IND vs SA: ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ಭಾರೀ ಹಿನ್ನಡೆ

IND vs SA: ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ಭಾರೀ ಹಿನ್ನಡೆ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಗೂ ಮುನ್ನವೇ ಟೀಂ ಇಂಡಿಯಾದ 3 ಸ್ಟಾರ್ ಆಟಗಾರರು ಔಟ್ ಆಗಿದ್ದಾರೆ.  

Written by - Yashaswini V | Last Updated : Sep 27, 2022, 10:34 AM IST
  • ಭಾರತ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಿದೆ.

    ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾದ 3 ಸ್ಟಾರ್ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ

    ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿರುವ ಟೀಂ ಇಂಡಿಯಾದ ಆ ಮೂವರೂ ಆಟಗಾರರ ಬಗ್ಗೆ ತಿಳಿಯೋಣ.
IND vs SA: ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ಭಾರೀ ಹಿನ್ನಡೆ title=
India vs South Africa Series

ಭಾರತ vs ಸೌತ್ ಆಫ್ರಿಕಾ ಟಿ20 ಸರಣಿ: ಇಂಡಿಯಾ vs ಸೌತ್ ಆಫ್ರಿಕಾ  ಟಿ20 ಸೀರೀಸ್ ಗೂ ಮುನ್ನವೇ ಟೀಂ ಇಂಡಿಯಾಗೆ ಭಾರೀ ಹಿನ್ನಡೆ ಆಗಿದೆ. ಭಾರತ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾದ 3 ಸ್ಟಾರ್ ಆಟಗಾರರು ಔಟ್ ಆಗಿದ್ದು ಇದರಿಂದಾಗಿ ಟೀಂ ಇಂಡಿಯಾ ಭಾರೀ ಆಘಾತವನ್ನು ಅನುಭವಿಸಿದೆ. ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿರುವ ಟೀಂ ಇಂಡಿಯಾದ ಆ ಮೂವರೂ ಆಟಗಾರರ ಬಗ್ಗೆ ತಿಳಿಯೋಣ. 

1. ಮೊಹಮ್ಮದ್ ಶಮಿ:
ಭಾರತದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲು ಕರೋನಾಗೆ ಒಳಗಾಗಿದ್ದರು, ಇದರಿಂದಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಮೊಹಮ್ಮದ್ ಶಮಿ ಇನ್ನೂ ಕೂಡ ಕರೋನಾದಿಂದ ಸರಿಯಾಗಿ ಚೇತರಿಸಿಕೊಳ್ಳದ ಕಾರಣ ಆಯ್ಕೆಗಾರರು ಉಮ್ರಾನ್ ಮಲಿಕ್ ಅವರನ್ನು ಅವರ ಸ್ಥಾನದಲ್ಲಿ ಸ್ಟ್ಯಾಂಡ್‌ಬೈನಲ್ಲಿ ಇರಿಸಿದ್ದಾರೆ. ಮೊಹಮ್ಮದ್ ಶಮಿ ತನ್ನ ಕಿಲ್ಲರ್ ಬೌಲಿಂಗ್‌ಗೆ ಹೆಸರುವಾಸಿ. ಅವರು ಭಾರತ ಪರ 17 ಟಿ20 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ- Jasprit Bumrah: ಸಿಕ್ಸರ್ & ಬೌಂಡರಿ ಮೇಲಿನ ಕೋಪ ನಿಯಂತ್ರಿಸಿದ ಜಸ್ಪ್ರೀತ್ ಬುಮ್ರಾ!

2. ದೀಪಕ್ ಹೂಡಾ :
ಭಾರತದ ಅಪಾಯಕಾರಿ ಆಲ್‌ರೌಂಡರ್ ದೀಪಕ್ ಹೂಡಾ ಅವರು ಆಸ್ಟ್ರೇಲಿಯಾ ಸರಣಿಯ ವೇಳೆ ಬೆನ್ನುನೋವಿಗೆ ಒಳಗಾಗಿದ್ದರು, ಈ ಕಾರಣದಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯಬೇಕಾಯಿತು. ದೀಪಕ್ ಹೂಡಾ ಬದಲಿಗೆ ಅಪಾಯಕಾರಿ ಆಟಗಾರ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆಗಾರರು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಭಾರತದ ಟಿ20 ವಿಶ್ವಕಪ್‌ಗೆ ದೀಪಕ್ ಹೂಡಾ ಕೂಡ ಸೇರ್ಪಡೆಗೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ದೀಪಕ್ ಹೂಡಾ ಬೇಗ ಗುಣಮುಖರಾಗದಿದ್ದರೆ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕಳವಳವನ್ನು ಹೆಚ್ಚಿಸಬಹುದು. 

ಇದನ್ನೂ ಓದಿ- IND vs AUS: ಆಸ್ಟ್ರೇಲಿಯವನ್ನು ಮಣಿಸಿ ಪಾಕಿಸ್ತಾನವನ್ನು ಹಿಂದಿಕ್ಕಿ ವಿಶ್ವದಾಖಲೆ ಬರೆದ ಭಾರತ

3. ಹಾರ್ದಿಕ್ ಪಾಂಡ್ಯ :
ಹಾರ್ದಿಕ್ ಪಾಂಡ್ಯ ಕಿಲ್ಲರ್ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಪರಿಣತಿ ಹೊಂದಿದ್ದಾರೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಅವರು ಐಪಿಎಲ್ 2022 ರಿಂದ ಉತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ. ಆದರೆ ಗಾಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಹಾರ್ದಿಕ್ ಪಾಂಡ್ಯ ಬದಲಿಗೆ ಶಹಬಾಜ್ ಅಹ್ಮದ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News