Team India Probable Playing 11: ಭಾರತ ಕ್ರಿಕೆಟ್ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಜುಲೈ 27 ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಸರಣಿಯ ಮೊದಲ ಪಂದ್ಯ ನಡೆದಿದ್ದು, ಇದರಲ್ಲಿ ಭಾರತ 5 ವಿಕೆಟ್‌ ಗಳಿಂದ ಜಯಗಳಿಸಿತ್ತು. ಈಗ ಜುಲೈ 29 ರಂದು ಅಂದರೆ ಶನಿವಾರ ಇದೇ ಮೈದಾನದಲ್ಲಿ ಸರಣಿಯ ಎರಡನೇ ಏಕದಿನ ಪಂದ್ಯವೂ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಎರಡನೇ ಏಕದಿನ ಪಂದ್ಯದ ಪ್ಲೇಯಿಂಗ್-11 ಬಗ್ಗೆ ಮಾಹಿತಿ ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ್ದ ಆ ದೇಶ ಈ ಬಾರಿ ಆಡಲಿದೆ ವಿಶ್ವಕಪ್! ಐಸಿಸಿಯ ಮಹತ್ವದ ಘೋಷಣೆ


ಡ್ಯಾಶಿಂಗ್ ಓಪನರ್ ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು 5 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಒಟ್ಟು 7 ವಿಕೆಟ್ ಕಬಳಿಸಿದ ಕಾರಣ ವಿಂಡೀಸ್ ತಂಡದ ಇನ್ನಿಂಗ್ಸ್ 114 ರನ್‌ ಗಳಿಗೆ ಕುಸಿದಿತ್ತು. ಈ ಸುಲಭ ಗುರಿಯನ್ನು ಸಾಧಿಸುವತ್ತ ಮುನ್ನುಗಿದ್ದ ಭಾರತ, ಅದಾಗಲೇ 5 ವಿಕೆಟ್ ಕಳೆದುಕೊಂಡಿತ್ತು. ಇಶಾನ್ ಕಿಶನ್ ಅರ್ಧಶತಕ ಗಳಿಸಿದ್ದು ಒಂದೆಡೆಯಾದ್ರೆ, ನಾಲ್ಕು ವಿಕೆಟ್ ಪಡೆದ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು.


ಸಂಭಾವ್ಯ ಪ್ಲೇಯಿಂಗ್-11 ಹೀಗಿದೆ:


ಸರಣಿಯ ಎರಡನೇ ಏಕದಿನ ಪಂದ್ಯವೂ ಬಾರ್ಬಡೋಸ್‌ ನಲ್ಲಿ ನಡೆಯಲಿದೆ. ಪಂದ್ಯ ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು, ಈ ಪಂದ್ಯದ ಪ್ಲೇಯಿಂಗ್-11 ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ. ಈ ಬಗ್ಗೆ ಜೀ ನ್ಯೂಸ್ ಖಚಿತಪಡಿಸದಿದ್ದರೂ ಹರಿದಾಡುತ್ತಿರುವ ವಿಚಾರದ ಬಗ್ಗೆ ಮಾಹಿತಿ ನೀಡಲಿದೆ. ಮೊದಲ ODI ನಲ್ಲಿ ಆಡಿದ ಕೆಲ ಆಟಗಾರರಿಗೆ ಈ ಪಂದ್ಯದಲ್ಲಿ ಅವಕಾಶ ನೀಡದಿರಬಹುದು. ಇನ್ನು ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಜೋಡಿ ಮತ್ತೆ ಸ್ಥಾನ ಪಡೆಯಲಿದೆ. ಇವರ ಜೊತೆಗೆ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಸ್ಥಾನ ದೃಢಪಟ್ಟಿದೆ.


ನಾಯಕ ರೋಹಿತ್ ಮತ್ತೊಮ್ಮೆ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲಾ ಬ್ಯಾಟ್ಸ್‌ಮನ್‌’ಗಳು ಇಲ್ಲಿನ ಪಿಚ್ ಸರಿಯಾಗಿಲ್ಲ ಎಂದು ಹೇಳಿದ್ದರು. ಆದರೆ ಅದೇ ಪಿಚ್ ನಲ್ಲಿ  ಇಶಾನ್ ಕಿಶನ್ ಅರ್ಧಶತಕ ಬಾರಿಸಿದ್ದು ಗಮನಾರ್ಹ. 46 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ಉಪನಾಯಕ ಹಾರ್ದಿಕ್ ಪಾಂಡ್ಯ ಸ್ಥಾನವೂ ಖಚಿತವಾಗಿದೆ. ಇನ್ನು 13 ವರ್ಷಗಳ ಟೀಂ ಇಂಡಿಯಾ ಏಕದಿನದಲ್ಲಿ ಜಯದೇವ್ ಉನದ್ಕತ್ ಗೆ ಸ್ಥಾನ ಸಿಗುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.


ಇದನ್ನೂ ಓದಿ: ವಿರಾಟ್, ಶುಭ್ಮನ್, ಪಾಂಡ್ಯ ಸಖತ್ ಸಿಕ್ಸ್ ಪ್ಯಾಕ್’ಗೆ ಕಾಂಪಿಟೇಟರ್ ಈ ಮಾಜಿ ಕ್ರಿಕೆಟಿಗನ ಮಗ!


ಎರಡನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್ ಮತ್ತು ಮುಖೇಶ್ ಕುಮಾರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ