ಬುಮ್ರಾಕ್ಕಿಂತ ವೇಗದ ಬೌಲರ್ Team Indiaಗೆ ಸಿಕ್ಕಾಯ್ತು..! ಈತನ ಎಂಟ್ರಿಯಿಂದ ಖಚಿತವಾಯ್ತು WTC ಟ್ರೋಫಿ
WTC Final, India vs Australia: 29 ವರ್ಷದ ಬುಮ್ರಾ ಬಹಳ ದಿನಗಳಿಂದ ಫೀಲ್ಡ್’ನಿಂದ ಹೊರಗುಳಿದಿದ್ದಾರೆ. ಬೆನ್ನಿನ ಗಾಯದಿಂದ ತೊಂದರೆಗೀಡಾಗಿರುವ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬುಮ್ರಾ ಕಳೆದ ವರ್ಷ ಹೈದರಾಬಾದ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಮತ್ತೆ ಮೈದಾನಕ್ಕೆ ಇಳಿಯಲು ಸಾಧ್ಯವಾಗಲಿಲ್ಲ.
WTC Final, India vs Australia: ಭಾರತ ತಂಡವು ಜೂನ್ 7 ರಿಂದ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ನ ಅಂತಿಮ (WTC Final) ಪಂದ್ಯವನ್ನು ಆಡಲಿದೆ. ಈ ಪಂದ್ಯ ಇಂಗ್ಲೆಂಡ್’ನಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ತನ್ನ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಮಧ್ಯೆ ಟೀಂ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಅವರಂತಯೇ ವೇಗವಾಗಿ ಬೌಲಿಂಗ್ ಮಾಡುವ ಮಾರಕ ಬೌಲರ್ ಒಬ್ಬರು ಎಂಟ್ರಿ ಕೊಡುವ ಸಾಧ್ಯತೆ ಇದೆ. ಪ್ರಸಕ್ತ ಐಪಿಎಲ್ ಸೀಸನ್’ನಲ್ಲಿ ಅವರು ತಮ್ಮ ತೀಕ್ಷ್ಣವಾದ ಬೌಲಿಂಗ್’ನಿಂದ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ,
ಇದನ್ನೂ ಓದಿ: ಅಭಿವೃದ್ಧಿ ಆಗಬೇಕೆಂದರೆ ಇನ್ನೊಂದು ಬಾರಿ ಬೊಮ್ಮಾಯಿ ಅವರಿಗೆ ಮತ ಕೊಡಿ: ನಟ ಸುದೀಪ್
29 ವರ್ಷದ ಬುಮ್ರಾ ಬಹಳ ದಿನಗಳಿಂದ ಫೀಲ್ಡ್’ನಿಂದ ಹೊರಗುಳಿದಿದ್ದಾರೆ. ಬೆನ್ನಿನ ಗಾಯದಿಂದ ತೊಂದರೆಗೀಡಾಗಿರುವ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬುಮ್ರಾ ಕಳೆದ ವರ್ಷ ಹೈದರಾಬಾದ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಮತ್ತೆ ಮೈದಾನಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಪ್ರಸ್ತುತ ಐಪಿಎಲ್’ನ ಭಾಗವಾಗಲು ಸಹ ಸಾಧ್ಯವಾಗಿಲ್ಲ. ಆದರೆ ಒಂದು ವೇಳೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ಗೆ ಸಹ ಮೈದಾನಕ್ಕೆ ಮರಳಲು ಸಾಧ್ಯವಾಗದಿದ್ದರೆ, ಆ ಜಾಗಕ್ಕೆ ಬೇರೆ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಸದ್ಯ ಆಯ್ಕೆದಾರರ ಕಣ್ಣುಬಿದ್ದಿರುವುದು ಯುವ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಮೇಲೆ. ಅರ್ಜುನ್ ಪ್ರಸ್ತುತ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವರ್ಷ ಲೀಗ್’ಗೆ ಪಾದಾರ್ಪಣೆ ಮಾಡಿದ್ದು, ಸಾಕಷ್ಟು ಪ್ರಭಾವ ಬೀರಿದ್ದಾರೆ. ತಮ್ಮ ಮೊದಲ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ್ದ ಅವರು, 17 ರನ್ ನೀಡಿ ಶೂನ್ಯ ವಿಕೆಟ್ ಸಂಪಾದನೆ ಮಾಡಿದ್ದರು.
ಆ ಬಳಿಕ ಅವರು ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದರು. ಈ ಸಂದರ್ಭದಲ್ಲಿ ಕೊನೆಯ ವಿಕೆಟ್ ಕೀಳುವ ಮೂಲಕ ಸದ್ದು ಮಾಡಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದ ನಂತರ ಮಾತನಾಡಿದ ಮುಂಬೈ ಇಂಡಿಯನ್ಸ್ ವೇಗಿ ಅರ್ಜುನ್ ತೆಂಡೂಲ್ಕರ್, “ನಿಸ್ಸಂಶಯವಾಗಿ ನನ್ನ ಮೊದಲ ಐಪಿಎಲ್ ವಿಕೆಟ್ ಪಡೆದಿರುವುದು ಖುಷಿಯ ವಿಚಾರವಾಗಿದೆ. ನಾಯಕನ ಸೂಚನೆಗಳ ಪ್ರಕಾರ ಬೌಲಿಂಗ್ ಮಾಡಲು ಮತ್ತು ತಂಡದ ಯೋಜನೆಗೆ ಬದ್ಧವಾಗಿರಲು ನನಗೆ ಸಂತೋಷವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ನಾನು ಓಡಿ ಹೋಗುವ ಸಿಎಂ ಅಲ್ಲ ಎಂದ ಬೊಮ್ಮಾಯಿ
ಅರ್ಜುನ್ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ. ಪಂದ್ಯಕ್ಕೂ ಮುನ್ನ ಇಬ್ಬರೂ ಪರಸ್ಪರ ಏನೋ ಚರ್ಚೆ ಮಾಡುತ್ತಿದ್ದಂತೆ ಕಾಣುತ್ತಿತ್ತು. ಈ ಸಂಬಂಧ ಮಾತನಾಡಿ ಅರ್ಜುನ್, “ನಾವು (ಸಚಿನ್ ಮತ್ತು ಅರ್ಜುನ್) ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದೆವು. ಪಂದ್ಯಕ್ಕೂ ಮುನ್ನ ಯಾವ ರೀತಿ ಟೆಕ್ನಿಕ್ಸ್ ಟ್ರೈ ಮಾಡಬೇಕು ಎಂದು ಚರ್ಚಿಸುತ್ತೇವೆ. ಪ್ರತಿ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸುತ್ತೇನೆ” ಎಂದು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.