ನವದೆಹಲಿ: T-20 ವಿಶ್ವಕಪ್ 2022 ಭಾರತ ತಂಡಕ್ಕೆ ಬಹಳ ಮುಖ್ಯವಾಗಲಿದೆ. ಕಳೆದ ವರ್ಷ ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ದೊಡ್ಡ ನಿರಾಸೆ  ಮೂಡಿಸಿತ್ತು. ಆದರೆ ಏಷ್ಯಾಕಪ್ 2022ರಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಇದೆಲ್ಲದರ ನಡುವೆ ಟೀಂ ಇಂಡಿಯಾಗೆ ಸಂಬಂಧಿಸಿದ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ. T20 ವಿಶ್ವಕಪ್‍ಗೂ ಮೊದಲು ಭಾರತ ತಂಡದ ಜವಾಬ್ದಾರಿ ರೋಹಿತ್ ಶರ್ಮಾ ಬದಲಿಗೆ ಬೇರೆ ಆಟಗಾರನ ಕೈಗೆ ಹೋಗುತ್ತದೆ ಎಂಬುದು.


COMMERCIAL BREAK
SCROLL TO CONTINUE READING

ಈ ಆಟಗಾರನಿಗೆ ದೊಡ್ಡ ಜವಾಬ್ದಾರಿ ಸಿಗಲಿದೆ


2022ರ ಟಿ-20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಮತ್ತು ಟಿ-20 ಸರಣಿ ನಡೆಯಲಿದೆ. ವರದಿಗಳ ಪ್ರಕಾರ, 2022ರ ಟಿ-20 ವಿಶ್ವಕಪ್ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದು. ಇದೇ ವೇಳೆ ತಂಡದ ನಾಯಕತ್ವ ಶಿಖರ್ ಧವನ್‍ಗೆ ವಹಿಸಲಾಗುತ್ತದೆ. ಧವನ್ ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು.


ಇದನ್ನೂ ಓದಿ: Virat Kohli : ಶತಕ ಸಿಡಿಸಿದ ವಿರಾಟ್ ಕೊಹ್ಲಿಗೆ ಸುಲಭವಾಗಿಲ್ಲ ಟಿ20 ವಿಶ್ವಕಪ್‌!


ಹಿರಿಯ ಆಟಗಾರರಿಗೆ ವಿಶ್ರಾಂತಿ  


ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಸೆಪ್ಟೆಂಬರ್ 28ರಿಂದ ಆರಂಭವಾಗಲಿದೆ.  ‘ಟಿ-20 ವಿಶ್ವಕಪ್‌ಗೂ ಮುನ್ನ ಏಕದಿನ ಸರಣಿ ನಡೆಸುವುದು ಸರಿಯಲ್ಲ. ಆದರೆ ಕೆಲವೊಮ್ಮೆ ಇದು ಈ ರೀತಿ ಆಗುತ್ತದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಟಿ-20 ವಿಶ್ವಕಪ್‌ಗೆ ಹೋಗುವ ಎಲ್ಲಾ ಆಟಗಾರರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗುವುದು. ಆಸ್ಟ್ರೇಲಿಯಾಗೆ ತೆರಳುವ ಮುನ್ನ ಈ ಆಟಗಾರರು ಕೊಂಚ ವಿರಾಮ ಪಡೆಯಲಿದ್ದಾರೆ. ಶಿಖರ್ ಧವನ್ ಏಕದಿನ ತಂಡದ ನಾಯಕತ್ವ ವಹಿಸಲಿದ್ದಾರೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಉಭಯ ತಂಡಗಳ ನಡುವೆ 6 ಪಂದ್ಯ ನಡೆಯಲಿವೆ


ಸೆಪ್ಟೆಂಬರ್ 28ರಿಂದ ಅಕ್ಟೋಬರ್ 11ರವರೆಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 3 T20 ಮತ್ತು 3 ODI ಪಂದ್ಯಗಳು ನಡೆಯಲಿವೆ. ಟಿ-20 ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದೆ. ಉಭಯ ತಂಡಗಳ ನಡುವಿನ ಮೊದಲ ಟಿ-20 ಪಂದ್ಯ ಸೆಪ್ಟೆಂಬರ್ 28ರಂದು ನಡೆಯಲಿದ್ದು, 2ನೇ ಟಿ-20 ಪಂದ್ಯ ಅಕ್ಟೋಬರ್ 2ರಂದು ಮತ್ತು ಕೊನೆಯ ಟಿ-20 ಪಂದ್ಯ ಅಕ್ಟೋಬರ್ 4ರಂದು ನಡೆಯಲಿದೆ. ಈ ಸರಣಿಯ ನಂತರ ಅಕ್ಟೋಬರ್ 6ರಂದು ಉಭಯ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಅಕ್ಟೋಬರ್ 9 ರಂದು 2ನೇ ಏಕದಿನ ಪಂದ್ಯ ಮತ್ತು ಅಕ್ಟೋಬರ್ 11ರಂದು ಕೊನೆಯ ಏಕದಿನ ಪಂದ್ಯ ನಡೆಯಲಿದೆ.


3 ಪಂದ್ಯಗಳ ಟಿ-20 ಸರಣಿ


1ನೇ T20I ಸೆಪ್ಟೆಂಬರ್ 28- ತಿರುವನಂತಪುರಂ


2ನೇ T20I 02 ಅಕ್ಟೋಬರ್- ಗುವಾಹಟಿ


3ನೇ T20I 04 ಅಕ್ಟೋಬರ್- ಇಂದೋರ್


3 ಪಂದ್ಯಗಳ ODI ಸರಣಿ


1ನೇ ODI ಅಕ್ಟೋಬರ್ 06 - ರಾಂಚಿ


2ನೇ ODI ಅಕ್ಟೋಬರ್ 09 - ಲಕ್ನೋ


3ನೇ ODI ಅಕ್ಟೋಬರ್ 11 - ನವದೆಹಲಿ


ಇದನ್ನೂ ಓದಿ: T20 World Cup 2022 : ಟಿ20 ಸರಣಿಯಿಂದ ಟೀಂ ಇಂಡಿಯಾದ ಈ ಆಟಗಾರ ಔಟ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.