Most Grand Slam Winner: ಅತಿಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ಟಾಪ್ 5 ಆಟಗಾರರು

Wimbledon 2023: ಈ ಹಿಂದೆ 2022 ಯುಎಸ್‌ ಓಪನ್‌ ಟೂರ್ನಿಯಲ್ಲಿ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಕಿರೀಟ ಜಯಿಸಿದ್ದ ಕಾರ್ಲೊಸ್‍ಗೆ ಇದು 2ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಟ್ರೋಫಿಯಾಗಿದೆ.

Most Grand Slam Winner: ಕಳೆದ 10 ವರ್ಷಗಳಿಂದ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದಿದ್ದ ಸರ್ಬಿಯಾದ ಶ್ರೇಷ್ಠ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‍ರಿಗೆ ಸೋಲಿನ ರುಚಿ ತೋರಿಸಿದ ವಿಶ್ವ ಶ್ರೇಯಾಂಕದ ಆಟಗಾರ ಕಾರ್ಲೊಸ್‌ ಅಲ್ಕರಾಝ್‌ ಚೊಚ್ಚಲ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡು ಸಂಭ್ರಮಿಸಿದರು. ಈ ಹಿಂದೆ 2022 ಯುಎಸ್‌ ಓಪನ್‌ ಟೂರ್ನಿಯಲ್ಲಿ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಕಿರೀಟ ಜಯಿಸಿದ್ದ ಕಾರ್ಲೊಸ್‍ಗೆ ಇದು 2ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಟ್ರೋಫಿಯಾಗಿದೆ. ಪುರುಷರ ಟೆನಿಸ್‍ನಲ್ಲಿ ಅತಿಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್‌ ಟ್ರೋಫಿ ಗೆದ್ದ ಟಾಪ್ 5 ಆಟಗಾರರ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸರ್ಬಿಯಾದ ಶ್ರೇಷ್ಠ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‍ ಅತಿಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ನಂ.1 ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. 10 ಆಸ್ಟ್ರೇಲಿಯನ್ ಓಪನ್, 3 ಫ್ರೆಂಚ್ ಓಪನ್, 3 ಯುಎಸ್ ಓಪನ್ ಮತ್ತು 7 ವಿಂಬಲ್ಡನ್ ಸೇರಿದಂತೆ ಒಟ್ಟು 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

2 /5

ಪುರುಷರ ಟೆನಿಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಎನಿಸಿಕೊಂಡಿರುವ ಸ್ಪ್ಯಾನಿಷ್ ಟೆನಿಸ್ ಸ್ಟಾರ್ ರಾಫೆಲ್ ನಡಾಲ್ ಅವರು 14 ಫ್ರೆಂಚ್ ಓಪನ್, 4 ಯುಎಸ್ ಓಪನ್, 2 ಆಸ್ಟ್ರೇಲಿಯನ್ ಮತ್ತು 2 ವಿಂಬಲ್ಡನ್ ಸೇರಿದಂತೆ ಒಟ್ಟು 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

3 /5

ಕಳೆದ ಸೆಪ್ಟೆಂಬರ್‌ನಲ್ಲಿ ಟೆನ್ನಿಸ್ ಆಟಕ್ಕೆ ನಿವೃತ್ತಿ ಘೋಷಿಸಿದ ಸ್ವಿಟ್ಜರ್ಲ್ಯಾಂಡ್ ತಾರೆ ರೋಜರ್ ಫೆಡರರ್ 8 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. 6 ಆಸ್ಟ್ರೇಲಿಯನ್ ಓಪನ್, 5 ಯುಎಸ್ ಓಪನ್ ಮತ್ತು 1 ಫ್ರೆಂಚ್ ಓಪನ್ ಸೇರಿದಂತೆ ಒಟ್ಟು 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

4 /5

ಲೆಜೆಂಡರಿ ಟೆನಿಸ್ ಆಟಗಾರ ಪೀಟ್ ಸಾಂಪ್ರಾಸ್ ಅಮೆರಿಕದ ಮಾಜಿ ವಿಶ್ವದ ನಂ. 1 ಟೆನಿಸ್ ಆಟಗಾರ. ಇವರು 7 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದು, 5 ಯುಎಸ್ ಓಪನ್ ಮತ್ತು 2 ಆಸ್ಟ್ರೇಲಿಯನ್ ಓಪನ್ ಸೇರಿದಂತೆ ಒಟ್ಟು 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

5 /5

ಆಸ್ಟ್ರೇಲಿಯಾದ ಮಾಜಿ ಟೆನಿಸ್ ಆಟಗಾರ ರಾಯ್ ಎಮರ್ಸನ್ 6 ಆಸ್ಟ್ರೇಲಿಯನ್ ಓಪನ್, 2 ವಿಂಬಲ್ಡನ್, 2 ಫ್ರೆಂಚ್ ಓಪನ್ ಮತ್ತು 2 ಯುಎಸ್ ಓಪನ್ ಸೇರಿದಂತೆ ಒಟ್ಟು 12 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.