IND vs SL: ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಲ್ಲಿ ಭಾರಿ ಬದಲಾವಣೆಗಳನ್ನು ಕಾಣಬಹುದು. ಮುಖ್ಯ ಕೋಚ್ ಗೌತಮ್ ಗಂಭೀರ್ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮೂರನೇ ಟಿ20ಯ ಆಡುವ ಹನ್ನೊಂದರಲ್ಲಿ 3 ಆಟಗಾರರನ್ನು ಹೊರಗಿಡಬಹುದು ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಶ್ರೀಲಂಕಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳನ್ನು ಭಾರತ ತಂಡ ಗೆದ್ದು ಸರಣಿಯನ್ನು ವಶಪಡೆಸಿಕೊಂಡಿದೆ. ಇದೀಗ ಮೂರನೇ ಹಾಗೂ ಕೊನೆಯ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಸರದಿ. ಆದರೆ, ಅದಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ 3 ಬದಲಾವಣೆಗಳನ್ನು ಕಾಣಬಹುದಾಗಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಟೀಂ ಇಂಡಿಯಾದ ಆಟಗಾರರ ಪೈಕಿ ಏಕಕಾಲದಲ್ಲಿ 3 ಆಟಗಾರರನ್ನು ಕೈಬಿಡಬಹುದು ಎಂದು ಊಹಿಸಲಾಗಿದ್ದು, ಕಳೆದ ಪಂದ್ಯದಲ್ಲಿ ಡಕ್‌ ಔಟ್‌ ಆಗಿ ಫೀಲ್ಡ್‌ನಿಂದ ಹೊರ ನಡೆದಿದ್ದ ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. 


ಇದನ್ನೂ ಓದಿ: 47 ಕೋಟಿ ಪಡೆದು ವಿರಾಟ್‌ ಕೊಹ್ಲಿಗೆ ಕೈ ಕೊಟ್ಟ ಆಟಗಾರ..RCB ಅಭಿಮಾನಿಗಳಿಗೆ ದೊಡ್ಡ ಅಘಾತ..!


ಈಗ ಸಂಜು ಸ್ಯಾಮ್ಸನ್ ಮೂರನೇ ಪಂದ್ಯದಲ್ಲಿ ಮುಂದುವರೆದರೆ, ಎರಡನೇ ಪಂದ್ಯದಂತೆ ಈ ಪಂದ್ಯದಿಂದಲೂ ಶುಭಮನ್ ಗಿಲ್ ಹೊರ ಉಳಿಯುತ್ತಾರೆ. ಸ್ಯಾಮ್ಸನ್ ತನ್ನ ಸಾಮರ್ಥ್ಯವನ್ನು ತೋರಿಸಲು ಮತ್ತೊಂದು ಅವಕಾಶವನ್ನು ಪಡೆಯುತ್ತಾರೆ. ಗೌತಮ್ ಗಂಭೀರ್ ಅವರು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಬಹುದು ಏಕೆಂದರೆ ಅವರು ODI ಸರಣಿಯ ಮೊದಲು ಗಿಲ್ ಸಂಪೂರ್ಣವಾಗಿ ಫಿಟ್ ಆಗಬೇಕೆಂದು ಬಯಸುತ್ತಾರೆ. 


ಶ್ರೀಲಂಕಾ ವಿರುದ್ಧದ ಮೂರನೇ ಟಿ20ಯ ಪ್ಲೇಯಿಂಗ್‌ XI ನಿಂದ ಗೌತಮ್ ಗಂಭೀರ್ ಕೈಬಿಡಬಹುದಾದ ಮೂವರು ಆಟಗಾರರು ಯಾರು ಎಂಬುದು ಈಗ ಪ್ರಶ್ನೆಯಾಗಿದೆ. ಹಾಗಾಗಿ ಇದರಲ್ಲಿ ಮೊದಲ ಹೆಸರು ರಿಂಕು ಸಿಂಗ್ ಅವರದ್ದೇ ಆಗಿರಬಹುದು. ರಿಂಕು ಸಿಂಗ್ ಮೊದಲ 2 ಟಿ20ಯಲ್ಲಿ ಕೇವಲ 2 ರನ್ ಗಳಿಸಿದ್ದಾರೆ. ಆದರೆ, ಗೌತಮ್ ಗಂಭೀರ್ ಏಕದಿನ ಸರಣಿಗೂ ಮುನ್ನ ಶಿವಂ ದುಬೆಗೆ ಮ್ಯಾಚ್ ಪ್ರಾಕ್ಟೀಸ್ ನೀಡುವ ಉದ್ದೇಶ ಹೊಂದಿದ್ದರೆ, ರಿಂಕು ಸಿಂಗ್ ಔಟ್ ಆಗಬೇಕಾಗಬಹುದು.


ಮೂರನೇ ಟಿ20ಯಲ್ಲಿ ಅಕ್ಷರ್ ಪಟೇಲ್ ಕೂಡ ಬೆಂಚ್ ಸೇರಲಿದ್ದಾರೆ. ವಾಷಿಂಗ್ಟನ್ ಸುಂದರ್‌ಗೆ ಅವಕಾಶ ನೀಡುವ ಉದ್ದೇಶದಿಂದ ಮೊದಲ 2 ಟಿ20 ಪಂದ್ಯಗಳಲ್ಲಿ 4 ವಿಕೆಟ್ ಪಡೆದು ಇನ್ನಿಂಗ್ಸ್‌ನಲ್ಲಿ ಅಜೇಯ 10 ರನ್ ಗಳಿಸಿದ ಅಕ್ಷರ್ ಬಗ್ಗೆ ಗೌತಮ್ ಗಂಭೀರ್ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಶಿವಂ ದುಬೆಯಂತೆ ಗಂಭೀರ್ ವಾಷಿಂಗ್ಟನ್ ಸುಂದರ್‌ಗೆ ಏಕದಿನ ಸರಣಿಗೂ ಮುನ್ನ ಪಂದ್ಯ ಅಭ್ಯಾಸಕ್ಕೆ ಅವಕಾಶ ನೀಡಲು ಬಯಸಿದ್ದಾರೆ.


ಇದನ್ನೂ ಓದಿ: ಕನಸಿನ ಊರಿಗೆ, ಮನ ಬಯಸಿದವರನ್ನು ಹರಸಿ ಸ್ವಿಟ್ಜರ್ಲೆಂಡ್‌ಗೆ ಹಾರಿದ ಸಾನಿಯಾ ಮಿರ್ಜಾ..!


ಶ್ರೀಲಂಕಾ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಕೆಲಸದ ಹೊರೆ ನಿರ್ವಹಣೆಗೆ ಒತ್ತು ನೀಡಿದ್ದರು. ಅದೇ ತತ್ವವನ್ನು ಅನುಸರಿಸಿ, ಗಂಭೀರ್ ಶ್ರೀಲಂಕಾ ವಿರುದ್ಧದ ಕೊನೆಯ T20 ನಲ್ಲಿ ಅರ್ಷದೀಪ್ ಸಿಂಗ್‌ಗೆ ವಿಶ್ರಾಂತಿ ನೀಡಬಹುದು ಮತ್ತು ಅವರ ಸ್ಥಾನವನ್ನು ಮತ್ತೊಬ್ಬ ಎಡಗೈ ಬೌಲರ್ ಖಲೀಲ್ ಅಹ್ಮದ್‌ಗೆ ಕೊಡಬಹುದು. ಟಿ20 ಸರಣಿಯ ನಂತರ ಅರ್ಷದೀಪ್ ಏಕದಿನ ಸರಣಿಯನ್ನು ಆಡಬೇಕು ಎಂಬುದನ್ನೂ ಗಂಭೀರ್ ಮನಸ್ಸಿನಲ್ಲಿಟ್ಟುಕೊಳ್ಳಲಿದ್ದಾರೆ.


ಟೀಂ ಇಂಡಿಯಾ ಪ್ಲೇಯಿಂಗ್‌ XI:
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್, ರಯಾನ್ ಪರಾಗ್, ರವಿ ಬಿಷ್ಣೋಯ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ