T-20 World Cup 2021: ಭಾನುವಾರ ದುಬೈನಲ್ಲಿ ನಡೆದ T20 ವಿಶ್ವಕಪ್ 2021 ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ (Australia) ತಂಡವು ನ್ಯೂಜಿಲೆಂಡ್ (New Zealand) ಅನ್ನು ಸೋಲಿಸಿದೆ. ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ತಂಡವು ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಹೀಗಿರುವಾಗ ಆಸ್ಟ್ರೇಲಿಯಾ ತಂಡ ಈ ವಿಶೇಷ ಗೆಲುವನ್ನು ಸಂಭ್ರಮದಿಂದ ಆಚರಿಸಿದೆ. ಈ ವೇಳೆ ತಂಡದ ವಿಶೇಷ ಸಂಭ್ರಮವೂ ಕಂಡು ಬಂತು. ಇದರಲ್ಲಿ ತಂಡದ (Cricket)ಕೆಲ ಸದಸ್ಯರು ಶೂ ಹಾಕಿಕೊಂಡು ಬಿಯರ್ ಕುಡಿಯುತ್ತಿರುವುದು ಕಂಡು ಬಂದಿದೆ. ಈ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಏನಿದೆ ಎಂದು ನೋಡೋಣ ಬನ್ನಿ.


COMMERCIAL BREAK
SCROLL TO CONTINUE READING

ಮ್ಯಾಥ್ಯೂ ವೇಡ್ (Matthew Wade) ಅವರಿಂದ ಆರಂಭವಾಯ್ತು
ಈ ವಿಡಿಯೋದಲ್ಲಿ ಮ್ಯಾಥ್ಯೂ ವೇಡ್ ಮೊದಲುತನ್ನ  ಶೂ ಕಳಚಿ ಅದರಲ್ಲಿ ಬಿಯರ್ ಸುರಿದು ಕುಡಿಯಲು ಆರಂಭಿಸಿದ್ದಾರೆ. ಅಷ್ಟರಲ್ಲಿ ಮಾರ್ಕಸ್ ಸ್ಟೊಯಿನಿಸ್ (Marcus Stoinis) ಕೂಡ ಅವರ ಬಳಿಗೆ ಬಂದು ಅವನಿಂದ ಶೂ ತೆಗೆದುಕೊಳ್ಳುತ್ತಾರೆ. ಈಗ ಸ್ಟೊಯಿನಿಸ್ ಆ ಶೂಗೆ ಬಿಯರ್ ಹಾಕಿಕೊಂಡು ಕುಡಿಯಲು ಆರಂಭಿಸುತ್ತಾರೆ. ನಂತರ ತಂಡದ ಇತರ ಸದಸ್ಯರು ಕೂಡ ಈ ಆಚರಣೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಶೂ ಕಳಚಲು ಆರಂಭಿಸುತ್ತಾರೆ. 


ಇದನ್ನೂ ಓದಿ-India vs New Zealand: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾದಲ್ಲಿ ಅಪಾಯಕಾರಿ ಬೌಲರ್‌ನ ಪ್ರವೇಶ


IPL 2022: ಈ ಆಲ್ ರೌಂಡರ್ ಐಪಿಎಲ್ ಮೆಗಾ ಹರಾಜಿನಲ್ಲಿ ಅತಿಹೆಚ್ಚು ಮೌಲ್ಯಕ್ಕೆ ಬಿಡ್ ಆಗುತ್ತಾರೆಯೇ?


ಏನಿದು Shoey Celebration?
ಪಾದರಕ್ಷೆಯಲ್ಲಿ ಕುಡಿಯುವುದನ್ನು ಐತಿಹಾಸಿಕವಾಗಿ ಅದೃಷ್ಟವನ್ನು ತರುವುದು ಅಥವಾ ಹಿಂಸೆ ಮುಕ್ತಿ ಅಥವಾ ಪಾರ್ಟಿಯ ರೂಪವೆಂದು ಪರಿಗಣಿಸಲಾಗಿದೆ. ಮಹಿಳೆಯರ ಚಪ್ಪಲಿಯಿಂದ ಶಾಂಪೇನ್ ಕುಡಿಯುವುದು 20 ನೇ ಶತಮಾನದ ಆರಂಭದಲ್ಲಿ ಅವನತಿಗೆ ಕಾರಣವೆಂದು ಪರಿಗಣಿಸಲಾಗಿದೆ. ಇದು ಇನ್ನೂ ಆಸ್ಟ್ರೇಲಿಯಾದಲ್ಲಿ ಜನಪ್ರಿಯವಾಗಿದೆ. ಇಲ್ಲಿ ಇದನ್ನು Shoey Celebration ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ-2024 ರ ಐಸಿಸಿ ಟಿ20 ವಿಶ್ವಕಪ್ ಆತಿಥ್ಯಕ್ಕೆ ಯುಎಸ್ ಆಯ್ಕೆ ಸಾಧ್ಯತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ