ಅಭಿವೃದ್ಧಿ ಆಗಬೇಕೆಂದರೆ ಇನ್ನೊಂದು ಬಾರಿ ಬೊಮ್ಮಾಯಿ ಅವರಿಗೆ ಮತ ಕೊಡಿ: ನಟ ಸುದೀಪ್

Karnataka Election Campaign: ಮೊದಲ ಬಾರಿಗೆ ನಾನು ಈ ಊರಿಗೆ ಬಂದಿದ್ದೇನೆ. ಬಹಳ ಸುಂದರವಾಗಿ ನನ್ನನ್ನು ಸ್ವಾಗತ ಮಾಡಿದ್ದೀರಿ. ಸಂತ ಶಿಶುನಾಳ ಶರೀಫರ ಭೂಮಿಯಲ್ಲಿ ಪ್ರಚಾರ ಆರಂಭಿಸಿದ್ದು ಬಹಳ ಸಂತಸ ತಂದಿದೆ. ಬಸವರಾಜ ಬೊಮ್ಮಾಯಿ ಅವರು ನಾಮಕಾವಸ್ಥೆ ಅಲ್ಲ. ಕಾಮ್’ಕಾವಸ್ಥೆ. ಅಭಿವೃದ್ಧಿ ಆಗಬೇಕೆಂದರೆ ಮತ್ತೆ ಬೊಮ್ಮಾಯಿ ಅವರಿಗೆ ಮತ್ತೊಂದು ಅವಕಾಶ ನೀಡಿ ಎಂದರು.

Written by - Prashobh Devanahalli | Edited by - Bhavishya Shetty | Last Updated : Apr 19, 2023, 04:48 PM IST
    • ಸಂತ ಶಿಶುನಾಳ ಶರೀಫರ ಭೂಮಿಯಲ್ಲಿ ಪ್ರಚಾರ ಆರಂಭಿಸಿದ್ದು ಬಹಳ ಸಂತಸ ತಂದಿದೆ.
    • ಬಸವರಾಜ ಬೊಮ್ಮಾಯಿ ಅವರು ನಾಮಕಾವಸ್ಥೆ ಅಲ್ಲ. ಕಾಮ್’ಕಾವಸ್ಥೆ.
    • ಅಭಿವೃದ್ಧಿ ಆಗಬೇಕೆಂದರೆ ಮತ್ತೆ ಬೊಮ್ಮಾಯಿ ಅವರಿಗೆ ಮತ್ತೊಂದು ಅವಕಾಶ ನೀಡಿ ಎಂದ ನಟ ಸುದೀಪ್
ಅಭಿವೃದ್ಧಿ ಆಗಬೇಕೆಂದರೆ ಇನ್ನೊಂದು ಬಾರಿ ಬೊಮ್ಮಾಯಿ ಅವರಿಗೆ ಮತ ಕೊಡಿ: ನಟ ಸುದೀಪ್ title=
Karnataka Election Campaign

ಹಾವೇರಿ: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಳ ಕಡಿಮೆ ಅವಧಿ ಸಿಕ್ಕಿದೆ. ಕಡಿಮೆ ಅವಧಿಯಲ್ಲಿ ಬಹಳ ಅಭಿವೃದ್ಧಿ ಮಾಡಿದ್ದಾರೆ. ಇಷ್ಟು ಜನ ಸೇರಿದ್ದೀರಿ ಅಂದರೆ ಅವರು ಮಾಡಿದ ಕೆಲಸ ಏನೆಂಬುದು ಗೊತ್ತಾಗುತ್ತದೆ. ಅವರ ಪರವಾಗಿ ನಾನು ಬಂದಿದ್ದೇನೆ. ಜನರಿಗೆ ಒಳ್ಳೆಯದು ಆಗಬೇಕೆಂದರೆ ಮತ್ತೊಮ್ಮೆ ನೀವು ಅವರನ್ನು ಗೆಲ್ಲಿಸಬೇಕು ಎಂದು ನಟ ಸುದೀಪ್ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರ ಪರ ರೋಡ್‌ ಶೋ ನಡೆಸಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಇದನ್ನೂ ಓದಿ: ಮಳೆ ಸೀನ್ ಮಾಡುವಾಗ ಒಳಉಡುಪು ಇರ್ಲಿಲ್ಲ… ರಜನಿಕಾಂತ್ ಎತ್ತಿಕೊಂಡೇ ಬಿಟ್ರು!

ಮೊದಲ ಬಾರಿಗೆ ನಾನು ಈ ಊರಿಗೆ ಬಂದಿದ್ದೇನೆ. ಬಹಳ ಸುಂದರವಾಗಿ ನನ್ನನ್ನು ಸ್ವಾಗತ ಮಾಡಿದ್ದೀರಿ. ಸಂತ ಶಿಶುನಾಳ ಶರೀಫರ ಭೂಮಿಯಲ್ಲಿ ಪ್ರಚಾರ ಆರಂಭಿಸಿದ್ದು ಬಹಳ ಸಂತಸ ತಂದಿದೆ. ಬಸವರಾಜ ಬೊಮ್ಮಾಯಿ ಅವರು ನಾಮಕಾವಸ್ಥೆ ಅಲ್ಲ. ಕಾಮ್’ಕಾವಸ್ಥೆ. ಅಭಿವೃದ್ಧಿ ಆಗಬೇಕೆಂದರೆ ಮತ್ತೆ ಬೊಮ್ಮಾಯಿ ಅವರಿಗೆ ಮತ್ತೊಂದು ಅವಕಾಶ ನೀಡಿ ಎಂದರು.

ನಿಮ್ಮ ಬೆಂಬಲ ಇದ್ದರೆ ಕೆಲಸ ಆಗುತ್ತದೆ. ನಾನು ಕೆಲಸ ಆಗುವವರ ಪರ ಇರುತ್ತೇನೆ. ನಾನು ಒಬ್ಬ ಭಾರತೀಯನಾಗಿ ಪ್ರಧಾನಿ ಮೋದಿಯವರ ಕೆಲಸವನ್ನು ಮೆಚ್ಚುತ್ತೇನೆ. ವಿದೇಶದಲ್ಲಿ ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ ಎಂದು ಮೋದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾನು ಸುಮ್ನೆ ಪ್ರಚಾರಕ್ಕೆ ಇಳಿಯಲ್ಲ. ಗೆದ್ದೆ ಗೆಲ್ಲುವೆ ಒಂದು ದಿನ, ಗೆಲ್ಲಲೇಬೇಕು ಒಳ್ಳೆಯತನ. ಬೊಮ್ಮಾಯಿ ಅವರನ್ನು ಗೆಲ್ಲಿಸಿಕೊಂಡು ಹೋಗುತ್ತೇನೆ. ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: Akhand Samrajya Yoga: ಅಖಂಡ ಸಾಮ್ರಾಜ್ಯ ಯೋಗದಿಂದ 1 ವರ್ಷ ಬದಲಾಗೋದಿಲ್ಲ ಈ ರಾಶಿಯವರ ಅದೃಷ್ಟ! ಹೋದಲ್ಲೆಲ್ಲಾ ಧನಪ್ರಾಪ್ತಿ ಖಚಿತ!

ಈ ಸಂದರ್ಭದಲ್ಲಿ  ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ, ಹಿರಿಯ ನಾಯಕರಾದ ಗೋವಿಂದ ಕಾರಜೋಳ, ಮುರಗೇಶ್ ನಿರಾಣಿ, ಬಿ.ಸಿ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News