T20 World Cup 2024 : ಟೀಂ ಇಂಡಿಯಾ T20 ವಿಶ್ವಕಪ್ ಪ್ರೋಮೋ ನೋಡಿದ್ದೀರಾ..? ಗೂಸ್‌ಬಂಪ್ಸ್ ಬರೋದು ಫಿಕ್ಸ್!
T20 World Cup 2024 Promo: T20 ವಿಶ್ವಕಪ್ 2024 IPL ನ 17 ನೇ ಋತುವಿನ ಅಂತ್ಯದ ಒಂದು ವಾರದೊಳಗೆ ಪ್ರಾರಂಭವಾಗುತ್ತದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ.
T20 World Cup 2024: T20 ವಿಶ್ವಕಪ್ 2024 ರ ಮೊದಲ ಪಂದ್ಯ ಜೂನ್ 1 ರಂದು ಯುಎಸ್ಎ ಮತ್ತು ಕೆನಡಾ ನಡುವೆ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕೆ ಇಳಿಯಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತ ಮತ್ತು ಐರ್ಲೆಂಡ್ ಪಂದ್ಯಕ್ಕೆ ನ್ಯೂಯಾರ್ಕ್ ವೇದಿಕೆಯಾಗಲಿದೆ.
ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಟಿ20 ವಿಶ್ವಕಪ್ ನೇರ ಪ್ರಸಾರವಾಗಲಿದೆ. ಈ ಹಿನ್ನಲೆಯಲ್ಲಿ ಭಾರತ ತಂಡಕ್ಕೆ ವಿಶೇಷ ಪ್ರೋಮೋ ವಿಡಿಯೋ ಬಿಡುಗಡೆ ಮಾಡಿದ್ದು... ಸುಮಾರು 30 ಸೆಕೆಂಡ್ ಗಳ ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳಿಗೆ ಗೂಸ್‌ಬಂಪ್ಸ್ ಬರುವಂತೆ ಮಾಡಿದೆ.. ಸದ್ಯ ಈ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಟೀಂ ಇಂಡಿಯಾ ವಿಶ್ವಕಪ್‌ಗೆ ಸಿದ್ಧವಾಗಿದೆ ಎಂಬ ಟೈಟಲ್‌ನೊಂದಿಗೆ ಪೋಸ್ಟ್ ಮಾಡಿದೆ..
Virat Kohli: ಫೀಲ್ಡ್ ಅಂಪೈರ್‌ಗಳೊಂದಿಗೆ ವಾದ; ಕೊಹ್ಲಿ ವಿರುದ್ಧ ಬಿಸಿಸಿಐ ಕ್ರಮ!?
ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿರುವ 20 ತಂಡಗಳಿವು..
ಅಮೆರಿಕ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ , ಕೆನಡಾ, ನೇಪಾಳ, ಓಮನ್, ನಮೀಬಿಯಾ, ಉಗಾಂಡಾ
ಯಾವ ತಂಡಗಳು ಯಾವ ಗುಂಪಿನಲ್ಲಿವೆ?
ಗ್ರೂಪ್ ಎ - ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಅಮೆರಿಕ
ಗ್ರೂಪ್ ಬಿ - ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್
ಗ್ರೂಪ್ ಸಿ - ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡಾ, ಪಪುವಾ ನ್ಯೂಗಿನಿಯಾ
ಗ್ರೂಪ್ ಡಿ - ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ , ನೆದರ್ಲ್ಯಾಂಡ್ಸ್, ನೇಪಾಳ
ಟೀಂ ಇಂಡಿಯಾದ ವೇಳಾಪಟ್ಟಿ ಹೀಗಿದೆ..
ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ
ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನ ವಿರುದ್ಧ
ಜೂನ್ 12 ರಂದು ನ್ಯೂಯಾರ್ಕ್‌ನಲ್ಲಿ ಯುಎಸ್‌ಎ ವಿರುದ್ಧ
ಜೂನ್ 15 ರಂದು ಫ್ಲೋರಿಡಾದಲ್ಲಿ ಕೆನಡಾ ವಿರುದ್ಧ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.