130 ಮೈಲಿ ವೇಗದಲ್ಲಿ ಬರುತ್ತಿದೆ `ಬೆರಿಲ್` ಚಂಡಮಾರುತ! ಬಾರ್ಬಡೋಸ್’ನಲ್ಲೇ ಸಿಲುಕಿದ ಟೀಂ ಇಂಡಿಯಾ- ಕುಟುಂಬಸ್ಥರಲ್ಲಿ ಆತಂಕ
Cyclone Beryl in Barbados: ಸುದ್ದಿ ಸಂಸ್ಥೆ ANI ಪ್ರಕಾರ, ಬಾರ್ಬಡೋಸ್’ನಲ್ಲಿ ಚಂಡಮಾರುತದ ಕಾರಣ, ಮುಂದಿನ ಆದೇಶದವರೆಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ನಗರದಲ್ಲಿ ಸಂಜೆ 6 ಗಂಟೆಯಿಂದ ಕರ್ಫ್ಯೂ ಹೇರಲಾಗಿದ್ದು, ಎಲ್ಲಾ ಅಂಗಡಿಗಳು ಸಹ ಬಂದ್ ಆಗಿವೆ.
Cyclone Beryl in Barbados: ಟಿ20 ವಿಶ್ವ ಚಾಂಪಿಯನ್ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿದೆ. ಚಂಡಮಾರುತದಿಂದಾಗಿ ಎಲ್ಲಾ ವಿಮಾನಗಳು ರದ್ದಾದ ಕಾರಣ ಭಾರತ ತಂಡ ಮತ್ತು ಇತರರು ಅಲ್ಲಿ ಸಿಲುಕಿಕೊಂಡಿದ್ದಾರೆ.
ಸುದ್ದಿ ಸಂಸ್ಥೆ ANI ಪ್ರಕಾರ, ಬಾರ್ಬಡೋಸ್’ನಲ್ಲಿ ಚಂಡಮಾರುತದ ಕಾರಣ, ಮುಂದಿನ ಆದೇಶದವರೆಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ನಗರದಲ್ಲಿ ಸಂಜೆ 6 ಗಂಟೆಯಿಂದ ಕರ್ಫ್ಯೂ ಹೇರಲಾಗಿದ್ದು, ಎಲ್ಲಾ ಅಂಗಡಿಗಳು ಸಹ ಬಂದ್ ಆಗಿವೆ.
ಇದನ್ನೂ ಓದಿ: ಯುವರಾಜ್ ಸಿಂಗ್ ಜೊತೆ ಸಾನಿಯಾ ಮಿರ್ಜಾ ಡೇಟಿಂಗ್! ಶಮಿ ಜೊತೆ ಮದುವೆ ವದಂತಿ ಮಧ್ಯೆ ಟೆನ್ನಿಸ್ ತಾರೆಯ ಪ್ರೀತಿ ರಹಸ್ಯ ಬಯಲು?
ಫಸ್ಟ್ ಪೋಸ್ಟ್‌ನ ವರದಿಯ ಪ್ರಕಾರ, ಬೆರಿಲ್ ಚಂಡಮಾರುತದಿಂದ ಉಂಟಾದ ಪರಿಸ್ಥಿತಿಯಿಂದಾಗಿ, ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಮತ್ತು ಅವರ ಕುಟುಂಬಗಳು, ಬಿಸಿಸಿಐ ಅಧಿಕಾರಿಗಳು ಪ್ರಸ್ತುತ ಬಾರ್ಬಡೋಸ್‌ನ ಹೋಟೆಲ್‌ನಲ್ಲಿ ಸಿಲುಕಿಕೊಂಡಿದ್ದಾರೆ.
ವರದಿಯ ಪ್ರಕಾರ, ಭಾರತೀಯ ತಂಡವು ಸೋಮವಾರ ಬಾರ್ಬಡೋಸ್‌ನಿಂದ ನ್ಯೂಯಾರ್ಕ್‌ಗೆ ಸ್ಥಳೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 8.30) ಹೊರಡಬೇಕಿತ್ತು, ಅಲ್ಲಿಂದ ಅವರು ದುಬೈಗೆ ಮತ್ತು ನಂತರ ಭಾರತಕ್ಕೆ ಸಂಪರ್ಕ ವಿಮಾನದ ಮೂಲಕ ಆಗಮಿಸಬೇಕಿತ್ತು.
ಚಂಡಮಾರುತ ಎಷ್ಟು ಅಪಾಯಕಾರಿ?
2024 ರ ಅಟ್ಲಾಂಟಿಕ್ ಋತುವಿನ ಮೊದಲ ಚಂಡಮಾರುತವಾದ 'ಬೆರಿಲ್' ಭಾನುವಾರದಂದು ವಿಂಡ್‌ವರ್ಡ್ ದ್ವೀಪಗಳ ಕಡೆಗೆ ಸಾಗಿದ್ದು, 130 mph ಗರಿಷ್ಠ ಗಾಳಿಯೊಂದಿಗೆ ಅತ್ಯಂತ ಅಪಾಯಕಾರಿ 'ವರ್ಗ-4' ಚಂಡಮಾರುತವಾಗಿ ತೀವ್ರಗೊಂಡಿದೆ.
ಇದನ್ನೂ ಓದಿ: ಇವು ಭಗವಾನ್ ಶ್ರೀಕೃಷ್ಣನ ಅತ್ಯಂತ ಮೆಚ್ಚಿನ ರಾಶಿಗಳು: ಬೇಡಿದ ತಕ್ಷಣ ಅನಂತ ಸಿರಿ ಸಂಪತ್ತಿನ್ನೇ ಧಾರೆ ಎರೆಯುತ್ತಾನೆ ದೇವಕಿಸುತ
ಸಿಬಿಎಸ್ ನ್ಯೂಸ್ ಪ್ರಕಾರ, ಬಾರ್ಬಡೋಸ್, ಸೇಂಟ್ ಲೂಸಿಯಾ, ಗ್ರೆನಡಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಮತ್ತು ಟೊಬಾಗೋದಲ್ಲಿ ಸೈಕ್ಲೋನ್ ಎಚ್ಚರಿಕೆ ಜಾರಿಗೊಳಿಸಲಾಗಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.