T20 World Cup 2024: ನ್ಯೂಜಿಲಾಂಡ್ ವಿರುದ್ಧ ಅಬ್ಬರಿಸಿದ ವೆಸ್ಟ್ ಇಂಡೀಸ್: ನ್ಯೂಜಿಲಾಂಡ್ಗೆ ಶುರುವಾಯ್ತು ಢವ ಢವ.
T20 World Cup 2024: ಟಿ 20 ವಿಶ್ವಕಪ್ 2024 ರ `ಸಿ` ಗುಂಪಿನ ಪಂದ್ಯದಲ್ಲಿ ನ್ಯೂಜಿಲಾಂಡ್ ತಂಡದ ವಿರುದ್ದ ವೆಸ್ಟ್ ಇಂಡೀಸ್ ತಂಡ ಗೆಲುವಿನ ನಗೆ ಬೀರಿದೆ.
NZ vs WI: ಟಿ 20 ವಿಶ್ವಕಪ್ 2024 ರ 'ಸಿ' ಗುಂಪಿನ ಪಂದ್ಯದಲ್ಲಿ ನ್ಯೂಜಿಲಾಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಕಿಯಾಗಿದ್ದವು. ಬಲಿಷ್ಠ ನ್ಯೂಜಿಲಾಂಡ್ ತಂಡವನ್ನು ವೆಸ್ಟ್ ಇಂಡೀಸ್ ಪಡೆ ಮಣಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯ ಗೆಲ್ಲುವ ಮೂಲಕಇಂಡೀಸ್ ಪಡೆ ಸತತ ಮೂರು ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಕೇನ್ ವಿಲಿಯಮ್ಸನ್ ಪಡೆ ಒಳ್ಳೆಯ ಬೌಲಿಂಗ್ ಪ್ರದರ್ಶಿಸಿತ್ತು. 20 ಓವರ್‌ಗಳ ಆಟವಾಡಿದ ವೆಸ್ಟ್ ಇಂಡೀಸ್ 149 ರನ್ ಕಲೆಹಾಕಿತ್ತು. 150 ರನ್‌ಗಳ ಟಾರ್ಗೆಟ್ ಬೆನ್ನಟ್ಟುದ್ದ ಕೇನ್ ಪಡೆ 20 ಓವರ್‌ಗಳಲ್ಲಿ ಕೇವಲ 136 ರನ್ ಗಳಿಸಿ ಎದುರಾಳಿ ತಂಡದ ವಿರುದ್ಧ ಮಂಡಿಯೂರಿತು.
ಇದನ್ನೂ ಓದಿ: ಮಿಂಚಿದ ಅರ್ಶ್ದೀಪ್ ಸಿಂಗ್, ಸೂರ್ಯಕುಮಾರ್ ಯಾದವ್, ಯುಎಸ್ ವಿರುದ್ಧ ಟೀಮ್ ಇಂಡಿಯಾ ಗೆ 7 ವಿಕೆಟ್ ಗಳ ಜಯ
ನ್ಯೂಜಿಲಾಂಡ್ ತಂಡವನ್ನ ಮಣಿಸಿ ಈ ಪಂದ್ಯ ಗೆಲ್ಲುವ ಮೂಲಕ ವಿಂಡೀಸ್ ಪಡೆ ಸೂಪರ್ 8 ಕ್ಕೆ ಎಂಟ್ರಿ ಕೊಟ್ಟಿದ್ದರೆ ಮತ್ತೊಂದೆಡೆ ಈ ವೆರೆಗೂ ಆಡಿರುವ ಎರಡೂ ಪಂದ್ಯಗಳ್ಲಲಿ ಸೋತು ನ್ಯೂಜಿಲಾಂಡ್ ಟೂರ್ನಿಯಿಂದ ಹೊರ ಬೀಳುವ ಸಂಕಷ್ಟದಲ್ಲಿದೆ.
ಕ್ರಿಸ್ ಹಾಗೂ ಶೆರ್ಫೇನ್ ಜೊತೆ ಆಟವಾಡಿ 68 ನ್ ಕಲೆಹಾಕಿದರು ಇವರಿಬ್ಬರ ಆಟದಿಂದ ವಿಂಡೀಸ್ 149 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಬ್ಯಾಟಿಂಗ್‌ನಲ್ಲಷ್ಟೆ ಅಲ್ಲದೆ ವಿಂಡೀಸ್ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಜಾರಿ 4 ವಿಕೆಟ್ ಕಬಳಿಸಿದ್ರೆ, ಗುಡಾಕೇಶ್ ಮೋತಿ 3 ವಿಕೆಟ್ ಪಡೆದರು. ಇನ್ನೂ ಅಕೇಲ್ ಹೊಸೈನ್ ಹಾಗೂ ಆಂಡ್ರೆ ರಸೆಲ್ ತಲಾ ಒಂದು ವಿಕೆಟ್ ಪಡೆದು ನ್ಯೂಜಿಲೆಂಡ್ ಬ್ಯಾಟರ್‌ಗಳ ಬೆವರಿಳಿಸಿದರು.
ಇದನ್ನೂ ಓದಿ: Jasprit Bumrah Net Worth : ಕ್ರಿಕೆಟ್‌ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?
ಪ್ಲೇಯಿಂಗ್-11
ನ್ಯೂಜಿಲೆಂಡ್ ಪ್ಲೇಯಿಂಗ್-11
ಕೇನ್ ವಿಲಿಯಮ್ಸನ್, ಫಿಲಿಪ್ಸ್, ರಚಿನ್ ರವೀಂದ್ರ, ಡೆವೊನ್ ಕಾನ್ವೇ, ಫಿನ್ ಅಲೆನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗುಸನ್.
ವೆಸ್ಟ್ ಇಂಡೀಸ್ ಪ್ಲೇಯಿಂಗ್-11
ರೋವ್‌ಮನ್ ಪೊವೆಲ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಅಲ್ಜಾರಿ ಜೋಸೆಫ್, ಗುಡಾಕೇಶ್ ಮೋಟಿ, ಶೆರ್ಫೇನ್ ರುದರ್‌ಫೋರ್ಡ್, ಆಂಡ್ರೆ ರಸೆಲ್, ಅಕೇಲ್ ಹೊಸೈನ್,ರೊಮಾರಿಯೋ ಶೆಫರ್ಡ್.