T20 World Cup 2024 Schedule India vs Pakistan: ಏಕದಿನ ವಿಶ್ವಕಪ್ ಬಳಿಕ ಇದೀಗ T20 ವಿಶ್ವಕಪ್‌’ನತ್ತ ಎಲ್ಲರ ಚಿತ್ತ ನೆಟ್ಟಿದೆ. ಮುಂಬರುವ ಟಿ20 ವಿಶ್ವಕಪ್‌’ಗೆ ಇನ್ನೂ ಕೆಲವು ತಿಂಗಳುಗಳು ಉಳಿದಿವೆ. ಆದರೆ ಪಂದ್ಯಾವಳಿಯ ಅತಿದೊಡ್ಡ ಪಂದ್ಯದ ದಿನಾಂಕವನ್ನು ಬಹಿರಂಗಪಡಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ;  ದಿನೇ ದಿನೇ ಕುಸಿಯುತ್ತಿದೆ ತಾಪಾಮಾನ : ಈ ಭಾಗಗಳಲ್ಲಿ ಅರೆಂಜ್ ಅಲರ್ಟ್ ಜಾರಿ 


ವರದಿ ಪ್ರಕಾರ ಭಾರತ ತಂಡ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಅಭಿಯಾನ ಆರಂಭಿಸಿದರೆ, ಜೂನ್ 9 ರಂದು ಪಾಕಿಸ್ತಾನದೊಂದಿಗೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.


ಐಸಿಸಿಯ ದೊಡ್ಡ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಹಣಾಹಣಿಗಾಗಿ ಕ್ರಿಕೆಟ್ ಅಭಿಮಾನಿಗಳು ಯಾವಾಗಲೂ ಕಾಯುತ್ತಿರುತ್ತಾರೆ. ಇತ್ತೀಚೆಗೆ ಎರಡೂ ತಂಡಗಳು ವಿಶ್ವಕಪ್ 2023 ರ ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಭಾರತದ ವಿರುದ್ಧ ಪಾಕ್ ಹೀನಾಯವಾಗಿ ಸೋತಿತ್ತು.


ಟಿ20 ವಿಶ್ವಕಪ್‌’ನಲ್ಲಿ ಭಾರತ ತಂಡದ ವೇಳಾಪಟ್ಟಿ:


ಜೂನ್ 5 - ಐರ್ಲೆಂಡ್ ವಿರುದ್ಧ ಭಾರತ - ನ್ಯೂಯಾರ್ಕ್


ಜೂನ್ 9 - ಪಾಕಿಸ್ತಾನ ವಿರುದ್ಧ ಭಾರತ - ನ್ಯೂಯಾರ್ಕ್


ಜೂನ್ 12 - ಯುಎಸ್ ವಿರುದ್ಧ ಭಾರತ - ನ್ಯೂಯಾರ್ಕ್


ಜೂನ್ 15 - ಕೆನಡಾ ವಿರುದ್ಧ ಭಾರತ - ಫ್ಲೋರಿಡಾ


ಜೂನ್ 20 - ನ್ಯೂಜಿಲೆಂಡ್ ವಿರುದ್ಧ ಭಾರತ - ಬಾರ್ಬಡೋಸ್


ಜೂನ್ 22 - ಶ್ರೀಲಂಕಾ ವಿರುದ್ಧ ಭಾರತ - ಆಂಟಿಗುವಾ


ಜೂನ್ 24 - ಆಸ್ಟ್ರೇಲಿಯಾ ವಿರುದ್ಧ ಭಾರತ - ಸೇಂಟ್ ಲೂಸಿಯಾ


ಇದನ್ನೂ ಓದಿ; ರಾಮಮಂದಿರ ಲೋಕಾರ್ಪಣೆ ದಿನ ಅಯೋಧ್ಯೆಯಲ್ಲಿ ಬಿಗಿ ಭದ್ರತೆ


ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಎಲ್ಲಿ ನಡೆಯಲಿವೆ?


ಲೀಗ್ ಹಂತದ ನಂತರ ನಾಕೌಟ್ ಪಂದ್ಯಗಳು ಆರಂಭವಾಗಲಿವೆ. ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಜೂನ್ 26 ರಂದು ಗಯಾನಾದಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ ಜೂನ್ 28 ರಂದು ಟ್ರಿನಿಡಾಡ್‌ನಲ್ಲಿ ನಡೆಯಲಿದೆ. ಮೊದಲ ಮತ್ತು ಎರಡನೇ ಸೆಮಿಫೈನಲ್ ಪಂದ್ಯಗಳನ್ನು ಗೆಲ್ಲುವ ತಂಡಗಳು ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.