ನವದೆಹಲಿ : ನಾಯಕನಾಗಿ ವಿರಾಟ್ ಕೊಹ್ಲಿ (Virat Kohli) ಆಡಿದ ಕೊನೆಯ ಐಪಿಎಲ್ (IPL) ಇದಾಗಿತ್ತು. ಈಗಾಗಲೇ ತಮ್ಮ ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ಕೊಹ್ಲಿ ಪ್ರಕಟಿಸಿದ್ದಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ಮುಂದೆ ಆರ್ ಸಿಬಿ ಸೋಲನುಭವಿಸುವುದರೊಂದಿಗೆ ಟ್ರೋಫಿ ಗೆಲ್ಲುವ ಕನಸು ನುಚ್ಚು ನೂರಾಗಿದೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, (RCB) 7 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿಟ್ಟು. ಈ ಮೂಲಕ ಕೋಲ್ಕತ್ತಾಗೆ 139 ರನ್ ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ಆಟ ಆರಂಭಿಸಿದ ಕೋಲ್ಕತ್ತಾ ಇನ್ನೂ 2 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ವಿರಾಟ್ ಕೊಹ್ಲಿ (Virat Kohli) ಈ ಐಪಿಎಲ್‌ನಲ್ಲಿ (IPL) ಕೊನೆಯ ಬಾರಿಗೆ ಆರ್‌ಸಿಬಿಯ ನಾಯಕರಾಗಿ ಕಾಣಿಸಿಕೊಂಡಿದ್ದರು. ಮೊದಲೇ ಹೇಳಿದ ಹಾಗೆ, ಕೊಹ್ಲಿ ಈಗಾಗಲೇ ತಮ್ಮ ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪಂದ್ಯದ ಸೋಲಿನ ನಂತರ ವಿರಾಟ್ ಕೊಹ್ಲಿ ಬಹಳ ಭಾವನಾತ್ಮಕವಾಗಿ ಕಂಡು ಬಂದರು.
ಇದನ್ನೂ ಓದಿ : Bangalore vs Kolkata: ಪ್ರಶಸ್ತಿ ಗೆಲ್ಲುವ ಆರ್‌ಸಿಬಿ ಕನಸು ಭಗ್ನ,ಗೆಲುವಿನ ನಗೆ ಬೀರಿದ ಕೆಕೆಆರ್
ಕೊಹ್ಲಿ ವಿಡಿಯೋ ವೈರಲ್ :
ಕೋಲ್ಕತ್ತಾ ವಿರುದ್ಧದ ಸೋಲಿನ ನಂತರ ವಿರಾಟ್ ಕೊಹ್ಲಿ ಅತ್ಯಂತ ಭಾವುಕರಾಗಿದ್ದರು. ವಿರಾಟ್ ಕೊಹ್ಲಿ ಜೊತೆಗೆ, ತಂಡದ ಉಳಿದ ಆಟಗಾರರ ಕಣ್ಣಲ್ಲೂ ನೀರು ಜಿನುಗುತ್ತಿತ್ತು. ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ಬಹಳ ವೈರಲ್ ಆಗುತ್ತಿದೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮುಖದಲ್ಲಿ ನಿರಾಸೆ ಭಾವ ಎದ್ದು ಕಾಣುತ್ತಿದೆ.
first time kohli is crying.Last match as RCB Captain. @imVkohli @BCCI @ICC @IPL
#Kohli#crying#last#match#captain#rcb pic.twitter.com/kZDWQgwKRT— Shubham Yadav( Dainik Bhaskar) (@shubham00211591) October 11, 2021
ನುಚ್ಚು ನೂರಾಯಿತು ವಿರಾಟ್ ಕನಸು :
ಇದರೊಂದಿಗೆ ಮತ್ತೊಮ್ಮೆ ವಿರಾಟ್ ಕೊಹ್ಲಿಯ ಐಪಿಎಲ್ ಟ್ರೋಫಿ (IPL trophy) ಗೆಲ್ಲುವ ಕನಸು ಭಗ್ನಗೊಂಡಿದೆ. ವಿರಾಟ್ ಕಳೆದ 13 ವರ್ಷಗಳಿಂದ ಟ್ರೋಫಿಯನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದರು. ಆದರೆ ಪ್ರತಿ ಬಾರಿ ಸೋಲುಂಡಿದ್ದೇ. ಆರ್ ಸಿಬಿ ಮೂರು ಬಾರಿ, ಫೈನಲ್ ತಲುಪಿತ್ತು. ಆದರೆ, ಫೈನಲ್ ನಲ್ಲಿ ಪರಾಜಯಗೊಂಡಿತ್ತು.
ಇದನ್ನೂ ಓದಿ : IPL 2021: ರೋಹಿತ್ ಶರ್ಮ ಸ್ಥಾನವನ್ನು ತುಂಬಲಿದ್ದಾರೆ 21 ವರ್ಷದ ಈ ಬ್ಯಾಟ್ಸ್ ಮ್ಯಾನ್ , ಟೀಂ ಇಂಡಿಯಾದ ಹೊಸ ಹಿಟ್ ಮ್ಯಾನ್ ಇವರು
ನಾಯಕತ್ವ ತೊರೆದ ವಿರಾಟ್ ಕೊಹ್ಲಿ :
ಇದರೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕತ್ವವನ್ನೂ ತೊರೆದಿದ್ದಾರೆ. ಆರ್‌ಸಿಬಿಗೆ ನಾಯಕನಾಗಿದ್ದ ವಿರಾಟ್‌ಗೆ ಇದು ಕೊನೆಯ ಪಂದ್ಯವಾಗಿತ್ತು. ವಿರಾಟ್ ಕೊಹ್ಲಿ ಟ್ರೋಫಿಯೊಂದಿಗೆ ಐಪಿಎಲ್ ನಾಯಕತ್ವ ತೊರೆಯಬೇಕೆಂದು ಬಯಸಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ