟ್ ಹಂಚಿಕೊಂಡಿದ್ದರು.

ಇದನ್ನೂ ಓದಿ: ಟೀಂ ಇಂಡಿಯಾಗೆ ಗೌತಮ್ ಗಂಭೀರ್ ಕೋಚ್! ಬಿಸಿಸಿಐ ಜೊತೆ ಒಪ್ಪಂದ ಅಂತಿಮ: ಘೋಷಣೆಯೊಂದೇ ಬಾಕಿ

ರಿತಿಕಾ ಸೋಷಿಯಲ್ ಮೀಡಿಯಾದಲ್ಲಿ ಪ್ಯಾಲೆಸ್ಟೀನಿಯಾದವರಿಗೆ ಬೆಂಬಲವಾಗಿ ನಿಂತಿದ್ದರೆ, ಅವರ ಪತಿ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಜೂನ್ 2 ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌’ನಲ್ಲಿ ಪ್ರಾರಂಭವಾಗುವ ಟಿ 20 ವಿಶ್ವಕಪ್‌’ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ. ರಿತಿಕಾ ಅಲ್ಲದೆ, ಬಾಲಿವುಡ್ ನಟಿಯರಾದ ಸ್ವರಾ ಭಾಸ್ಕರ್, ಗೌಹರ್ ಖಾನ್, ದಿಯಾ ಮಿರ್ಜಾ ಮತ್ತು ರಾಧಿಕಾ ಆಪ್ಟೆ ಕೂಡ ಇಸ್ರೇಲ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News