T20 World Cup 2024: ಪ್ರಸಕ್ತ ಸಾಲಿನ ಟಿ-20 ವಿಶ್ವಕಪ್‌ ಟೂರ್ನಿ ಹಲವಾರು ರೋಚಕತೆಗಳಿಗೆ ಸಾಕ್ಷಿಯಾಗಿದೆ. ಈ ಟೂರ್ನಿ ಹಲವಾರು ಅಚ್ಚರಿಯ ಫಲಿತಾಂಶಗಳನ್ನು ನೀಡಿದ್ದು, ಕ್ರಿಕೆಟ್‌ ಪ್ರೇಮಿಗಳಿಗೆ ಶಾಕ್‌ ನೀಡಿದೆ. ಕ್ರಿಕೆಟ್‌ ಶಿಶುಗಳ ಎದುರೇ ಬಲಿಷ್ಠ ತಂಡಗಳು ಮಣ್ಣುಮುಕ್ಕಿವೆ. ಇನ್ನೇನು ಗುಂಪು ಹಂತದ ಪಂದ್ಯಗಳು ಮುಗಿಯುತ್ತಿದ್ದು, ಸೂಪರ್‌-8ಕ್ಕೆ ಆರ್ಹತೆ ಪಡೆಯಲು ಕೆಲವು ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಈಗಾಗ  3ಕ್ಕೆ 3 ಪಂದ್ಯಗಳಲ್ಲಿ ಸೋಲು ಕಂಡಿರುವ ʼBʼ ಗುಂಪಿನಲ್ಲಿರುವ ಒಮನ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಇದೀಗ ಮತ್ತೊಂದು ವಿಶ್ವ ಚಾಂಪಿಯನ್ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಕ್ರಿಕೆಟ್‌ ಪಂಡಿತರ ಲೆಕ್ಕಚಾರಗಳ ಪ್ರಕಾರ ಈ ತಂಡಕ್ಕೆ ಸೂಪರ್-8 ತಲುಪಲು ಅಸಾಧ್ಯವಾಗಿದೆ. 2014ರಲ್ಲಿ ಭಾರತವನ್ನು ಸೋಲಿಸಿ ಟಿ-20 ವಿಶ್ವಕಪ್ ಗೆದ್ದಿದ್ದ ಶ್ರೀಲಂಕಾ ಈ ಬಾರಿ ಟೂರ್ನಿಯಿಂದ ಔಟ್‌ ಆಗಲಿದೆ. ʼDʼ ಗುಂಪಿನಲ್ಲಿರುವ ಈ ತಂಡವು ಸೂಪರ್-8 ತಲುಪುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ.


ಇದನ್ನೂ ಓದಿ: T20 World Cup 2024: ನ್ಯೂಜಿಲಾಂಡ್‌ ವಿರುದ್ಧ ಅಬ್ಬರಿಸಿದ ವೆಸ್ಟ್‌ ಇಂಡೀಸ್‌: ನ್ಯೂಜಿಲಾಂಡ್‌ಗೆ ಶುರುವಾಯ್ತು ಢವ ಢವ.


ಲಂಕಾಗೆ ವಿಲನ್‌ ಆದ ಮಳೆ!


3 ಪಂದ್ಯಗಳನ್ನು ಆಡಿರುವ ಮಾಜಿ ಚಾಂಪಿಯನ್ ಶ್ರೀಲಂಕಾ 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, 1 ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಕೇವಲ 1 ಅಂಕ ಹೊಂದಿರುವ ಲಂಕಾ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ ಸಹ ಸೂಪರ್‌-8 ತಲುಪುವುದು ಕಷ್ಟವಾಗಲಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಮತ್ತು ನೇಪಾಳ ನಡುವಿನ ಪಂದ್ಯ ಮಳೆಯಿಂದ ರದ್ದಾಯಿತು. ಪರಿಣಾಮ ಲಂಕಾ ಸೂಪರ್-8 ತಲುಪುವ ಆಸೆ ಬಹುತೇಕ ಅಂತ್ಯಗೊಂಡಿದೆ. ಈ ಗ್ರೂಪ್‌ನಲ್ಲಿ ನೆದರ್ಲೆಂಡ್ಸ್-ಬಾಂಗ್ಲಾದೇಶ ತಲಾ 2 ಅಂಕಗಳನ್ನು ಹೊಂದಿವೆ. ಉಭಯ ತಂಡಗಳ ನಡುವೆ ಪಂದ್ಯ ನಡೆಯಬೇಕಿದ್ದು, ಇದರಲ್ಲಿ ಯಾರೇ ಗೆದ್ದರೂ ಶ್ರೀಲಂಕಾವನ್ನು ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.


ಪಾಕಿಸ್ತಾನ, ಇಂಗ್ಲೆಂಡ್‌ & ನ್ಯೂಜಿಲ್ಯಾಂಡ್‌ಗೂ ಸಂಕಷ್ಟ!


ಈ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್‌ ತಂಡಗಳಿಗೆ ಬಹುದೊಡ್ಡ ಸಂಕಷ್ಟ ಎದುರಾಗಲಿವೆ. ಗ್ರೂಪ್‌ ʼAʼನಲ್ಲಿ 3ಕ್ಕೆ 3 ಪಂದ್ಯ ಗೆದ್ದಿರುವ ಟೀ ಇಂಡಿಯಾ ಸೂಪರ್‌ ೮ಕ್ಕೆ ಅರ್ಹತೆ ಪಡೆದುಕೊಂಡಿದೆ. ನಾಳೆ ಐರ್ಲೆಂಡ್‌ ವಿರುದ್ಧ ಅಮೆರಿಕ ಗೆಲುವು ಸಾಧಿಸಿದರೆ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗ್ರೂಪ್‌ ʼBʼನಲ್ಲಿ 3ಕ್ಕೆ 3 ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ತಂಡವು ಸೂಪರ್‌ 8ಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆದರೆ 2 ಪಂದ್ಯಗಳಲ್ಲಿ 1 ಸೋಲು ಅನುಭವಿಸಿರುವ ಇಂಗ್ಲೆಂಡ್‌ ಮುಂದಿನ 2 ಪಂದ್ಯಗಳಲ್ಲಿ ಹೆಚ್ಚಿನ ರನ್‌ರೇಟ್‌ ಮೂಲಕ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. 1 ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಆಂಗ್ಲರಿಗೆ ಸಂಕಷ್ಟವುಂಟಾಗಿದೆ. ಹೀಗಾಗಿ ಮುಂದಿನ 2 ಪಂದ್ಯಗಳಲ್ಲಿ ಹೆಚ್ಚಿನ ರನ್‌ರೇಟ್‌ ಮೂಲಕ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 


ಇದನ್ನೂ ಓದಿ: ಮಿಂಚಿದ ಅರ್ಶ್ದೀಪ್ ಸಿಂಗ್, ಸೂರ್ಯಕುಮಾರ್ ಯಾದವ್, ಯುಎಸ್ ವಿರುದ್ಧ ಟೀಮ್ ಇಂಡಿಯಾ ಗೆ 7 ವಿಕೆಟ್ ಗಳ ಜಯ 


ಇನ್ನು ಗ್ರೂಪ್‌ ʼCʼನಲ್ಲಿ 3ಕ್ಕೆ 3 ಗೆಲುವು ಸಾಧಿಸಿರುವ ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ ಅರ್ಹತೆ ಗಳಿಸಿದೆ. ಆದರೆ 2ಕ್ಕೆ 2 ಸೋಲು ಕಂಡಿರುವ ನ್ಯೂಜಿಲ್ಯಾಂಡ್‌ ತಂಡ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಆಡಿರುವ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಅಫ್ಘಾನಿಸ್ತಾನ ಬಾಕಿ ಇರುವ 2 ಪಂದ್ಯಗಳ ಪೈಕಿ 1ರಲ್ಲಿ ಗೆಲುವು ಸಾಧಿಸಿದರೆ ಸೂಪರ್‌ 8ಕ್ಕೆ ಅರ್ಹತೆ ಪಡೆಯಲಿದ್ದು, ಕಿವೀಸ್‌ ಅಧಿಕೃತವಾಗಿ ಔಟ್‌ ಆಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.