ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋಲಿನ ನಂತರ  ಅನೇಕ ಆಟಗಾರರು ವಿಮರ್ಶಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಪೈಕಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪ್ರಮುಖರು. ಈ ಸೋಲಿನ ನಂತರ ಇಬ್ಬರಿಗೂ ನಿವೃತ್ತಿಯಾಗುವಂತೆ ಸಲಹೆ ನೀಡಲಾಗುತ್ತಿದೆ. ಇಷ್ಟಾದ ಮೇಲೆ ರೋಹಿತ್ ಶರ್ಮಾ  ನಿವೃತ್ತಿ ಘೋಷಿಸುತ್ತಾರೆ ಎಂದೇ  ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಸಿಡ್ನಿ ಟೆಸ್ಟ್ ನಂತರ ರೋಹಿತ್ ನಿವೃತ್ತಿ? : 
ವರದಿಯ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತ್ಯದ ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲಿದ್ದಾರೆ. ಬಿಸಿಸಿಐನ ಉನ್ನತ ಅಧಿಕಾರಿಗಳು ಮತ್ತು ಆಯ್ಕೆದಾರರು ಈಗಾಗಲೇ ನಿರ್ಧಾರದ ಬಗ್ಗೆ ಮಾತನಾಡಿದ್ದು, ರೋಹಿತ್ ಮನಸ್ಸು ಬದಲಾಯಿಸುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳುತ್ತದೆ. ನಿವೃತ್ತಿ  ಘೋಷಣೆಯ ನಿಖರವಾದ ಸಮಯವನ್ನು ನಿರ್ಧರಿಸಲಾಗಿಲ್ಲವಾದರೂ, ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ನಂತರ  
ಟೀಂ ಇಂಡಿಯಾ ನಾಯಕ ತಮ್ಮ ನಿವೃತ್ತಿ ಘೋಷಿಸಲಿದ್ದಾರೆ. 


ಇದನ್ನೂ ಓದಿ : "ರಾಜ ಸತ್ತಿದ್ದಾನೆ, ಆಸ್ಟ್ರೇಲಿಯಾ ಖುಷಿಯಾಗಿದೆ"- ವಿರಾಟ್‌ ಕೊಹ್ಲಿಗೆ ಪಬ್ಲಿಕ್‌ನಲ್ಲೇ ಅವಮಾನ ಮಾಡಿ ಟೀಕಿಸಿದ ಮಾಜಿ ಕ್ರಿಕೆಟಿಗ.. ಯಾರು?


ಸೋಲಿನ ನಂತರ ರೋಹಿತ್ ಅಸಮಾಧಾನ :
ಆದರೆ, ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಅರ್ಹತೆ ಪಡೆದರೆ, ರೋಹಿತ್ ತಂಡದಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಆಯ್ಕೆದಾರರನ್ನು ಮನವೊಲಿಸಲು ಪ್ರಯತ್ನಿಸಬಹುದು. ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೀನಾಯ ಸೋಲಿನ ನಂತರ ರೋಹಿತ್ ಶರ್ಮಾ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ.


ರೋಹಿತ್ ಮುಂದಿರುವ ಪ್ರಶ್ನೆಗಳು : 
ಮೂರು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಗಳಿಸಿದ್ದು, ಕೇವಲ 31 ರನ್.  ಇದಾದ ನಂತರ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ರೋಹಿತ್ ಶರ್ಮಾ ಸಿಡ್ನಿಯಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಬಹುದು ಎನ್ನಲಾಗಿದೆ. ಆದರೆ, ರೋಹಿತ್ ಅಷ್ಟು ಸುಲಭವಾಗಿ ನಿವೃತ್ತಿ ಘೋಷಿಸುತ್ತಾರೆಯೇ ಎನ್ನುವ ಪ್ರಶ್ನೆ ಕೂಡಾ ಕಾಡುತ್ತಿದೆ. ಬ್ಯಾಟ್ಸ್‌ಮನ್ ಆಗಿ ಮತ್ತು ನಾಯಕನಾಗಿ ಎಲ್ಲಿ ನಿಲ್ಲುತ್ತಾರೆ? ಅವರ ಮನಸ್ಥಿತಿ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತವೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ. 


ಇದನ್ನೂ ಓದಿ: 4 ಪಂದ್ಯ... 30 ವಿಕೆಟ್; ವ್ಯರ್ಥವಾಗದ ಜಸ್ಪ್ರೀತ್‌ ಬುಮ್ರಾ ಶ್ರಮ... ಮೆಲ್ಬೊರ್ನ್‌ ಟೆಸ್ಟ್‌ ಸೋತರೂ ಐಸಿಸಿಯಿಂದ ವಿಶೇಷ ಉಡುಗೊರೆ!


ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸುವತ್ತ ಚಿತ್ತ : 
ಸಿಡ್ನಿ ಟೆಸ್ಟ್‌ನಲ್ಲಿ ಆಡುವುದಾಗಿ ರೋಹಿತ್ ಸ್ಪಷ್ಟವಾಗಿ ಹೇಳಿದ್ದು, ಸರಣಿಯನ್ನು ಡ್ರಾದಲ್ಲಿ ಮುಗಿಸುವತ್ತ ಗಮನ ಹರಿಸಿದ್ದಾರೆ. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-2ರ ಹಿನ್ನಡೆಯಲ್ಲಿದೆ. ಕೊನೆಯ ಪಂದ್ಯ ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೆ ಭಾರತ 2-2ರಲ್ಲಿ ಸರಣಿಯನ್ನು ಅಂತ್ಯಗೊಳಿಸಲಿದೆ. ಇದಲ್ಲದೇ ಬಾರ್ಡರ್-ಗವಾಸ್ಕರ್ ಟ್ರೋಫಿ ಕೂಡಾ ಅವರ ಬಳಿಯೇ ಉಳಿಯಲಿದೆ. 2014 ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್‌ ಮಾಡಿ