ನವದೆಹಲಿ: ಏಷ್ಯಾಕಪ್‍ನಲ್ಲಿ ಟೀಂ ಇಂಡಿಯಾದ ಪ್ರದರ್ಶನವು ತುಂಬಾ ಕಳಪೆಯಾಗಿತ್ತು. ಸೂಪರ್-4ರಲ್ಲಿಯೇ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಪಾಕಿಸ್ತಾನವನ್ನು ಸೋಲಿಸುವ ಮೂಲಕ ಏಷ್ಯಾಕಪ್‍ನಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿತ್ತು. ಆದರೆ ಸೂಪರ್-4ರ ಹೊತ್ತಿಗೆ ತಂಡದ ಸಂಪೂರ್ಣ ಆಟವೇ ಬದಲಾಗಿತ್ತು. ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಆಟಗಾರನೊಬ್ಬ ಸಂಪೂರ್ಣ ವೈಫಲ್ಯ ಅನುಭವಿಸಿದರು. ಮುಂದಿನ ದಿನಗಳಲ್ಲಿ ಈ ಆಟಗಾರ ಟೀಂ ಇಂಡಿಯಾದ ಟಿ-20 ತಂಡದಿಂದಲೇ ಹೊರಗುಳಿಯುವ ಸಾಧ್ಯತೆ ಇದೆ.
ಏಷ್ಯಾಕಪ್‌ನಲ್ಲಿ ಕಳಪೆ ಪ್ರದರ್ಶನ!
ಏಷ್ಯಾಕಪ್‍ನಲ್ಲಿ ಟೀಂ ಇಂಡಿಯಾ 5 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದಿದೆ. ಈ ಎಲ್ಲಾ ಪಂದ್ಯಗಳಲ್ಲಿ ಟೀಂ ಇಂಡಿಯಾ ವಿಭಿನ್ನ ಆಟಗಾರರೊಂದಿಗೆ ಮೈದಾನಕ್ಕೆ ಇಳಿದಿತ್ತು. ವಿಕೆಟ್ ಕೀಪರ್ ಆಗಿ ರಿಷಭ್ ಪಂತ್‍ಗೆ ನಿರಂತರವಾಗಿ ಅವಕಾಶ ನೀಡಲಾಯಿತು. ಆದರೆ ಪಂತ್ ಒಂದೇ ಒಂದು ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಡೀ ಟೂರ್ನಿಯಲ್ಲಿ ಪಂತ್ ಕಳಪೆ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾದ ದೌರ್ಬಲ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ: Virat Kohli : ಚೊಚ್ಚಲ ಶತಕ ಸಿಡಿಸಿ ಭಾವುಕರಾಗಿ, ಮದುವೆ ಉಂಗುರಕ್ಕೆ ಕಿಸ್ ಮಾಡಿದ ಕೊಹ್ಲಿ
ನಿರಂತರವಾಗಿ ಅವಕಾಶಗಳು ವ್ಯರ್ಥ
ಏಷ್ಯಾಕಪ್‍ನಲ್ಲಿ ರಿಷಭ್ ಪಂತ್ 30ರನ್ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು 16 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು. ಇದುವೇ ಈ ಪಂದ್ಯಾವಳಿಯಲ್ಲಿ ಅವರ ಅತ್ಯುತ್ತಮ ಸ್ಕೋರ್. ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಂತ್ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅದೇ ವೇಳೆ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 13 ಎಸೆತಗಳಲ್ಲಿ 17 ರನ್ ಗಳಿಸುವಷ್ಟರಲ್ಲಿ ಪಂತ್ ವಿಕೆಟ್ ಕಳೆದುಕೊಂಡರು. ಟಿ-20 ಕ್ರಿಕೆಟ್‌ನಲ್ಲಿ ಅವರ ಕಳಪೆ ಪ್ರದರ್ಶನ ಮತ್ತೊಮ್ಮೆ ಕಂಡುಬಂದಿದೆ.
ಟಿ-20 ಕ್ರಿಕೆಟ್‌ನಲ್ಲಿ ಸಂಪೂರ್ಣ ವಿಫಲ
ಟೀಂ ಇಂಡಿಯಾ ಮುಂಬರುವ ತಿಂಗಳಲ್ಲಿ T20 ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯನ್ನು ಆಡಬೇಕಾಗಿದೆ. ಆದ್ದರಿಂದ ರಿಷಭ್ ಪಂತ್ ಅವರ ಈ ಕಳಪೆ ಪ್ರದರ್ಶನದಿಂದಾಗಿ ತಂಡದಲ್ಲಿ ಅವಕಾಶ ಸಿಗದೆ ಇರಬಹುದು. ಪಂತ್ ಇದುವರೆಗೆ ಟೀಂ ಇಂಡಿಯಾ ಪರ 58 ಟಿ-20 ಪಂದ್ಯಗಳನ್ನಾಡಿದ್ದು, 23.95ರ ಸರಾಸರಿಯಲ್ಲಿ 934 ರನ್ ಗಳಿಸಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಟೀಂ ಇಂಡಿಯಾದ ಮೊದಲ ಆಯ್ಕೆ ದಿನೇಶ್ ಕಾರ್ತಿಕ್ ಆಗಿರಬಹುದು. ಮತ್ತೊಂದೆಡೆ ಪಂತ್ ಅವರ ಟಿ-20 ವೃತ್ತಿಜೀವನ ಇದೀಗ ಅಪಾಯದಲ್ಲಿದೆ. ಏಷ್ಯಾಕಪ್ ಟೂರ್ನಿಯಿಂದಲೇ ಅವರ ಟಿ-20 ವೃತ್ತಿಜೀವನ ಅಂತ್ಯವಾಗುತ್ತಾ? ಅನ್ನೋ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ: IND vs AFG : ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾಗೆ 111 ರನ್ ಗಳ ಜಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.