Team India Coach Vikram Rathour Prediction: ವಿಂಡ್ಸರ್ ಪಾರ್ಕ್‌ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ 171 ರನ್ ಗಳಿಸಿದ ರೀತಿಯಿಂದ ಪ್ರಭಾವಿತನಾಗಿದ್ದೇನೆ. ಆರಂಭಿಕ ಬ್ಯಾಟ್ಸ್‌ಮನ್ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ರಾಷ್ಟ್ರೀಯ ತಂಡದೊಂದಿಗೆ ಭರವಸೆಯ ಭವಿಷ್ಯವನ್ನು ಹೊಂದಿದ್ದಾರೆ ಎಂದು ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮೂರು ದಿನಗಳಲ್ಲಿ ಇನಿಂಗ್ಸ್ ಮತ್ತು 141 ರನ್‌ಗಳಿಂದ ಗೆಲುವು ಕಂಡ ಭಾರತಕ್ಕೆ ಅದ್ಭುತ ಕೊಡುಗೆಯನ್ನು 21 ವರ್ಷದ ಜೈಸ್ವಾಲ್ ನೀಡಿದ್ದರು. ಈ ಕಾರಣದಿಂದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.


ಇದನ್ನೂ ಓದಿ: Most Grand Slam Winner: ಅತಿಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ಟಾಪ್ 5 ಆಟಗಾರರು


ಜೈಸ್ವಾಲ್ ಅವರ 171 ರನ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಮೂರನೇ ಗರಿಷ್ಠ ಸ್ಕೋರ್ ಆಗಿದೆ. ವಿಕ್ರಮ್ ರಾಥೋರ್ ಮಾತನಾಡಿದ್ದು, :ನಾನು ಮೊದಲು ಆಯ್ಕೆಗಾರನಾಗಿದ್ದೆ. ಆದ್ದರಿಂದ ನೀವು ಆಟಗಾರನನ್ನು ಆಯ್ಕೆ ಮಾಡಿದಾಗ, ನೀವು ಮುಂದಿನ 10 ವರ್ಷಗಳ ಕಾಲ ಭಾರತಕ್ಕಾಗಿ ಆಡುವ ಉದ್ದೇಶದಿಂದ ಅವರನ್ನು ಆಯ್ಕೆ ಮಾಡಬೇಕು. ಅವನಿಗೆ ಖಂಡಿತವಾಗಿಯೂ ಆ ಸಾಮರ್ಥ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಯಶಸ್ವಿ ಜೊತೆ ಹಿಂದೆ ಕೆಲಸ ಮಾಡಿಲ್ಲ. ಐಪಿಎಲ್‌ ನಲ್ಲಿ ರನ್ ಗಳಿಸಿದ್ದನ್ನು ನೋಡಿದ್ದೇನೆ. ಅವರು ಎಷ್ಟು ಡೈನಾಮಿಕ್, ಸ್ಟ್ರೋಕ್-ಪ್ಲೇಯರ್ ಎಂಬುದನ್ನು ನೀವು ನೋಡಿರಬೇಕು. ಪರಿಸ್ಥಿತಿಗೆ ಅನುಗುಣವಾಗಿ ಆಟವನ್ನು ಬದಲಾಯಿಸಲು ಅವರು ಸಮರ್ಥರಾಗಿದ್ದಾರೆ” ಎಂದರು.


“ಎರಡನೇ ದಿನ ಅವರು ಊಟಕ್ಕೆ ಮೊದಲು 90 ಎಸೆತಗಳಲ್ಲಿ 20 ರನ್ ಗಳಿಸಿದರು. ಆದರೆ ಅವನ ಸಾಮಾನ್ಯ ಆಟವನ್ನು ಮೀರಿ ನಂತರ ದೊಡ್ಡ ರನ್ ಗಳಿಸಲು ಮುಂದಾದರು. ಯಶಸ್ವಿಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದೊಂದಿಗೆ ಉತ್ತಮ ಸಾಮರ್ಥ್ಯ ಮತ್ತು ಉಜ್ವಲ ಭವಿಷ್ಯವನ್ನು ಹೊಂದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ” ಎಂದು ಹೇಳಿದರು.


ಜೈಸ್ವಾಲ್ ಹೊರತಾಗಿ, ರಾಥೋರ್ ಅವರು ಶುಭ್ಮನ್ ಗಿಲ್ ಅವರನ್ನು ಸಹ ಎಲ್ಲಾ ಮೂರು ಸ್ವರೂಪಗಳಲ್ಲಿ ದೀರ್ಘಕಾಲ ಭಾರತ ತಂಡದಲ್ಲಿ ಉಳಿಯುವ ಸಾಮಾರ್ಥ್ಯ ಇದೆ ಎಂದು ಹೇಳಿದರು. ಮೊದಲ ಟೆಸ್ಟ್‌ನಲ್ಲಿ, ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರ ವಿನಂತಿಯ ನಂತರ ಗಿಲ್ ಮೊದಲ ಬಾರಿಗೆ ಮೂರನೇ ಸ್ಥಾನದಲ್ಲಿ ಬ್ಯಾಟ್ ಮಾಡಿದರು. ಆದರೆ ಕೇವಲ ಆರು ರನ್ ಗಳಿಸಿದರು.


“ಶುಭ್ಮನ್ ಗಿಲ್ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ. ಇತರ ಸ್ವರೂಪಗಳಲ್ಲಿಯೂ ಆ ಸಾಮರ್ಥ್ಯವನ್ನು ತಲುಪಿದ್ದಾರೆ. ಟೆಸ್ಟ್ ಕ್ರಿಕೆಟ್‌ ನಲ್ಲೂ ರನ್ ಗಳಿಸಿದ್ದಾರೆ. ಕೆಲವೊಮ್ಮೆ ನಿರ್ದಿಷ್ಟ ಸ್ವರೂಪವು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅವರಲ್ಲಿರುವ ಸಾಮರ್ಥ್ಯ ನೋಡಿದರೆ, ಬ್ಯಾಟಿಂಗ್‌ ನಲ್ಲಿ ಅವರು ಭಾರತ ತಂಡದ ಭವಿಷ್ಯ ಬರೆಯುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಅವರು ಎಲ್ಲಾ ಮೂರು ಮಾದರಿಗಳಲ್ಲಿ ಸುದೀರ್ಘ ಕಾಲ ಭಾರತ ತಂಡದಲ್ಲಿ ಆಡಲಿದ್ದಾರೆ” ಎಂದರು.


ಇದನ್ನೂ ಓದಿ: ಟೀಂ ಇಂಡಿಯಾದ ಹೊಸ ನಾಯಕನಾಗಿ ಈ ಆಲ್’ರೌಂಡರ್ ನೇಮಕ: ರೋಹಿತ್ ಪಾರುಪತ್ಯ ಅಂತ್ಯ!


“ ಒಂದು ಇನ್ನಿಂಗ್ಸ್ ಆಧಾರದಲ್ಲಿ ಯಾವುದನ್ನೂ ನಿರ್ಧರಿಸಬೇಕಿಲ್ಲ. ಸಾಕಷ್ಟು ಸಮಯ ಸಿಕ್ಕಿದೆ ಮತ್ತು ಈ ಪರಿಸ್ಥಿತಿಯಲ್ಲಿ ಅವರು ಖಂಡಿತವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಸ್ಟ್ರೋಕ್-ಪ್ಲೇಯರ್ ಆಗಿದ್ದು ಅವನು ಆಟವನ್ನು ಮುಂದಕ್ಕೆ ಕೊಂಡೊಯ್ಯಬಲ್ಲನು. ಅಂತಹ ಬ್ಯಾಟ್ಸ್‌ಮನ್ 3ನೇ ಸ್ಥಾನದಲ್ಲಿರುವುದು ತುಂಬಾ ಪ್ರಯೋಜನಕಾರಿ. ಒಳ್ಳೆಯ ವಿಷಯವೆಂದರೆ ಅವರ ಶ್ರಮಕ್ಕೆ ಕೊರತೆಯಿಲ್ಲ” ಎಂದು ಹೊಗಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.