ನವದೆಹಲಿ : ಟಿ 20 ವಿಶ್ವಕಪ್ 2021 (T20 World cup) ಯುಎಇ ಮತ್ತು ಒಮಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ. ಈ ಪಂದ್ಯಾವಳಿಗೆ ಟೀಮ್ ಇಂಡಿಯಾ (Team India), ಈಗಾಗಲೇ ತನ್ನ ತಂಡವನ್ನು ಘೋಷಿಸಿದೆ. ಬುಧವಾರ ಬಿಸಿಸಿಐ ಟಿ 20 ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಜರ್ಸಿಯನ್ನು (Team India new Jersey) ಬಿಡುಗಡೆ ಮಾಡಿದೆ. ಟೀಮ್ ಇಂಡಿಯಾದ ಆಟಗಾರರು ಈ ನೀಲಿ ಜರ್ಸಿಯನ್ನು ಧರಿಸಿ ಅದ್ಭುತವಾಗಿ ಕಾಣುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಜರ್ಸಿಯನ್ನು ಬಿಡುಗಡೆ ಮಾಡಿದ ಬಿಸಿಸಿಐ :  
ಬಿಸಿಸಿಐ (BCCI) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದು, ಟಿ 20 ವಿಶ್ವಕಪ್‌ನಲ್ಲಿ (T20 World cup) ಟೀಮ್ ಇಂಡಿಯಾ ಜರ್ಸಿಯ ಬಗೆಗಿನ ಪೋಸ್ಟ್. ಈ ಪೋಸ್ಟ್‌ನಲ್ಲಿ, ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾದ ಕೆಲವು ಆಟಗಾರರು ಹೊಸ ಜರ್ಸಿ ಧರಿಸಿರುವುದು ಕಂಡುಬಂದಿದೆ. ಈ ನೀಲಿ ಜರ್ಸಿಯ ಪ್ರಾಯೋಜಕರು BYJUS.  ಈ ಕಂಪನಿಯು ಟೀಮ್ ಇಂಡಿಯಾ ಜರ್ಸಿಯನ್ನು ದೀರ್ಘಕಾಲದವರೆಗೆ ಪ್ರಾಯೋಜಿಸುತ್ತಿದೆ. 


ಇದನ್ನೂ ಓದಿ : Team India Captaincy : 'ಕೊಹ್ಲಿ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಇವರೇ ಅಂತೇ ನೋಡಿ'


Team India) ಅಕ್ಟೋಬರ್ 24 ರಂದು ಟಿ 20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ (Pakistan) ತಂಡದ ವಿರುದ್ದ ಸೆಣೆಸಲಿದೆ. UAE ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ ವಿಶ್ವಕಪ್ ಆರಂಭವಾಗುತ್ತಿದೆ. 


 ಇದನ್ನೂ ಓದಿ : IPL : ಭಗ್ನವಾಯಿತು ವಿರಾಟ್ ಕನಸು, ಭಾವುಕರಾದ RCB ಪಡೆ, ಕಣ್ಣೀರಿಟ್ಟ ಕೊಹ್ಲಿ ಇಲ್ಲಿದೆ ವೀಡಿಯೊ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ