ಪಂದ್ಯಗಳನ್ನು ಗೆದ್ದರೂ ಅಥವಾ ಸೋತರೂ ತಂಡದಲ್ಲಿ ಉತ್ತಮ ವಾತಾವರಣವಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಹಿರಂಗಪಡಿಸಿದ್ದಾರೆ. ದುಬೈನಲ್ಲಿ ಗುರುವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವು ಭಾರತದ ಏಷ್ಯಾ ಕಪ್ 2022 ರ ಕೊನೆಯ ಪಂದ್ಯವಾಗಿದೆ ಮತ್ತು ಇದನ್ನು ಟೀಮ್ ಇಂಡಿಯಾ ಅತ್ಯುತ್ತಮ ರೀತಿಯಲ್ಲಿ ಆಟವಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Anushka Sharma: ಕೊಹ್ಲಿ ಶತಕಕ್ಕೆ ದೇಶವೇ ಶಹಬ್ಬಾಶ್ ಅಂದ್ರೆ,ಅನುಷ್ಕಾ ಹೇಳಿದ್ದು ಮಾತ್ರ ಹೀಗೆ!


ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ವಿರುದ್ಧದ ಪಂದ್ಯಗಳನ್ನು ಗೆದ್ದ ನಂತರ ಭಾರತವು ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಎರಡೂ ಪಂದ್ಯಗಳನ್ನು ಸೋತಿದೆ. ಪಂದ್ಯಕ್ಕೂ ಮುನ್ನ ದ್ರಾವಿಡ್, 'ನಾವು ವಿಷಯಗಳನ್ನು ಸಾಮಾನ್ಯ ರೀತಿಯಲ್ಲಿ ತೆಗೆದುಕೊಂಡಿದ್ದೇವೆ. ರಕ್ಷಿಸಲು ಸುಲಭವಲ್ಲದ ಪಿಚ್‌ನಲ್ಲಿ ನಾವು ಕೆಲವು ಪಂದ್ಯಗಳನ್ನು ಕಳೆದುಕೊಂಡಿದ್ದೇವೆ. ಏಷ್ಯಾಕಪ್‌ನಲ್ಲಿ ನಾವು ಆರಂಭಿಕ ಪಂದ್ಯಗಳನ್ನು ಗೆಲ್ಲದಿರುವುದು ನಾವು ಉತ್ತಮ ತಂಡವಲ್ಲ ಎಂದು ಬಿಂಬಿಸುವುದಿಲ್ಲ” ಎಂದು ಹೇಳಿದ್ದಾರೆ.


ಪ್ರಸ್ತುತ ಭಾರತ ತಂಡದಲ್ಲಿ ಅವರ ಪಾತ್ರದ ಬಗ್ಗೆ ಕೇಳಿದಾಗ ದ್ರಾವಿಡ್ ಅಂದಿದ್ದು ಹೀಗೆ. "ನಾನು ನಾಯಕನಾಗಿ ಮತ್ತು ತಂಡವನ್ನು ಬೆಂಬಲಿಸುವ ನನ್ನ ಪಾತ್ರವನ್ನು ನೋಡುತ್ತೇನೆ. ತಂಡವು ನನ್ನಿಂದ ಉತ್ತಮವಾದುದನ್ನು ಪಡೆಯಲು ನಿರೀಕ್ಷಿಸುತ್ತದೆ. ಆದರೆ ಒಮ್ಮೆ  ಮೈದಾನಕ್ಕಿಳಿದರೆ, ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಮತ್ತು ತಂಡವನ್ನು ಮುನ್ನಡೆಸುವುದು ಆಟಗಾರರು ಮತ್ತು ನಾಯಕನಿಗೆ ಬಿಟ್ಟದ್ದು” ಎಂದು ಹೇಳಿದ್ದಾರೆ. 


ಇದನ್ನೂ ಓದಿ: Amit Mishra ‘1 ವಾರ ಸಗಣಿಯಲ್ಲಿರು’ ಎಂದಿದ್ದ ಪಾಕ್ ನಟಿಗೆ ಅಮಿತ್ ಮಿಶ್ರಾ ತಿರುಗೇಟು!


ರೋಹಿತ್ ತುಂಬಾ ಚೆನ್ನಾಗಿ ಆಟವಾಡುತ್ತಿದ್ದಾರೆ. ಇಡೀ ತಂಡವು ದೊಡ್ಡ ಪ್ರಮಾಣದಲ್ಲಿ ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ. ಕೇವಲ 18 ಗಂಟೆಗಳ ಹಿಂದೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಭಾರತದಂತಹ ದೊಡ್ಡ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುವತ್ತ ತಮ್ಮ ತಂಡದ ಗಮನವಿತ್ತು ಎಂದು ಅಫ್ಘಾನಿಸ್ತಾನ ಲೆಗ್ ಸ್ಪಿನ್ನರ್ ರಶೀದ್ ಖಾನ್ ಹೇಳಿದ್ದಾರೆ. ಆದರೆ, ಹಾಗಾಗದೆ ಅಫ್ಘಾನಿಸ್ತಾನ ತಂಡ ಭಾರಿ ಅಂತರದಿಂದ ಪಂದ್ಯ ಸೋತಿತು” ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.