ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸದೃಢ- SBI ಬ್ಯಾಂಕ್ 1.4 ಲಕ್ಷ ಕೋಟಿ ಲಾಭದಲ್ಲಿದೆ: ಸಚಿವ ಪ್ರಹ್ಲಾದ್ ಜೋಶಿ

2004ರಿಂದ 2014ರವರೆಗೆ ದೇಶದ ಎಲ್ಲಾ ಬ್ಯಾಂಕ್’ಗಳು ನಷ್ಟದಲ್ಲಿದ್ದವು. ಆದರೆ ನಂತರದ ಹತ್ತು ವರ್ಷದಲ್ಲಿ ಎಲ್ಲಾ ಬ್ಯಾಂಕ್ ಗಳು ಲಾಭದಲ್ಲಿವೆ. ನಮ್ಮ ಎಸ್’ಬಿಐ ಈಗ ರಿಲಯನ್ಸ್ ಇಂಡಸ್ಟ್ರೀಸ್’ಗಿಂತ ದುಪ್ಪಟ್ಟು ಲಾಭದಲ್ಲಿ ಇದೆ. 85 ಸಾವಿರ ಕೋಟಿ ನಷ್ಟದಲ್ಲಿದ್ದ ಬ್ಯಾಂಕ್ ಈಗ 1.4 ಲಕ್ಷ ಕೋಟಿ ಲಾಭದ ದಾಖಲೆಯಲ್ಲಿದೆ ಎಂದು ಜೋಶಿ ಹೇಳಿದರು.

Written by - Bhavishya Shetty | Last Updated : Mar 10, 2024, 06:29 PM IST
    • ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಇಂದು ಸದೃಢವಾಗಿದೆ
    • 2004ರಿಂದ 2014ರವರೆಗೆ ದೇಶದ ಎಲ್ಲಾ ಬ್ಯಾಂಕ್’ಗಳು ನಷ್ಟದಲ್ಲಿದ್ದವು
    • ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ
ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸದೃಢ- SBI ಬ್ಯಾಂಕ್ 1.4 ಲಕ್ಷ ಕೋಟಿ ಲಾಭದಲ್ಲಿದೆ: ಸಚಿವ ಪ್ರಹ್ಲಾದ್ ಜೋಶಿ title=
File Photo

ಹುಬ್ಬಳ್ಳಿ: ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಇಂದು ಸದೃಢವಾಗಿದ್ದು, ಎಸ್ ಬಿಐ ಬ್ಯಾಂಕ್ ಈಗ 1.4 ಲಕ್ಷ ಕೋಟಿ ಲಾಭದಲ್ಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಶಿವಮೊಗ್ಗದಲ್ಲಿ ಶನಿವಾರ ವಿಪ್ರ ಹಮ್ಮಿಕೊಂಡಿದ್ದ ಬಿಎಸ್ ವೈ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: ದಾವಣಗೆರೆಯಲ್ಲಿ 109.84 ಕೋಟಿ ವೆಚ್ಚದ ನೂತನ KSRTC ಬಸ್ ನಿಲ್ದಾಣದ ನಿರ್ಮಾಣ 

2004ರಿಂದ 2014ರವರೆಗೆ ದೇಶದ ಎಲ್ಲಾ ಬ್ಯಾಂಕ್’ಗಳು ನಷ್ಟದಲ್ಲಿದ್ದವು. ಆದರೆ ನಂತರದ ಹತ್ತು ವರ್ಷದಲ್ಲಿ ಎಲ್ಲಾ ಬ್ಯಾಂಕ್ ಗಳು ಲಾಭದಲ್ಲಿವೆ. ನಮ್ಮ ಎಸ್’ಬಿಐ ಈಗ ರಿಲಯನ್ಸ್ ಇಂಡಸ್ಟ್ರೀಸ್’ಗಿಂತ ದುಪ್ಪಟ್ಟು ಲಾಭದಲ್ಲಿ ಇದೆ. 85 ಸಾವಿರ ಕೋಟಿ ನಷ್ಟದಲ್ಲಿದ್ದ ಬ್ಯಾಂಕ್ ಈಗ 1.4 ಲಕ್ಷ ಕೋಟಿ ಲಾಭದ ದಾಖಲೆಯಲ್ಲಿದೆ ಎಂದು ಜೋಶಿ ಹೇಳಿದರು.

ಸಹಸ್ರಾರು ಕೋಟಿ ವಂಚಕರ ಸೆರೆ:

ಸಹಸ್ರಾರು ಕೋಟಿ ಸಾಲ ಪಡೆದು ಓಡಿ ಹೋಗುತ್ತಿದ್ದ ಕುಳಗಳನ್ನು ಸದೆಬಡಿದ ಪರಿಣಾಮ ಭಾರತ ಇಂದು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿದೆ. 10 ಸಾವಿರ ಕೋಟಿ, 15 ಸಾವಿರ ಕೋಟಿ ಸಾಲ ಮಾಡಿ ಟೋಪಿ ಹಾಕಿ ಓಡಿ ಹೋಗುತ್ತಿದ್ದವರು ಈಗ ಆ ಧೈರ್ಯ ಮಾಡುತ್ತಿಲ್ಲ ಎಂದರು.

ದೇಶದಲ್ಲಿ ಇನ್ನೂ ಇಬ್ಬರು-ಮೂವರು ಸಹಸ್ರ ಕೋಟಿ ಸಾಲ ಪಡೆದು ಟೋಪಿ ಹಾಕಿ, ಓಡಿ ಹೋದವರಿದ್ದಾರೆ. ಅವರನ್ನೂ ಕರೆ ತರುವ ಕೆಲಸ ನಡೆದಿದೆ. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಬದಲಾವಣೆ ಮಾಡಿ ಬಲಿಷ್ಠಗೊಳಿಸಲಾಗಿದೆ ಎಂದು ಹೇಳಿದರು

25 ಕೋಟಿ ಜನ ಬಡತನ ಮುಕ್ತ:

ದೇಶದ ಕೈಯಲ್ಲಿ ದುಡ್ಡಿದೆ. ಹೀಗಾಗಿ ಭಾರತದ 25 ಕೋಟಿ ಜನ ಈಗ ಬಹು ಆಯಾಮಿ ಬಡತನದಿಂದ ಹೊರ ಬಂದಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ಮುಂದಿನ 10 ವರ್ಷಗಳಲ್ಲಿ ಭಾರತ ಇಡೀ ವಿಶ್ವಕ್ಕೆ ಬೇಕು-ಬೇಡಗಳನ್ನು ಪೂರೈಸುವ ನಂಬರ್ 1 ರಾಷ್ಟ್ರವಾಗಲಿದೆ. ಯುವಶಕ್ತಿ ಬಲವಿದೆ ಎಂದು ಹೇಳಿದರು.

21ನೇ ಶತಮಾನ ಭಾರತದ್ದು:

ಒಂದು ಕಾಲದಲ್ಲಿ ನಮ್ಮನ್ನಾಳಿದ ಇಂಗ್ಲೆಡ್ ಅನ್ನು ಮೀರಿ ಭಾರತ ಬೆಳೆದಿದೆ. 19ನೇ ಶತಮಾನ ಇಂಗ್ಲೆಡ್ ನದ್ದಾದರೆ, 20ನೇ ಶತಮಾನ ಅಮೇರಿಕದ್ದಾಗಿತ್ತು. ಈಗ 21ನೇ ಶತಮಾನ ಭಾರತದ್ದಾಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ ಎಂದು ಸಚಿವ ಜೋಶಿ ಹೇಳಿದರು.

2012ರಲ್ಲಿ 68 ಕೋಟಿ ಜನ ಕತ್ತಲಲ್ಲಿ ಇದ್ದರು. ಆದರೆ ಈಗ ಇಡೀ ದೇಶಕ್ಕೆ ಸಮರ್ಪಕ ವಿದ್ಯುತ್ ಪೂರೈಸುವ ಸಾಮರ್ಥ್ಯ ಹೊಂದಿದೆ. ಐದು ಅತ್ಯಂತ ದುರ್ಬಲ ದೇಶಗಳ ಪಟ್ಟಿಯಲ್ಲಿದ್ದ ಭಾರತ ಇಂದು ಹತ್ತೇ ವರ್ಷದಲ್ಲಿ ಅಭಿವೃದ್ಧಿಶೀಲ 5ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು ಪ್ರಧಾನಿ ಮೋದಿಜಿ ಸಂಕಲ್ಪದ ಪ್ರತಿಫಲ ಎಂದು ಸಚಿವ ಪ್ರಹ್ಲಾದ ಜೋಶಿ ಪ್ರತಿಪಾದಿಸಿದರು.

ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದುಕೊಳ್ಳುವವರನ್ನು ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮ

ಸಮಾರಂಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಶಾಸಕರು, ಮುಖಂಡರು ಉಪಸ್ಥಿತರಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News