India vs Sri Lanka: ಕ್ರೀಡಾಸ್ಫೂರ್ತಿ ಮೆರೆದು ಅಭಿಮಾನಿಗಳ ಹೃದಯ ಗೆದ್ದ ಭಾರತೀಯ ಕ್ರಿಕೆಟಿಗರು
ಭಾರತ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಶ್ರೀಲಂಕಾ ತಂಡದ ಹಿರಿಯ ವೇಗಿ ಸುರಂಗ ಲಕ್ಮಲ್(Suranga Lakmal) ಅವರಿಗೆ ವಿದಾಯದ ಟೆಸ್ಟ್ ಪಂದ್ಯವಾಗಿತ್ತು.
ಬೆಂಗಳೂರು: ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ(Team India) ಭರ್ಜರಿ ಗೆಲುವು ಸಾಧಿಸಿದೆ. ಶ್ರೀಲಂಕಾ ವಿರುದ್ಧ 238 ರನ್ ಗಳ ಗೆಲುವು ಸಾಧಿಸುವ ಮೂಲಕ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯವಾದ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ 2ನೇ ಹಾಗೂ ಹಗಲು ರಾತ್ರಿ ಟೆಸ್ಟ್ ಪಂದ್ಯ ಹಲವು ಸುಮಧುರ ಕ್ಷಣಗಳಿಗೆ ಸಾಕ್ಷಿಯಾಯಿತು. ಗೆಲುವಿನ ಸಂಭ್ರಮದ ಮಧ್ಯೆಯೇ ಭಾರತೀಯ ಕ್ರಿಕೆಟಿಗರು ಮೈದಾನದಲ್ಲಿಯೇ ಕ್ರೀಡಾಸ್ಫೂರ್ತಿ ಮೆರೆದು ಅಭಿಮಾನಿಗಳ ಹೃದಯ ಗೆದಿದ್ದಾರೆ.
Team India: ತಮ್ಮ ಟೆಸ್ಟ್ ವೃತ್ತಿಜೀವನ ಬಹುತೇಕ ಮುಗಿದಿದ್ದರೂ ನಿವೃತ್ತಿ ಘೋಷಿಸದ 4 ಬ್ಯಾಟ್ಸ್‌ಮನ್‌ಗಳು!
ಹೌದು, ಭಾರತ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಶ್ರೀಲಂಕಾ ತಂಡದ ಹಿರಿಯ ವೇಗಿ ಸುರಂಗ ಲಕ್ಮಲ್(Suranga Lakmal) ಅವರಿಗೆ ವಿದಾಯದ ಟೆಸ್ಟ್ ಪಂದ್ಯವಾಗಿತ್ತು. ತಮ್ಮ ವೃತ್ತಿ ಜೀವನದ ಕೊನೆ ಟೆಸ್ಟ್ ಪಂದ್ಯವನ್ನಾಡಿದ ಲಕ್ಮಲ್ ಅವರಿಗೆ ಭಾರತೀಯ ಕ್ರಿಕೆಟಿಗರು ಮೈದಾನದಲ್ಲಿ ಗೌರವ ಸಲ್ಲಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
58.2ನೇ ಓವರ್ ನ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ 1 ರನ್ ಗಳಿಸಿದ್ದ ಲಕ್ಮಲ್ ಔಟ್ ಆದರು. ಈ ವೇಳೆ ಪೆವಿಲಿಯನ್ ನತ್ತ ತೆರಳುತ್ತಿದ್ದ ಶ್ರೀಲಂಕಾದ ಹಿರಿಯ ಆಟಗಾರನಿಗೆ ಭಾರತೀಯ ಕ್ರಿಕೆಟಿಗರು ಗೌರವ ಸಲ್ಲಿಸಿದರು. ಔಟಾಗಿ ಪೆವಿಲಿಯನ್ ಕಡೆಗೆ ಹೋಗುತ್ತಿದ್ದ ಲಕ್ಮಲ್ ಅವರ ಬಳಿ ಬಂದ ವೇಗಿ ಜಸ್ಪ್ರೀತ್ ಬುಮ್ರಾ, ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ(Virat Kohli) ಬೆನ್ನುತಟ್ಟುವ ಮೂಲಕ ಅಭಿನಂದಿಸಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅತಿರೇಕದ ಅಭಿಮಾನ: ಕೊಹ್ಲಿ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು ಜೈಲು ಪಾಲು
ಭಾರತೀಯ ಕ್ರಿಕೆಟಿಗರು ಶ್ರೀಲಂಕಾ(Sri Lanka)ದ ಹಿರಿಯ ಆಟಗಾರನಿಗೆ ತೋರಿದ ಗೌರವಕ್ಕೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಆಟಗಾರರ ಈ ಕ್ರೀಡಾಸ್ಫೂರ್ತಿ ಅಭಿಮಾನಿಗಳ ಹೃದಯ ಗೆದ್ದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.