India vs New Zealand: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾದಲ್ಲಿ ಅಪಾಯಕಾರಿ ಬೌಲರ್‌ನ ಪ್ರವೇಶ

India vs New Zealand: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾದಲ್ಲಿ ಅಪಾಯಕಾರಿ ವೇಗದ ಬೌಲರ್ ಪ್ರವೇಶಿಸಿದ್ದಾರೆ. ಈ ವೇಗದ ಬೌಲರ್ ಎಷ್ಟು ಮಾರಕ ಎಂದರೆ, ಶೀಘ್ರದಲ್ಲೇ ಅದು ಭಾರತದ T20 ತಂಡದಿಂದ ಮೊಹಮ್ಮದ್ ಶಮಿಯಂತಹ ಬೌಲರ್‌ನ ಕಾರ್ಡ್ ಅನ್ನು ಕತ್ತರಿಸಬಹುದು. ನವೆಂಬರ್ 17ರಿಂದ ಟಿ20 ಸರಣಿ ಆರಂಭವಾಗಲಿದ್ದು, ನವೆಂಬರ್ 21ರವರೆಗೆ ನಡೆಯಲಿದೆ.

Written by - Yashaswini V | Last Updated : Nov 15, 2021, 12:44 PM IST
  • ಟೀಂ ಇಂಡಿಯಾದಲ್ಲಿ ಈ ಅಪಾಯಕಾರಿ ಬೌಲರ್ ಎಂಟ್ರಿ
  • ಅವರು ಅತ್ಯುತ್ತಮ ವೇಗದ ಬೌಲರ್
  • ಟಿ20 ಸರಣಿ ನವೆಂಬರ್ 17 ರಿಂದ ಆರಂಭವಾಗಲಿದೆ
India vs New Zealand: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾದಲ್ಲಿ ಅಪಾಯಕಾರಿ ಬೌಲರ್‌ನ ಪ್ರವೇಶ title=
Mohammed Siraj

India vs New Zealand: ನವೆಂಬರ್ 17ರಿಂದ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ನವೆಂಬರ್ 17ರಿಂದ ಟಿ20 ಸರಣಿ ಆರಂಭವಾಗಲಿದ್ದು, ನವೆಂಬರ್ 21ರವರೆಗೆ ನಡೆಯಲಿದೆ. 2021 ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತವನ್ನು ಪಂದ್ಯಾವಳಿಯಿಂದ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯೂಜಿಲೆಂಡ್ ಅದೇ ತಂಡ ಈಗ ಈ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಸೆಣಸಲಿದೆ.

ಇದೀಗ ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಟಿ20 ವಿಶ್ವಕಪ್ ಸೋಲಿನ ನೋವನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಲು ಟೀಂ ಇಂಡಿಯಾ (Team India) ಪ್ರಯತ್ನಿಸಲಿದೆ. 

ಟೀಂ ಇಂಡಿಯಾದಲ್ಲಿ ಈ ಅಪಾಯಕಾರಿ ಬೌಲರ್ ಎಂಟ್ರಿ:
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾದಲ್ಲಿ ಅಪಾಯಕಾರಿ ವೇಗದ ಬೌಲರ್ ಪ್ರವೇಶಿಸಿದ್ದಾರೆ. ಈ ವೇಗದ ಬೌಲರ್ ಎಷ್ಟು ಮಾರಕವಾಗಿದ್ದಾರೆ ಎಂದರೆ, ಶೀಘ್ರದಲ್ಲೇ ಅವರು ಭಾರತದ T20 ತಂಡದಿಂದ ಮೊಹಮ್ಮದ್ ಶಮಿಯಂತಹ ಬೌಲರ್‌ನ ಕಾರ್ಡ್ ಅನ್ನು ಕತ್ತರಿಸಬಹುದು ಎಂದು ಹೇಳಲಾಗುತ್ತಿದೆ. ಈ ವೇಗದ ಬೌಲರ್ ಬೇರೆ ಯಾರೂ ಅಲ್ಲ ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ (Mohammed Siraj). ಕೆಲ ಸಮಯದಿಂದ ಮೊಹಮ್ಮದ್ ಸಿರಾಜ್ ಉತ್ತಮ ಲಯದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ ಸತತವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತಗಳನ್ನು ಮಾಡುತ್ತಿದ್ದಾರೆ, ಇದರ ಹೊರತಾಗಿ ಆಯ್ಕೆದಾರರು ಅವರನ್ನು ಟಿ 20 ಸ್ವರೂಪಕ್ಕೆ ತರುವ ಮೂಲಕ ದೊಡ್ಡ ಮತ್ತು ಉತ್ತಮ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ- 2024 ರ ಐಸಿಸಿ ಟಿ20 ವಿಶ್ವಕಪ್ ಆತಿಥ್ಯಕ್ಕೆ ಯುಎಸ್ ಆಯ್ಕೆ ಸಾಧ್ಯತೆ

ಅತ್ಯುತ್ತಮ ವೇಗದ ಬೌಲರ್ :
ಮೊಹಮ್ಮದ್ ಸಿರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಸಿರಾಜ್ ಕೆಲವು ಸಮಯದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2021ರಲ್ಲೂ ಮೊಹಮ್ಮದ್ ಸಿರಾಜ್ ಉತ್ತಮ ಬೌಲಿಂಗ್ ಮಾಡಿದ್ದರು. ಅವರು ಐಪಿಎಲ್ 2021 ರಲ್ಲಿ 11 ವಿಕೆಟ್ಗಳನ್ನು ಪಡೆದರು. ಸಿರಾಜ್ ಐಪಿಎಲ್ ನಲ್ಲಿ ಇದುವರೆಗೆ ಒಟ್ಟು 50 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 28.74ರ ಸರಾಸರಿಯಲ್ಲಿ 50 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ಸಿರಾಜ್ ಅವರ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶವೆಂದರೆ 4/32. 

ಇದನ್ನೂ ಓದಿ- IPL 2022: ಈ ಆಲ್ ರೌಂಡರ್ ಐಪಿಎಲ್ ಮೆಗಾ ಹರಾಜಿನಲ್ಲಿ ಅತಿಹೆಚ್ಚು ಮೌಲ್ಯಕ್ಕೆ ಬಿಡ್ ಆಗುತ್ತಾರೆಯೇ?

ಭಾರತ vs ನ್ಯೂಜಿಲೆಂಡ್ ಸರಣಿ ಪೂರ್ಣ ವೇಳಾಪಟ್ಟಿ:

3 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿ

1. ಮೊದಲ T20 ಅಂತರಾಷ್ಟ್ರೀಯ ಪಂದ್ಯ - 17 ನವೆಂಬರ್ 2021 - ಜೈಪುರ - ಸಂಜೆ 7 ಗಂಟೆ

2. ಎರಡನೇ T20 ಅಂತರಾಷ್ಟ್ರೀಯ ಪಂದ್ಯ - 19 ನವೆಂಬರ್ 2021 - ರಾಂಚಿ - ಸಂಜೆ 7 ಗಂಟೆ

3. ಮೂರನೇ T20 ಅಂತರಾಷ್ಟ್ರೀಯ ಪಂದ್ಯ - 21 ನವೆಂಬರ್ 2021 - ಕೋಲ್ಕತ್ತಾ - ಸಂಜೆ 7 ಗಂಟೆ

2 ಪಂದ್ಯಗಳ ಟೆಸ್ಟ್ ಸರಣಿ
* ಮೊದಲ ಟೆಸ್ಟ್ ಪಂದ್ಯ - 25-29 ನವೆಂಬರ್ 2021 - ಕಾನ್ಪುರ - ಬೆಳಗ್ಗೆ 9:30

* 2ನೇ ಟೆಸ್ಟ್ ಪಂದ್ಯ - 3-7 ಡಿಸೆಂಬರ್ 2021 - ಮುಂಬೈ - ಬೆಳಗ್ಗೆ 9:30 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News