Team India, Prithvi Shaw News: ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಈ ಒಬ್ಬ ಯುವ ಬ್ಯಾಟ್ಸ್‌ಮನ್ ಸದ್ಯ ಫಾರ್ಮ್‌ ಗೆ ಮರಳಿದ್ದಾರೆ. ಕುತೂಹಲಕಾರಿ ವಿಷಯ ಅಂದ್ರೆ, ಐಪಿಎಲ್-2023ರ ಕೊನೆಯ ಋತುವಿನಲ್ಲಿ, ಕಳಪೆ ಪ್ರದರ್ಶನ ನೀಡಿದ್ದ ಈ ಕಿಲಾಡಿ ಆಟಗಾರ, ಸದ್ಯ ದುಲೀಪ್ ಟ್ರೋಫಿಯಲ್ಲಿ ವಿಧ್ವಂಸಕತೆಯನ್ನೇ ಸೃಷ್ಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅನ್ಯಭಾಗ್ಯ ಯೋಜನೆ: ಪಡಿತರ ಚೀಟಿಯಲ್ಲಿ ನೂನ್ಯತೆಗಳಿದ್ದಲ್ಲಿ ಕೂಡಲೇ ಸರಿಪಡಿಸಿಕೊಳ್ಳಿ..!


ಇಂಡಿಯನ್ ಪ್ರೀಮಿಯರ್ ಲೀಗ್ 16 ನೇ ಋತುವಿನಲ್ಲಿ ಯುವ ಆಟಗಾರನ ಬ್ಯಾಟ್ ಶಾಂತವಾಗಿತ್ತು. ಇದೇ ಕಾರಣಕ್ಕೆ ಆಯ್ಕೆಗಾರರು ಅವರಿಗೆ ಟೀಂ ಇಂಡಿಯಾಗೆ ಮರಳುವ ಅವಕಾಶವನ್ನೂ ನೀಡಲಿಲ್ಲ. ಕೆಲ ಆಟಗಾರರು ಐಪಿಎಲ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದರೂ, ಇನ್ನೂ ಕೆಲ ಆಟಗಾರರು ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ.


ದುಲೀಪ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ:


ಸದ್ಯ ಚರ್ಚೆಯಲ್ಲಿರುವ ಆಟಗಾರ ಬೇರೆ ಯಾರೂ ಅಲ್ಲ, 23 ವರ್ಷದ ಮುಂಬೈ ಬ್ಯಾಟ್ಸ್‌ಮನ್ ಪೃಥ್ವಿ ಶಾ. ಟೀಂ ಇಂಡಿಯಾ ಪರ ಎಲ್ಲಾ ಮೂರು ಮಾದರಿಯ ಪಂದ್ಯಗಳನ್ನಾಡಿರುವ ಪೃಥ್ವಿ ಇದೀಗ ದುಲೀಪ್ ಟ್ರೋಫಿ ಫೈನಲ್-2023ರಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾಗೆ ಮರಳುವ ಭರವಸೆಯನ್ನು ಅಭಿಮಾನಿಗಳಲ್ಲಿ ಮೂಡಿಸಿದ್ದಾರೆ. ಪೃಥ್ವಿ ಈ ದೇಶೀಯ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ಪಂದ್ಯದಲ್ಲಿ ಪಶ್ಚಿಮ ವಲಯದ ಪರವಾಗಿ 101 ಎಸೆತಗಳನ್ನು ಎದುರಿಸಿದ ಅವರು, 9 ಬೌಂಡರಿಗಳ ನೆರವಿನಿಂದ 65 ರನ್ ಸೇರಿಸಿದರು.


ದಕ್ಷಿಣ ವಲಯ ವಿರುದ್ಧದ ದುಲೀಪ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಪೃಥ್ವಿ ಶಾ ಅರ್ಧಶತಕ ಬಾರಿಸಿದ್ದಾರೆ. ಇದಲ್ಲದೇ ಎರಡನೇ ವಿಕೆಟ್‌ ಗೆ ಹಾರ್ವಿಕ್ ದೇಸಾಯಿ ಅವರೊಂದಿಗೆ 70 ರನ್‌ ಗಳ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ. ಈ ಯುವ ಬ್ಯಾಟ್ಸ್‌ಮನ್ ಕಳೆದ 2 ವರ್ಷಗಳಿಂದ ಟೀಂ ಇಂಡಿಯಾಕ್ಕೆ ಮರಳಲು ಕಾಯುತ್ತಿದ್ದಾರೆ. ಆದರೆ ಆಯ್ಕೆದಾರರು ಅವರಿಗೆ ಅವಕಾಶವನ್ನೇ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಕೆಲ ಮೂಲಗಳ ಪ್ರಕಾರ, ಟೀಂ ಇಂಡಿಯಾಗೆ ಅವರು ನಿವೃತ್ತಿ ಘೋಷಿಸಲಿದ್ದಾರೆ.


ಇದನ್ನೂ ಓದಿ: ಬೋಳು ತಲೆಯಲ್ಲಿಯೂ ಕೂದಲು ಮೂಡುವಂತೆ ಮಾಡುತ್ತದೆ ಈ ಮನೆ ಮನೆ ಮದ್ದು


ಪೃಥ್ವಿ ಜುಲೈ 2021 ರಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ತನ್ನ ಏಕೈಕ ಮತ್ತು ಕೊನೆಯ T20 ಪಂದ್ಯವನ್ನು ಆಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ