ನವದೆಹಲಿ: ಟೀಂ ಇಂಡಿಯಾ ಸೆಪ್ಟೆಂಬರ್ 28ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಈ ಸರಣಿಯ ಬಳಿಕ ಟೀಂ ಇಂಡಿಯಾ 2022ರ ಟಿ-20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಇದೆಲ್ಲದರ ನಡುವೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಬಂದಿದೆ. ಭಾರತದ ವೇಗದ ಬೌಲರ್ ಒಬ್ಬರು ಇದ್ದಕ್ಕಿದ್ದಂತೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಆಟಗಾರನು ತನ್ನ ಮಾರಕ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರು. ಐಪಿಎಲ್‌ ಟೂರ್ನಿಗಳಲ್ಲಿ ಈ ಆಟಗಾರ ಸಾಕಷ್ಟು ಸದ್ದು ಮಾಡಿದ್ದರು.   


COMMERCIAL BREAK
SCROLL TO CONTINUE READING

ನಿವೃತ್ತಿಯಾದ ಈ ವೇಗದ ಬೌಲರ್


ಭಾರತೀಯ ದೇಶೀಯ ಕ್ರಿಕೆಟ್‌ನ ಹೆಸರಾಂತ ಆಟಗಾರ ಅನುರೀತ್ ಸಿಂಗ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 34 ವರ್ಷದ ಅನುರೀತ್ ಸಿಂಗ್ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. ಅನುರೀತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ಮಾಹಿತಿ ನೀಡಿದ್ದಾರೆ. ಟೀಂ ಇಂಡಿಯಾಗೆ ಪದಾರ್ಪಣೆ ಮಾಡುವ ಅವಕಾಶ ಅನುರೀತ್ ಸಿಂಗ್‍ಗೆ ಸಿಗಲಿಲ್ಲ, ಆದರೆ ಅವರು ಐಪಿಎಲ್ ಪಂದ್ಯಗಳಲ್ಲಿ ವಿಭಿನ್ನ ಛಾಪು ಮೂಡಿಸಿದ ಸಾಧನೆ ಮಾಡಿದ್ದಾರೆ.  


ಇದನ್ನೂ ಓದಿ: T20 Cricket: ಭಾರತವಲ್ಲ ಈ ತಂಡ ಕ್ರಿಕೆಟ್ ಜಗತ್ತಿನಲ್ಲಿ ಪ್ರಾಬಲ್ಯ ಹೊಂದಿದೆ..!


ಐಪಿಎಲ್‌ನಲ್ಲಿ ಈ ತಂಡಗಳ ಪರ ಆಡಿದ್ದಾರೆ


ಅನುರೀತ್ ಸಿಂಗ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ಕೆಕೆಆರ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಅವರು ಬರೋಡಾ, ಸಿಕ್ಕಿಂ ಮತ್ತು ರೈಲ್ವೇಸ್‌ಗಾಗಿ ಆಡಿದ್ದರು. ನಿವೃತ್ತಿ ಬಗ್ಗೆ ಪೋಸ್ಟ್ ಹಂಚಿಕೊಂಡ ಅವರು, ‘ನಾನು ಬಾಲ್ಯದಿಂದಲೂ ಕ್ರಿಕೆಟಿಗನಾಗಬೇಕೆಂದು ಬಯಸಿದ್ದೆ. ಇದೊಂದು ನಂಬಲಾಗದ ಕ್ರಿಕೆಟ್ ಪಯಣ. ನಾನು 16 ವರ್ಷದವನಾಗಿದ್ದಾಗ ದೆಹಲಿಯ ಸುಭಾನಿಯಾ ಕ್ರಿಕೆಟ್ ಕ್ಲಬ್‌ಗೆ ಸೇರಿಕೊಂಡೆ. 2008ರ ದೇಶೀಯ ಋತುವಿನಲ್ಲಿ ಭಾರತೀಯ ರೈಲ್ವೇಸ್ ಪರ ಕರ್ನಾಟಕ ವಿರುದ್ಧ ರಣಜಿ ಟ್ರೋಫಿಯಲ್ಲಿ ಆಡುವ ಅವಕಾಶ ಸಿಕ್ಕಾಗ ನನ್ನ ಕನಸು ನನಸಾಯಿತು’ ಅಂತಾ ಹೇಳಿಕೊಂಡಿದ್ದಾರೆ.


ದೇಶೀಯ ಕ್ರಿಕೆಟ್‌ನ ಪಯಣ ಹೀಗಿತ್ತು


ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.


ಇದನ್ನೂ ಓದಿ: Virat Kohli: ಪಂದ್ಯ ಗೆದ್ದ ಕೊಹ್ಲಿ ಮಾಡಿದ್ದೇನು ಗೊತ್ತಾ? ವಿರಾಟ್ ಅವತಾರ ಕಂಡು ಬಿದ್ದು ಬಿದ್ದು ನಕ್ಕ ಜನರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.