16 ರನ್’ಗೆ ಇಡೀ ತಂಡ ಆಲೌಟ್! ಕ್ರಿಕೆಟ್ ಚರಿತ್ರೆಯಲ್ಲೇ ಕಳಪೆ ದಾಖಲೆ ಸೃಷ್ಟಿ.. ಇದಕ್ಕಿಂತ ಗಲ್ಲಿ ಕ್ರಿಕೆಟ್ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್
Zimbabwe Domestic Twenty20 Competition: ಜಿಂಬಾಬ್ವೆಯ ದೇಶೀಯ T20 ಪಂದ್ಯಾವಳಿಯ ಅಂತಿಮ ಪಂದ್ಯವು ಮಾರ್ಚ್ 9ರಂದು ನಡೆಯಿತು. ಈ ಪಂದ್ಯದಲ್ಲಿ ಮಶೋನಾಲ್ಯಾಂಡ್ ಈಗಲ್ಸ್ ತಂಡ ಡರ್ಹಾಮ್ ತಂಡವನ್ನು ಎದುರಿಸಿತು. ಡರ್ಹಾಮ್ ತಂಡ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.
Zimbabwe Domestic Twenty20: ಜಿಂಬಾಬ್ವೆಯಲ್ಲಿ ನಡೆದ ಟಿ20 ಲೀಗ್’ನಲ್ಲಿ 230 ರನ್’ಗಳ ಗುರಿ ಮುಟ್ಟಲೆಂದು ಬಂದ ತಂಡವೊಂದು ಕೇವಲ 16 ರನ್’ಗಳಿಗೆ ಆಲೌಟ್ ಆದ ಘಟನೆ ನಡೆದಿದೆ. ಅಷ್ಟೇ ಅಲ್ಲದೆ, ಯಾವೊಬ್ಬ ಬ್ಯಾಟ್ಸ್ಮನ್ ಕೂಡ 5 ರನ್ ಗಳಿಸಲು ಸಾಧ್ಯವಾಗದೆ, ಕ್ರಿಕೆಟ್ ಚರಿತ್ರೆಯಲ್ಲೇ ಅವಮಾನಕರ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ.
ಇದನ್ನೂ ಓದಿ: ಈ ಖ್ಯಾತ ನಟಿಯ ಮನೆಯಲ್ಲಿ ನಾಯಿಗೆ ಹಾಕೋ ಚಿಕನ್ ತಿಂದ ಆಂಕರ್ ಅನುಶ್ರೀ! ಸಿಕ್ಕಿಬಿದ್ದಿದ್ದು ಹೇಗೆ?
ಜಿಂಬಾಬ್ವೆಯ ದೇಶೀಯ T20 ಪಂದ್ಯಾವಳಿಯ ಅಂತಿಮ ಪಂದ್ಯವು ಮಾರ್ಚ್ 9ರಂದು ನಡೆಯಿತು. ಈ ಪಂದ್ಯದಲ್ಲಿ ಮಶೋನಾಲ್ಯಾಂಡ್ ಈಗಲ್ಸ್ ತಂಡ ಡರ್ಹಾಮ್ ತಂಡವನ್ನು ಎದುರಿಸಿತು. ಡರ್ಹಾಮ್ ತಂಡ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. 20 ಓವರ್’ಗಳಲ್ಲಿ ದುರ್ಹಾನ್ ತಂಡ 6 ವಿಕೆಟ್’ಗೆ 229 ರನ್ ಗಳಿಸಿತು. ಈ ವೇಳೆ ಇಂಗ್ಲೆಂಡ್’ನ ಒಲಿ ರಾಬಿನ್ಸನ್, ಹೇಡನ್ ಮಸ್ಟರ್ಡ್ ಮತ್ತು ನೆದರ್ಲೆಂಡ್ಸ್’ನ ಬಾಸ್ ಡಿ ಲೀಡೆ ಬಿರುಸಿನ ಇನ್ನಿಂಗ್ಸ್ ಆಡಿದರು.
ಖಾತೆ ತೆರೆಯದ ಐವರು ಬ್ಯಾಟ್ಸ್’ಮನ್ಸ್:
ಈಗಲ್ಸ್’ಗೆ 230 ರನ್ ಗಳ ದೊಡ್ಡ ಗುರಿ ಇತ್ತು. ಗೆಲುವಿನ ಗುರಿ ತಲುಪಲು ಬಂದ ಈಗಲ್ಸ್ ತಂಡ ಒತ್ತಡಕ್ಕೆ ಸಿಲುಕಿ, 8.1 ಓವರ್’ಗಳಲ್ಲಿ ಕೇವಲ 16 ರನ್ ಗಳಿಸಿ ಆಲೌಟ್ ಆಯಿತು. ನಾಯಕ ಚಾಮು ಚಿಭಾಭಾ ಮತ್ತು ತಪಿವಾ ಮುಫುಡ್ಜಾ ತಲಾ 4 ರನ್ ಗಳಿಸಿದರು. ಕೆಗ್ ಇರ್ವಿನ್, ನಿಕ್ ವೆಲ್ಶ್, ಹಮ್ಜಾ ಶಾಹಿದ್, ತಿನಾಶೆ ಕಮುಂಹುಕಾಂವೆ ಮತ್ತು ತಡಿವಶನ್ ಮರುಮಾನಿ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಕ್ಯಾಲಮ್ ಪಾರ್ಕಿನ್ಸನ್, ಪಾಲ್ ಕಾಗ್ಲಿನ್ ಮತ್ತು ಲ್ಯೂಕ್ ರಾಬಿನ್ಸನ್ ತಲಾ ಎರಡು ವಿಕೆಟ್ ಪಡೆದರು. ಬ್ಯಾಟಿಂಗ್ ನಲ್ಲಿ ಅಮೋಘ ಪ್ರದರ್ಶನ ತೋರಿದ ಬಾಸ್ ಡಿ ಲೀಡೆ ಬೌಲಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿ ಒಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಡರ್ಹಾಮ್ ತಂಡ 213 ರನ್’ಗಳ ಜಯ ಸಾಧಿಸಿತು.
ಇದನ್ನೂ ಓದಿ: ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸದೃಢ- SBI ಬ್ಯಾಂಕ್ 1.4 ಲಕ್ಷ ಕೋಟಿ ಲಾಭದಲ್ಲಿದೆ: ಪ್ರಹ್ಲಾದ್ ಜೋಶಿ
ಟಿ20ಯಲ್ಲಿ ಅತಿ ಕಡಿಮೆ ಸ್ಕೋರ್ ದಾಖಲಿಸಿದ ದಾಖಲೆ
ಈಗಲ್ಸ್ ಟಿ20 ಕ್ರಿಕೆಟ್’ನಲ್ಲಿ ಮೂರನೇ ಅತಿ ಕಡಿಮೆ ಸ್ಕೋರ್ ಮಾಡಿದೆ. ಐಲ್ ಆಫ್ ಮ್ಯಾನ್ ತಂಡವು 10 ರನ್’ಗಳ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ಕಳಪೆ ದಾಖಲೆಯನ್ನು ಹೊಂದಿದ್ದು ಮೊದಲ ಸ್ಥಾನದಲ್ಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ