T20 World Cup 2024 squad: 2022 ರ T20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನಂತರ ರೋಹಿತ್ ಶರ್ಮಾ ಒಂದೇ ಒಂದು ಅಂತರರಾಷ್ಟ್ರೀಯ ಟಿ20 ಪಂದ್ಯವನ್ನು ಸಹ ಆಡಿಲ್ಲ. ರೋಹಿತ್ ಶರ್ಮಾ ಟೀಂ ಇಂಡಿಯಾಗೆ ಎರಡನೇ ಟ್ರೋಫಿ ತಂದು ಕೊಡುವ ಗುರಿ ಇಟ್ಟುಕೊಂಡಿದ್ದಾರೆ. ಇತ್ತ 2022ರ ವಿಶ್ವಕಪ್ ನಂತರ ಕಿಂಗ್‌ ವಿರಾಟ್ ಕೊಹ್ಲಿ ಸಹ ಒಂದೇ ಒಂದು ಅಂತರರಾಷ್ಟ್ರೀಯ T20 ಆಡಿಲ್ಲ. ಈ ಇಬ್ಬರು ಸ್ಟಾರ್ ಬ್ಯಾಟರ್‌ಗಳು 2024ರ ಪಂದ್ಯಾವಳಿಗೆ ಮರಳುತ್ತಾರೆಯೇ ಎಂದು ಕಾದು ನೋಡಬೇಕಿದೆ. 


COMMERCIAL BREAK
SCROLL TO CONTINUE READING

ಇನ್ನೂ ಟಿ 20 ವಿಶ್ವಕಪ್‌ಗೆ ಡಿಸೆಂಬರ್ 2022 ರಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕ್ರಿಕೆಟ್‌ನಿಂದ ದೂರ ಉಳಿದಿರುವ ರಿಷಬ್ ಪಂತ್ ತಂಡಕ್ಕೆ ಮರಳುವ ನೀರಿಕ್ಷೆ ಇದೆ. ಈ ವರ್ಷದ ಐಪಿಎಲ್ ಗೆ ಪಂತ್ ದೆಹಲಿ ಕ್ಯಾಪಿಟಲ್ಸ್‌ಗೆ ಆಡಬಹುದು ಎಂಬ ವರದಿಗಳಿವೆ. 


ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಅಫ್ಘಾನ್‌ ತಂಡ ಪ್ರಕಟ


ಪಂತ್ ಅಲಭ್ಯರಾದರೇ ಇಶಾನ್‌ ಕಿಶನ್ ನಂತರ ಭಾರತದ ಎರಡನೇ ಆಯ್ಕೆಯಾಗಿದ್ದಾರೆ. ಕೀಪರ್-ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ವಿಶ್ವಕಪ್ ತಂಡದಿಂದ ಹೊರಗುಳಿಯಬಹುದಾಗಿದೆ. ಐರ್ಲೆಂಡ್ ಪ್ರವಾಸದ ನಂತರ ಯಾವುದೇ T20 ಸರಣಿ ಆಡದ ಸಂಜು ಸ್ಯಾಮ್ಸನ್ ಸಹ T20 ವಿಶ್ವಕಪ್ 2024 ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.


ಭಾರತ ಸಂಭಾವ್ಯ ಟಿ20 ವಿಶ್ವಕಪ್‌ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.