Harbhajan singh warning to Kamran Akmal: ಸಿಖ್ಖರಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಹರ್ಭಜನ್ ಸಿಂಗ್ ಕೋಪ ಮತ್ತೆ ಭುಗಿಲೆದ್ದಿದೆ. ಕಮ್ರಾನ್ ಅನ್ನು ನಿಷ್ಪ್ರಯೋಜಕ ಎಂದು ಕರೆದಿದ್ದಲ್ಲದೆ, ಆತನ ಹೇಳಿಕೆಯನ್ನು ಬಾಲಿಶ ಮತ್ತು ಅಸಂಬದ್ಧ ಎಂದು ಕರೆದಿದ್ದಾರೆ.
“ಇನ್ನು ಮುಂದೆ ಈ ರೀತಿ ಮಾಡಲು ಪ್ರಯತ್ನಿಸಬೇಡಿ. ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ” ಎಂದು ಹರ್ಭಜನ್ ಹೇಳಿದ್ದಾರೆ.
ಇದನ್ನೂ ಓದಿ: ಅನುಷ್ಕಾಗೂ ಮುನ್ನ ವಿರಾಟ್’ನ್ನು ಹುಚ್ಚರಂತೆ ಪ್ರೀತಿಸುತ್ತಿದ್ದಳು ಈ ನಟಿ! ಕೊಹ್ಲಿ ಸ್ಟೈಲ್’ಗೆ ಫಿದಾ ಆಗಿದ್ದ ಆಕೆ ಯಾರು ಗೊತ್ತಾ?
“ಈ ಹೇಳಿಕೆ ಅತ್ಯಂತ ಬಾಲಿಶ ಮತ್ತು ಬೇಜವಾಬ್ದಾರಿಯಾಗಿದೆ. ಒಬ್ಬ ಅಸಮರ್ಥ ವ್ಯಕ್ತಿ ಮಾತ್ರ ಇದನ್ನು ಮಾಡಬಹುದು. ಯಾರ ಧರ್ಮದ ಬಗ್ಗೆಯೂ ಮಾತನಾಡುವ ಅಥವಾ ಗೇಲಿ ಮಾಡುವ ಅಗತ್ಯವಿಲ್ಲ ಎಂಬುದನ್ನು ಕಮ್ರಾನ್ ಅಕ್ಮಲ್ ಅರ್ಥಮಾಡಿಕೊಳ್ಳಬೇಕು. ನಿಮಗೆ ಸಿಖ್ಖರ ಇತಿಹಾಸ ತಿಳಿದಿದೆಯೇ? ಸಿಖ್ಖರು ಯಾರು ಮತ್ತು ನಿಮ್ಮ ಸಮಾಜ, ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಉಳಿಸಲು ಅವರು ಏನು ಮಾಡಿದ್ದಾರೆ? ನಿಮ್ಮ ಪೂರ್ವಜರನ್ನು ಕೇಳಿ, ಸಿಖ್ಖರು ಮೊಘಲರ ಮೇಲೆ ದಾಳಿ ಮಾಡಿ ನಿಮ್ಮ ತಾಯಿ ಮತ್ತು ಸಹೋದರಿಯರನ್ನು ಮುಕ್ತಗೊಳಿಸುತ್ತಿದ್ದರು” ಎಂದಿದ್ದಾರೆ.
ಮತ್ತೆ ಪ್ರಯತ್ನಿಸಬೇಡ...
“ಅವರು ಕ್ಷಮೆಯಾಚಿಸುವುದು ಒಳ್ಳೆಯದು, ಅವರು ಬೇಗನೆ ಅರ್ಥಮಾಡಿಕೊಂಡರು, ಆದರೆ ಅವರು ಎಂದಿಗೂ ಯಾವುದೇ ಸಿಖ್ ಅಥವಾ ಯಾವುದೇ ಧರ್ಮವನ್ನು ನೋಯಿಸಲು ಪ್ರಯತ್ನಿಸಬಾರದು. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ, ಅದು ಹಿಂದೂ ಧರ್ಮ, ಇಸ್ಲಾಂ, ಸಿಖ್ ಅಥವಾ ಕ್ರಿಶ್ಚಿಯನ್. ಒಬ್ಬರಿಗೊಬ್ಬರು ಧರ್ಮವನ್ನು ಗೌರವಿಸುವುದು ಹೇಗೆ ಎಂದು ನಮಗೆಲ್ಲರಿಗೂ ತಿಳಿದಿದ್ದರೆ, ಈ ಎಲ್ಲಾ ಸಮಸ್ಯೆಗಳು ಯಾರನ್ನೂ ಪ್ರಚೋದಿಸುವ ಅಗತ್ಯವಿಲ್ಲ, ಯಾರಿಗೂ ಬೆಂಕಿ ಹಚ್ಚುವ ಅಗತ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಸಹಾಯಕ ನಿರ್ದೇಶಕನಾಗಿ ಕೇವಲ 3000 ರೂ. ಸಂಭಾವನೆ ಪಡೆಯುತ್ತಿದ್ದ ಈ ನಟ ಸಧ್ಯ ಕೋಟ್ಯಾಧಿಪತಿ.! ಯಾರದು..?
ಅಕ್ಮಲ್ ಹೇಳಿದ್ದೇನು?
ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಕಮ್ರಾನ್ ಅಕ್ಮಲ್ ಅವರ ವೀಡಿಯೊ ವೈರಲ್ ಆಗಿತ್ತು. ಇದರಲ್ಲಿ ಅವರು ಭಾರತೀಯ ವೇಗಿ ಅರ್ಷ್‌ದೀಪ್ ಸಿಂಗ್ ಅವರನ್ನು ಕೆಣಕುವುದು ಕಂಡುಬಂದಿತ್ತು. “ಏನಾದರೂ ಆಗಬಹುದು... ಕೊನೆಯ ಓವರ್ ಅನ್ನು ಅರ್ಷ್‌ದೀಪ್ ಸಿಂಗ್ ಬೌಲ್ ಮಾಡಿದ್ದಾರೆ. ಸರಿ, ಅವನಿಗೆ ಲಯ ಸಿಗಲಿಲ್ಲ” ಎಂದು ಹೇಳಿದ್ದರು. ಈ ವಿಡಿಯೋಗೆ ಸಂಬಂಧಿಸಿದಂತೆ ಹರ್ಭಜನ್ ಸಿಂಗ್ ಪೋಸ್ಟ್ ಬರೆದು ಕಮ್ರಾನ್ ಅವರನ್ನು ನಿಂದಿಸಿದ್ದರು. ಕೊನೆಯ ಓವರ್’ನಲ್ಲಿ 18 ರನ್‌ಗಳನ್ನು ಡಿಫೆಂಡ್ ಮಾಡುವ ಮೂಲಕ ಅರ್ಶದೀಪ್ ಸಿಂಗ್ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಗೆದ್ದರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ