Team India Cricketer Murali Vijay: ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಕತೆ ಇದು. ಇವರು ತಮ್ಮ ಸ್ವಂತ ಗೆಳೆಯನ ಪತ್ನಿಯನ್ನೇ ಪ್ರೀತಿಸಿ, ವಿಚ್ಛೇದನದ ಬಳಿಕ ಮದುವೆಯಾದರು. ಒಂದು ಕಾಲದಲ್ಲಿ ದಿನೇಶ್ ಕಾರ್ತಿಕ್‌ ಹಾಗೂ ಮುರಳಿ ವಿಜಯ್‌ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಇವರಿಬ್ಬರು ಭಾರತ ಕ್ರಿಕೆಟ್‌ ತಂಡದ ಆಟಗಾರರು. ಆದರೆ ಮುರಳಿ ವಿಜಯ್ ಕಾರಣದಿಂದ ದಿನೇಶ್ ಕಾರ್ತಿಕ್ ವಿಚ್ಛೇದನ ಪಡೆದರು. ಈ ವಿಚ್ಛೇದನದಿಂದ ಇಬ್ಬರ ಸ್ನೇಹ ಶಾಶ್ವತವಾಗಿ ಮುರಿದುಹೋಯಿತು.  


COMMERCIAL BREAK
SCROLL TO CONTINUE READING

ಅದು 2007 ರ ವರ್ಷ, 21 ವರ್ಷದ ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿಕಿತಾ ಅವರ ತಂದೆ ಮತ್ತು ದಿನೇಶ್ ಅವರ ತಂದೆ ಕೂಡ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ನಿಕಿತಾ ಮತ್ತು ದಿನೇಶ್ ಬಾಲ್ಯದಿಂದಲೂ ಪರಸ್ಪರ ಪರಿಚಿತರು, ಒಟ್ಟಿಗೆ ಬೆಳೆದವರು. ನಿಕಿತಾ ಮತ್ತು ದಿನೇಶ್ ಮದುವೆ ವಯಸ್ಸಿಗೆ ಬಂದ ಕೂಡಲೇ ಇಬ್ಬರ ಮನೆಯವರೂ ಮದುವೆಗೆ ಒಪ್ಪಿಗೆ ಸೂಚಿಸಿದ್ದು, ದಿನೇಶ್ ಮತ್ತು ನಿಕಿತಾ ಮುಂಬೈನಲ್ಲಿ ಮದುವೆಯಾದರು. 


ಇದನ್ನೂ ಓದಿ: ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಐರ್ಲೆಂಡ್ 


2012 ರಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ದಿನೇಶ್ ಕಾರ್ತಿಕ್ ಗೆ ಒಂದು ದೊಡ್ಡ ರಹಸ್ಯ ತಿಳಿಯಿತು ಎನ್ನಲಾಗಿದೆ. ತಮ್ಮ ಪತ್ನಿ ನಿಕಿತಾ ಹಾಗೂ ಸ್ನೇಹಿತ ಮುರಳಿ ವಿಜಯ್ ಅವರ ಸಂಬಂಧದ ಗುಟ್ಟು ದಿನೇಶ್‌ ಅವರಿಗೆ ತಿಳಿದಿದೆ. ನಂತರ ದಿನೇಶ್ ಕಾರ್ತಿಕ್ ವಿಚ್ಛೇದನ ಪಡೆಯಲು ನಿರ್ಧರಿಸಿದರು. 


2012ರಲ್ಲಿ ದಿನೇಶ್ ಕಾರ್ತಿಕ್‌ ವಿಚ್ಛೇದನ ಪಡೆದರು. ಬಳಿಕ ಅದೇ ವರ್ಷ ನಿಕಿತಾ ಮತ್ತು ಮುರಳಿ ವಿಜಯ್ ವಿವಾಹವಾದರು. 2013 ರಲ್ಲಿ ವಿಜಯ್ ಮತ್ತು ನಿಕಿತಾ ದಂಪತಿಗೆ ಮಗ ಜನಿಸಿದನು. ನಿಕಿತಾ ದಿನೇಶ್‌ಗೆ ವಿಚ್ಛೇದನ ನೀಡಿದಾಗ ಗರ್ಭಿಣಿಯಾಗಿದ್ದರು. 


ದಿನೇಶ್ ಕಾರ್ತಿಕ್ 2015 ರಲ್ಲಿ ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಜೊತೆ ವಿವಾಹವಾದರು. 2021 ರಲ್ಲಿ ದಿನೇಶ್ ಮತ್ತು ದೀಪಿಕಾ ಅವಳಿ ಮಕ್ಕಳ ಪೋಷಕರಾದರು. 


ಇದನ್ನೂ ಓದಿ: ಮದುವೆಗೂ ಮುನ್ನ ತಂದೆಯಾದ ಕ್ರಿಕೆಟಿಗರು.. ಈ ಪಟ್ಟಿಯಲ್ಲಿದ್ದಾರೆ ಭಾರತದ ಸ್ಟಾರ್‌ ಪ್ಲೇಯರ್!‌ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.