Team India Special Story: ದಾವೂದ್ ಇಬ್ರಾಹಿಂ ಒಮ್ಮೆ ಟೀಂ ಇಂಡಿಯಾದ ಆಟಗಾರರಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದರು. ಆದರೆ ಕಪಿಲ್ ದೇವ್ ಅವರನ್ನು ಡ್ರೆಸ್ಸಿಂಗ್ ರೂಂನಿಂದಲೇ ಹೊರಕಳುಹಿಸಿದ್ದರಂತೆ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ದಾವೂದ್ ಇಬ್ರಾಹಿಂ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ಗೆ ನುಗ್ಗಿದ್ದರು. ಆದರೆ ಕಪಿಲ್ ದೇವ್ ಅವರನ್ನು ಗದರಿಸಿ ಓಡಿಸಿದ್ದರು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಿದ್ದರಾಮಯ್ಯರನ್ನು ಕುರ್ಚಿಯಿಂದ ಇಳಿಸಲು ಕಾಂಗ್ರೆಸ್ ಹಿರಿಯ ನಾಯಕರ ಪ್ಲಾನ್!: ಬಿಜೆಪಿ


ಕ್ರಿಕೆಟ್ ಮತ್ತು ಭೂಗತ ಜಗತ್ತಿಗೆ ಬಹಳ ಹಳೆಯ ಸಂಬಂಧವಿದೆ. 1987ರಲ್ಲಿ ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯ ಕಪ್ ವೇಳೆ ದಾವೂದ್ ಇಬ್ರಾಹಿಂ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ ಗೆ ಬಂದು ಭಾರತೀಯ ಆಟಗಾರರಿಗೆ ನಾಳೆ ನೀವು ಪಾಕಿಸ್ತಾನವನ್ನು ಸೋಲಿಸಿದರೆ ಪ್ರತಿಯೊಬ್ಬ ಆಟಗಾರನಿಗೆ ಟೊಯೊಟಾ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದ್ದರಂತೆ.


ಟೊಯೊಟಾ ಕಾರಿನ ಈ ಆಫರ್ ಅನ್ನು ಟೀಮ್ ಇಂಡಿಯಾ ತಿರಸ್ಕರಿಸಿತ್ತು. ಸ್ವತಃ ಆ ತಂಡದ ಭಾಗವಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ ಇದನ್ನು ಬಹಿರಂಗಪಡಿಸಿದ್ದಾರೆ. ಈ ಘಟನೆಯನ್ನು ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯವಂತ್ ಲೆಲೆ ಅವರು ತಮ್ಮ "ಐ ವಾಸ್ ದೇರ್ - ಮೆಮೊಯಿರ್ಸ್ ಆಫ್ ಎ ಕ್ರಿಕೆಟ್ ಅಡ್ಮಿನಿಸ್ಟ್ರೇಟರ್" ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.


ಕಪಿಲ್ ದೇವ್ ಪತ್ರಿಕಾಗೋಷ್ಠಿಯನ್ನು ಮುಗಿಸಿದ ನಂತರ ಡ್ರೆಸ್ಸಿಂಗ್ ಕೋಣೆಗೆ ಪ್ರವೇಶಿಸಿದರು ಎಂದು ಜಲಗಾಂವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಿಲೀಪ್ ವೆಂಗ್‌ಸರ್ಕರ್ ಹೇಳಿದ್ದರು. ದಾವೂದ್ ಟೀಂ ಇಂಡಿಯಾದ ಆಟಗಾರರೊಂದಿಗೆ ಮಾತನಾಡಲು ಬಯಸಿದ್ದರು. ಆತನನ್ನು ನೋಡಿದ ಕಪಿಲ್ ದೇವ್, “ಇವರು ಯಾರು? ಹೊರಗೆ ಹೋಗಿ” ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದ ದಾವೂದ್ ಮೌನವಾಗಿ ಡ್ರೆಸ್ಸಿಂಗ್ ರೂಮ್‌ನಿಂದ ಹೊರಬಂದಿದ್ದಾರೆ. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕಪಿಲ್ ದೇವ್ ಕೂಡ ಈ ವಿಷಯವನ್ನು ಹೇಳಿದ್ದಾರೆ.


ವೆಂಗ್‌ ಸರ್ಕರ್ ಹೇಳುವಂತೆ, ಈ ಘಟನೆಯ ನಂತರ ಪಾಕಿಸ್ತಾನಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಟೀಂ ಇಂಡಿಯಾದ ಡ್ರೆಸ್ಸಿಂಗ್ ಕೋಣೆಗೆ ಬಂದು, ಕಪಿಲ್ ದಾವೂದ್ ರ ಬಳಿ ಹೀಗೆ ಹೇಳದರಂತೆ; “ಈ ರೀತಿ ನಡೆಸಿಕೊಳ್ಳಬಾರದಿತ್ತು. ಅವನು ದಾವೂದ್ ಇಬ್ರಾಹಿಂ, ಅವನು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು” ಎಂದು. ಇದಕ್ಕೆ ಪ್ರತಿಕ್ರಿಯಿಸಿದ ವೆಂಗ್‌ಸರ್ಕರ್, “ಕಪಿಲ್‌’ಗೆ ಯಾರೂ ಸಮಸ್ಯೆ ಸೃಷ್ಟಿಸಲು ಸಾಧ್ಯವಿಲ್ಲ. ಭಾರತದಲ್ಲಾಗಲಿ ಹೊರಗಾಗಲಿ” ಎಂದರು. ಇನ್ನು ಜಾವೇದ್ ಮಿಯಾಂದಾದ್ ದಾವೂದ್‌’ನ ಸೋದರ ಮಾವ.


ಇದನ್ನೂ ಓದಿ: 1 ಶತಕಕ್ಕೆ 7 ವಿಶ್ವದಾಖಲೆಗಳು ಉಡೀಸ್..! ‘ಕಿಂಗ್’ ಕೊಹ್ಲಿ ಬತ್ತಳಿಕೆ ಸೇರಿದ ಸಚಿನ್, ಜಾಕ್ವೆಸ್ ಕಾಲಿಸ್’ರ ಈ ದಾಖಲೆ


ಕಪಿಲ್ ದೇವ್ ದಾವೂದ್ ನನ್ನು ಹೊರಗೆ ಹೋಗುವಂತೆ ಹೇಳಿದ್ದರು ಎಂದು ರವಿಶಾಸ್ತ್ರಿ ಹೇಳಿದಾಗ ಈ ಇಡೀ ವಿಷಯದಲ್ಲಿ ಟ್ವಿಸ್ಟ್ ಬಂದಿದೆ. ಕಪಿಲ್ ದೇವ್’ಗೆ ದಾವೂದ್ ಯಾರು ಎಂದು ತಿಳಿದಾಗ ದಾವೂದ್ ಬಳಿ ಕ್ಷಮೆಯಾಚಿಸಿದ್ದರಂತೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.