ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಅಫ್ಘಾನ್‌ ತಂಡ ಪ್ರಕಟ

India vs Afghanistan T20 squad : ಪ್ರಮುಖವಾಗಿ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅಫ್ಘಾನ್‌ ತಂಡಕ್ಕೆ ಮರಳಿದ್ದಾರೆ. ಯುಎಇ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ರಶೀದ್‌ಗೆ ವಿಶ್ರಾಂತಿ ನೀಡಲಾಗಿತ್ತು. ರಶೀದ್ ಹೊರತಾಗಿ ಸ್ಪಿನ್‌ ಮೋಡಿಗಾರರಾದ ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ಮತ್ತು ನೂರ್ ಅಹ್ಮದ್ ಸಹ ಭಾರತ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.

Written by - VISHWANATH HARIHARA | Edited by - Krishna N K | Last Updated : Jan 7, 2024, 06:45 PM IST
  • ಭಾರತ ಮತ್ತು ಅಫ್ಘಾನಿಸ್ತಾನ ಟಿ20 ಸರಣಿಗೆ ಅಫ್ಘಾನಿಸ್ತಾನ ತನ್ನ ತಂಡ ಪ್ರಕಟ.
  • ಯುಎಇ ವಿರುದ್ಧ ತಂಡದಿಂದ ಹೊರಗುಳಿದಿದ್ದ ಮಾರಕ ಸ್ಪಿನ್ನರ್ ತಂಡಕ್ಕೆ ಮರಳಿದ್ದಾರೆ.
  • ಅಫ್ಘಾನ್‌ ಕ್ರಿಕೆಟ್‌ ಮಂಡಳಿ ಟಿ20 ಸರಣಿಗೆ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಅಫ್ಘಾನ್‌ ತಂಡ ಪ್ರಕಟ title=

T20 Afghanistan team : ಮುಂದಿನ ವಾರ ಆರಂಭವಾಗಲಿರುವ ಭಾರತ ಮತ್ತು ಅಫ್ಘಾನಿಸ್ತಾನ ಟಿ20 ಸರಣಿಗೆ ಅಫ್ಘಾನಿಸ್ತಾನ ತನ್ನ ತಂಡ ಪ್ರಕಟವಾಗಿದೆ. ಯುಎಇ ವಿರುದ್ಧ ತಂಡದಿಂದ ಹೊರಗುಳಿದಿದ್ದ ಮಾರಕ ಸ್ಪಿನ್ನರ್ ತಂಡಕ್ಕೆ ಮರಳಿದ್ದಾರೆ. ತಂಡದ ನಾಯಕನಾಗಿ ಇಬ್ರಾಹಿಂ ಜದ್ರಾನ್ ಮುಂದುವರೆದಿದ್ದಾರೆ. ಅಫ್ಘಾನ್‌ ಕ್ರಿಕೆಟ್‌ ಮಂಡಳಿ ಟಿ20 ಸರಣಿಗೆ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

ರಶೀದ್ ಖಾನ್ ಕಂಬ್ಯಾಕ್ : ಪ್ರಮುಖವಾಗಿ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅಫ್ಘಾನ್‌ ತಂಡಕ್ಕೆ ಮರಳಿದ್ದಾರೆ. ಯುಎಇ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ರಶೀದ್‌ಗೆ ವಿಶ್ರಾಂತಿ ನೀಡಲಾಗಿತ್ತು. ರಶೀದ್ ಹೊರತಾಗಿ ಸ್ಪಿನ್‌ ಮೋಡಿಗಾರರಾದ ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ಮತ್ತು ನೂರ್ ಅಹ್ಮದ್ ಸಹ ಭಾರತ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಭಾರತದಲ್ಲಿ ಸ್ಪಿನ್‌ ಟ್ರ್ಯಾಕ್‌ಗಳು ಹೆಚ್ಚಾಗಿರುವುದರಿಂದ ಸರಣಿಯಲ್ಲಿ ಅಫ್ಘಾನಿಸ್ತಾನ ಕಠಿಣ ಸವಾಲು ಒಡ್ಡುವ ನೀರಿಕ್ಷೆ ಇದೆ.

ಇದನ್ನೂ ಓದಿ: ಇಂಡಿಯಾ ಮತ್ತು ಆಸಿಸ್‌ ನಡುವಿನ ಮಹಿಳೆಯರ 2ನೇ ಟಿ20 ಕ್ಷಣಗಣನೆ ಆರಂಭ! ಆಸಿಸ್‌ ಗೆ ಸಿಗಲಿದೆಯಾ ಜಯ?

ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಸರಣಿಯ ಮೊದಲ ಪಂದ್ಯವನ್ನು ಜನವರಿ 11 ರಂದು ಮೊಹಾಲಿಯಲ್ಲಿ ಆಡಲಿದೆ. ಎರಡನೇ ಪಂದ್ಯ ಇಂದೋರ್‌ನಲ್ಲಿ ನಡೆಯಲಿದ್ದು, ಕೊನೆಯ ಟಿ20 ಪಂದ್ಯ ಜನವರಿ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇದುವರೆಗೆ 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಪೈಕಿ ಟೀಂ ಇಂಡಿಯಾ 4 ಪಂದ್ಯಗಳನ್ನು ಗೆದ್ದಿದ್ದರೆ ಒಂದು ಪಂದ್ಯ ರದ್ದಾಗಿತ್ತು. ಇನ್ನೂ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಈ ಸರಣಿಯಲ್ಲಿ ಆಡುವ ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಮುಂದಿನ ಟಿ20 ವಿಶ್ವಕಪ್‌ಗೆ ರೆಡಿಯಾಗಬೇಕಿದೆ.  

ಅಫ್ಘಾನ್‌ ತಂಡ : ಇಬ್ರಾಹಿಂ ಝದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಎಕ್ರಮ್ ಅಲಿ (ವಿಕೆಟ್ ಕೀಪರ್), ಹಜರತುಲ್ಲಾ ಝಜೈ, ರಹಮತ್ ಷಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮತುಲ್ಲಾ ಉಮರ್ಜಾಯ್, ಶರಫುದ್ದೀನ್ ಅಶ್ರಫ್, ಫ್ಮೆದ್ ಅಶ್ರಫ್, ಮುಜೀಬದ್ ಅಶ್ರಫ್, ಅಶ್ರಫ್ ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್, ಖೈಸ್ ಅಹ್ಮದ್, ಗುಲ್ಬದಿನ್ ನೈಬ್, ರಶೀದ್ ಖಾನ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News