ಪಾಕಿಸ್ತಾನದ ಮಾಜಿ ನಾಯಕ ಮತ್ತು ವಿಶ್ವದ ಮಾರಕ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶಾಹಿದ್ ಅಫ್ರಿದಿ ವಿವಾದಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ. ಭಾರತ ವಿರೋಧಿ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಅಫ್ರಿದಿ ಈ ಬಾರಿ ಹೇಳಿಕೆ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ 2022 ರ ಸೂಪರ್-4 ರ ಸಮಯದಲ್ಲಿ, ಪಾಕಿಸ್ತಾನದ ಬದಲಿಗೆ ಅವರ ಮಗಳು ಭಾರತದ ಧ್ವಜವನ್ನು ಬೀಸಿದ್ದರು ಎಂದು ಆಫ್ರಿದಿ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನಿ ಟಿವಿ ಚಾನೆಲ್ನಲ್ಲಿ ಶಾಹಿದ್ ಅಫ್ರಿದಿ ಮಾತನಾಡಿ, ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಕೇವಲ 10 ಪ್ರತಿಶತದಷ್ಟು ಅಭಿಮಾನಿಗಳನ್ನು ಹೊಂದಿದ್ದರೆ, 90 ಪ್ರತಿಶತದಷ್ಟು ಅಭಿಮಾನಿಗಳು ಭಾರತದವರಾಗಿದ್ದಾರೆ. ಅಫ್ರಿದಿ ಸಾಮಾ ಟಿವಿಗೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:T20 World Cup 2022 : ಮೊಹಮ್ಮದ್ ಶಮಿ ಟಿ20 ವಿಶ್ವಕಪ್‌ನಲ್ಲಿ ಆಡುವುದು ಕಷ್ಟ!
'ಅಲ್ಲಿ ಹೆಚ್ಚು ಭಾರತೀಯ ಅಭಿಮಾನಿಗಳು ಇದ್ದಾರೆ ಎಂದು ನನಗೆ ತಿಳಿದುಬಂದಿದೆ. ಅಲ್ಲಿ ನನ್ನ ಮನೆಯವರು ಕುಳಿತಿದ್ದರು. ಇಲ್ಲಿ ಕೇವಲ 10 ಪ್ರತಿಶತ ಪಾಕಿಸ್ತಾನಿಗಳು, ಉಳಿದ 90 ಪ್ರತಿಶತ ಭಾರತೀಯರು ಎಂದು ನನ್ನ ಹೆಂಡತಿ ಹೇಳುತ್ತಿದ್ದಳು. ಪಾಕಿಸ್ತಾನದ ಧ್ವಜಗಳು ಸಹ ಲಭ್ಯವಿರಲಿಲ್ಲ, ಆದ್ದರಿಂದ ನನ್ನ ಕಿರಿಯ ಮಗಳು ಕೈಯಲ್ಲಿ ಭಾರತದ ಧ್ವಜವನ್ನು ಬೀಸುತ್ತಿದ್ದಳು. ನನ್ನ ಬಳಿ ವಿಡಿಯೋಗಳಿವೆ. ನಾನು ಟ್ವೀಟ್ ಮಾಡಲು ಯೋಚಿಸಿದೆ. ಬಳಿಕ ಆ ವಿಚಾರವನ್ನು ಅಲ್ಲಿಯೇ ಬಿಟ್ಟೆ ಎಂದು ಹೇಳಿದ್ದಾರೆ.
ಶಾಹಿದ್ ಅಫ್ರಿದಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಪಾಕಿಸ್ತಾನದ ಅತಿದೊಡ್ಡ ಮ್ಯಾಚ್ ವಿನ್ನರ್ ಆಟಗಾರರಲ್ಲಿ ಒಬ್ಬರು. ಶಾಹಿದ್ ಅಫ್ರಿದಿ ಪಾಕಿಸ್ತಾನ ತಂಡದ ಪರ 27 ಟೆಸ್ಟ್ ಪಂದ್ಯಗಳಲ್ಲಿ 1716 ರನ್ ಮತ್ತು 48 ವಿಕೆಟ್ ಪಡೆದಿದ್ದಾರೆ. 398 ಏಕದಿನ ಪಂದ್ಯಗಳಲ್ಲಿ 8064 ರನ್ ಮತ್ತು 395 ವಿಕೆಟ್ ಗಳನ್ನು ಪಡೆದಿದ್ದಾರೆ. ಟಿ20 ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಶಾಹಿದ್ ಅಫ್ರಿದಿಯನ್ನು ಪರಿಗಣಿಸಲಾಗಿದೆ. 99 ಟಿ20 ಪಂದ್ಯಗಳಲ್ಲಿ 1416 ರನ್ ಹಾಗೂ 98 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: Team India : ರಿಷಭ್ ಪಂತ್‌ನಿಂದಾಗಿ ಈ ಆಟಗಾರನ ವೃತ್ತಿಜೀವಕ್ಕೆ ಅಪಾಯ!
ಅಫ್ರಿದಿ ವಿವಾದ:
ಶಾಹಿದ್ ಅಫ್ರಿದಿ ಭಾರತ ವಿರೋಧಿ ಹೇಳಿಕೆಗಳಿಂದಲೇ ಯಾವಾಗಲೂ ಮುಖ್ಯಾಂಶಗಳಲ್ಲಿ ಇರುತ್ತಾರೆ. 2019 ರಲ್ಲಿ, ಅಫ್ರಿದಿ 1996 ರಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತಗಳಲ್ಲಿ ಶತಕ ಗಳಿಸಿದಾಗ ಅವರಿಗೆ 16 ವರ್ಷ ವಯಸ್ಸಾಗಿರಲಿಲ್ಲ ಎಂದು ಬಹಿರಂಗಪಡಿಸಿದ್ದರು. ಆದರೆ ಐಸಿಸಿ ಪ್ರಕಾರ, ಅಫ್ರಿದಿ 1 ಮಾರ್ಚ್ 1980 ರಂದು ಜನಿಸಿದರು. ಕೆಲವು ತಿಂಗಳ ಹಿಂದೆ ಶಾಹಿದ್ ಅಫ್ರಿದಿ ಭಾರತವನ್ನು ಪಾಕಿಸ್ತಾನದ ಶತ್ರು ದೇಶ ಎಂದು ಕರೆದಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.