Rohit Sharma Helicopter Entry Video: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಟೆಸ್ಟ್‌ಗಳ ಸರಣಿಯ ಕೊನೆಯ ಪಂದ್ಯಕ್ಕಾಗಿ ಮಂಗಳವಾರ ಧರ್ಮಶಾಲಾಗೆ ಆಗಮಿಸಿದ್ದಾರೆ. ಅಂತಿಮ ಟೆಸ್ಟ್ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​(HPCA) ನಲ್ಲಿ ಆಯೋಜಿಸಲಾಗಿದ್ದು, ಇಂಗ್ಲೆಂಡ್ ತಂಡವು ಈಗಾಗಲೇ ಚಂಡೀಗಢದಿಂದ ಚಾರ್ಟರ್ಡ್ ವಿಮಾನದ ಮೂಲಕ ತಲುಪಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬೆಂಗಳೂರಿನಲ್ಲಿ ಹನಿ ಹನಿ ನೀರಿಗೂ ಹಾಹಾಕಾರ! ಬೇಸಿಗೆ ಆರಂಭದಲ್ಲೇ ಬಿಕ್ಕಟ್ಟು ಎದುರಾಗಲು ಇದುವೇ ಕಾರಣ


ಆದರೆ ರೋಹಿತ್ ಶರ್ಮಾ ಮಾತ್ರ ಹೀರೋ ಸ್ಟೈಲ್’ನಲ್ಲಿ ಧರ್ಮಶಾಲಾಗೆ ಎಂಟ್ರಿ ಕೊಟ್ಟಿದ್ದಾರೆ. ಹೆಲಿಕಾಪ್ಟರ್ ಮೂಲಕ ಆಗಮಿಸಿದ ರೋಹಿತ್ ಅವರನ್ನು ಕೆಲ ಅಧಿಕಾರಿಗಳು ಸ್ವಾಗತಿಸಿ, ಕಾರಿನ ಮೂಲಕ ಹೋಟೆಲ್’ಗೆ ಕರೆ ತಂದಿದ್ದಾರೆ. ಅಂದಹಾಗೆ ಫುಲ್ ಬ್ಲ್ಯಾಕ್ ಡ್ರೆಸ್ ಸ್ಟೈಲ್’ನಲ್ಲಿ ಹೀರೋ ಥರ ಕಾಣಿಸುತ್ತಿದ್ದರು ಟೀಂ ಇಂಡಿಯಾ ನಾಯಕ.  


ಮುಂಬೈ, ಚೆನ್ನೈ ಅಲ್ಲ… IPLನಲ್ಲಿ ಅತಿ ಹೆಚ್ಚು ಬಾರಿ ನಾಯಕನನ್ನು ಬದಲಾಯಿಸಿದ್ದು ಇದೇ ತಂಡ


ಇನ್ನು ಈ ಕೊನೆಯ ಪಂದ್ಯ ಮೂವರು ಆಟಗಾರರಿಗೆ ಅತ್ಯಂತ ವಿಶೇಷವಾಗಿರಲಿದೆ. ಭಾರತದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್‌’ನ ವಿಕೆಟ್‌ ಕೀಪರ್ ಬ್ಯಾಟ್ಸ್‌’ಮನ್ ಜಾನಿ ಬೈರ್‌ಸ್ಟೋವ್ ಅವರ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವಾಗಿದೆ. ಮತ್ತೊಂದೆಡೆ, ಇಂಗ್ಲೆಂಡ್‌ ಶ್ರೇಷ್ಠ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಇಲ್ಲಿ 2 ವಿಕೆಟ್ ಪಡೆದರೆ, 700 ಟೆಸ್ಟ್ ವಿಕೆಟ್ ಪಡೆದ ವಿಶ್ವದ ಏಕೈಕ ವೇಗದ ಬೌಲರ್ ಆಗಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್