ಅತಿರೇಕದ ಅಭಿಮಾನ: ಕೊಹ್ಲಿ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು ಜೈಲು ಪಾಲು

ಭಾರತ vs ಶ್ರೀಲಂಕಾ  ಟೆಸ್ಟ್ ಪಂದ್ಯ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ವಿರಾಟ್ ಕೊಹ್ಲಿ ಬಳಿ ಧಿಡೀರ್ ಓಡಿ ಬಂದ ಈ ಯುವಕರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. 

Written by - VISHWANATH HARIHARA | Edited by - Yashaswini V | Last Updated : Mar 14, 2022, 01:49 PM IST
  • ನೆನ್ನೆ (ಭಾನುವಾರ) ರಾತ್ರಿ ಭಾರತ vs ಶ್ರೀಲಂಕಾ ಟೆಸ್ಟ್ ಪಂದ್ಯದ ವೇಳೆ ಅವಾಂತರ ಸೃಷ್ಟಿಸಿದ ಯುವಕರು
  • ಭಾನುವಾರ ರಾತ್ರಿ 10:15ರ ಸುಮಾರಿಗೆ ದಿನದಾಟದ 2 ಓವರ್ ಬಾಕಿ ಇರುವ ಸಂದರ್ಭದಲ್ಲಿ ಯುವಕರಿಂದ ಹುಚ್ಚಾಟ
  • ಅತೀರೇಕದ ಅಭಿಮಾನ ತೋರಿಸಿ ಜೈಲು ಪಾಲಾಗಿರುವ ಯುವಕರು
ಅತಿರೇಕದ ಅಭಿಮಾನ: ಕೊಹ್ಲಿ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು ಜೈಲು ಪಾಲು title=
Ind vs Sl 2nd test

ಬೆಂಗಳೂರು: ಭಾರತ vs ಶ್ರೀಲಂಕಾ  ಟೆಸ್ಟ್ ಪಂದ್ಯದ ಎರಡನೇ ದಿನ ನಾಲ್ವರು ಅತಿರೇಕದ ಅಭಿಮಾನ ತೋರಿಸಿ ಜೈಲು ಪಾಲಾಗಿರುವ ಘಟನೆ ನಡೆದಿದೆ. 

ನೆನ್ನೆ (ಭಾನುವಾರ) ರಾತ್ರಿ   ಭಾರತ vs ಶ್ರೀಲಂಕಾ  ಟೆಸ್ಟ್ (Ind vs Sl Test) ಪಂದ್ಯದ ವೇಳೆ ಏಕಾಏಕಿ ಮೈದಾನಕ್ಕಿಳಿದ  ಕೆಲ ಯುವಕರು ವಿರಾಟ್ ಕೊಹ್ಲಿ ಬಳಿಗೆ ತೆರಳಿ ಮೈದಾನದಲ್ಲಿ ಅವಾಂತರ ಸೃಷ್ಠಿಸಿದ್ದರು. ಭಾನುವಾರ ರಾತ್ರಿ 10:15ರ ಸುಮಾರಿಗೆ ದಿನದಾಟದ 2 ಓವರ್ ಬಾಕಿ ಇರುವ ಸಂದರ್ಭದಲ್ಲಿ ಬೆಂಗಳೂರಿನ ನಾಲ್ವರು ಯುವಕರಿಂದ ಈ ಹುಚ್ಚಾಟ ನಡೆದಿದೆ. 

ಇದನ್ನೂ ಓದಿ- ಬೆಂಗಳೂರಿನಲ್ಲಿ ಕ್ರಿಕೆಟ್ ಹವಾ: ಹೊರ ರಾಜ್ಯಗಳಿಂದಲೂ ಬಂದ ಫ್ಯಾನ್ಸ್

ಭಾರತ vs ಶ್ರೀಲಂಕಾ  ಟೆಸ್ಟ್ ಪಂದ್ಯ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ವಿರಾಟ್ ಕೊಹ್ಲಿ (Virat Kohli) ಬಳಿ ಓಡಿ ಬಂದ ಈ ಯುವಕರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೇಳೆ ಸೆಕ್ಯೂರಿಟಿ ಕೈಗೂ ಸಿಗದೆ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ.

ಇದನ್ನೂ ಓದಿ- ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ತೆಗೆದು ಬಿಸಿಸಿಐ ದೊಡ್ಡ ತಪ್ಪು ಮಾಡಿದೆ

ಹೆಚ್ಚಿನ ಭದ್ರತೆ ಇದ್ದರೂ  ಕ್ರೀಡಾಂಗಣದ ಒಳಗೆ ಅತಿಕ್ರಮ ಪ್ರವೇಶ ಮತ್ತು ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ನಾಲ್ವರನ್ನು ವಶಕ್ಕೆ ಪಡೆದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News