Arjun Tendulkar Six-Pack Abs: ಟೀಂ ಇಂಡಿಯಾದಲ್ಲಿ ಫಿಟ್ನೆಸ್ ಎಂಬುದು ಪ್ರಮುಖವಾಗಿ ಬೇಕಾಗಿರುವ ಅಂಶ. ಫಿಟ್ನೆಸ್ ಇಲ್ಲ ಎಂಬ ಕಾರಣಕ್ಕಾಗಿ ಅದೆಷ್ಟೋ ಕ್ರಿಕೆಟಿಗರು ತಂಡದಿಂದ ಹೊರಬಿದ್ದಿದ್ದೂ ಉಂಟು. ಸದ್ಯ ಫಿಟ್ನೆಸ್ ಫ್ರೀಕ್ ಆಗಿ ಭಾರತ ಕ್ರಿಕೆಟ್ ತಂಡದಲ್ಲಿ ಗುರುತಿಸಿಕೊಂಡಿರುವುದು ವಿರಾಟ್ ಕೊಹ್ಲಿ. ಇವರ ಜೊತೆಗೆ ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಹೆಸರನ್ನೂ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: “ಇದು ಟೀಂ ಇಂಡಿಯಾ ಅಲ್ಲ.. ಮುಂಬೈ ತಂಡ”! ಈ ಕ್ರಿಕೆಟಿಗನಿಗೆ ಅವಕಾಶ ನೀಡದಕ್ಕೆ ಟ್ರೋಲ್’ಗೆ ಗುರಿಯಾದ ರೋಹಿತ್
ಆದರೆ ಈ ಎಲ್ಲಾ ಸ್ಟಾರ್ ಪ್ಲೇಯರ್ಸ್ ಗೆ ಕಾಂಪಿಟೇಟರ್ ಆಗಿ ಒಬ್ಬ ಆಗಮಿಸಿದ್ದಾನೆ. ಈತ ಒಂದೊಮ್ಮೆ ಕ್ರಿಕೆಟ್ ಲೋಕವನ್ನೇ ಆಳಿದ ಕ್ರಿಕೆಟಿಗನ ಪುತ್ರ. ಈ ಸುಳಿವು ಕೊಟ್ಟಾಗ ಆತ ಯಾರೆಂದು ಕೆಲವೊಂದಿಷ್ಟು ಜನರಿಗೆ ಅರಿವಿಗೆ ಬಂದಿರಬಹುದು.
ಫಿಟ್ನೆಸ್ ಕಾರಣದಿಂದಾಗಿ 2014ರಿಂದ ಕೊಹ್ಲಿ ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಿದರು ಎಂಬುದು ಅನೇಕ ಬಾರಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅವರ ಫಿಟ್ನೆಸ್ ಮಟ್ಟವನ್ನು ಹೆಚ್ಚಿಸಲು ನಿರ್ದಿಷ್ಟ ರೀತಿಯ ಆಹಾರ ಮತ್ತು ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಅವರ ಫಿಟ್ ದೇಹವು ಸಾಕಷ್ಟು ರನ್ ಗಳಿಸಲು ಸಹಾಯ ಮಾಡುತ್ತಿದೆ ಎಂದರೆ ತಪ್ಪಾಗಲ್ಲ.
ಟೀಂ ಇಂಡಿಯಾದಲ್ಲಿ ಸಿಕ್ಸ್ ಪ್ಯಾಕ್ ಹೊಂದಿರುವ ಕ್ರಿಕೆಟಿಗರ ಪೈಕಿ ಶುಭ್‌ಮನ್ ಗಿಲ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಅವರೆಲ್ಲರೂ ಉತ್ತಮವಾದ ದೇಹದಾಢ್ಯವನ್ನು ಹೊಂದಿದ್ದಾರೆ.
ಆದರೆ ಇಂದು ನಾವು ಮಾತನಾಡುತ್ತಿರುವುದು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್’ಗಳ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಗೊಂಡ ಉದಯೋನ್ಮುಖ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್. ಇತ್ತೀಚಿನ ದಿನಗಳಲ್ಲಿ ತೆಂಡೂಲ್ಕರ್ ಪುತ್ರ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ಇದರ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಅರ್ಜುನ್ ಶೇರ್ ಮಾಡಿಕೊಂಡಿದ್ದಾರೆ.
ಜೂನಿಯರ್ ತೆಂಡೂಲ್ಕರ್ ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್ (MI) ತಂಡದ ಭಾಗವಾಗಿದ್ದಾರೆ. ಆದರೆ ಮೈದಾನಕ್ಕೆ ಪಾದಾರ್ಪಣೆ ಮಾಡಿದ್ದು ಈ ವರ್ಷ. ಐಪಿಎಲ್ 2023ರ ಪಂದ್ಯವೊಂದರಲ್ಲಿ ಮುಂಬೈ ಇಂಡಿಯನ್ಸ್ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಆಯ್ಕೆಯಾಗಿದ್ದರು. ಆ ಪ್ರಶಸ್ತಿಯನ್ನು ಸಚಿನ್ ತೆಂಡೂಲ್ಕರ್ ನೀಡಿದ್ದರು.
ಇದನ್ನೂ ಓದಿ: 49 ವರ್ಷಗಳಲ್ಲಿ ಇದೇ ಮೊದಲು… ಕುಲದೀಪ್-ಜಡೇಜಾ ಜೋಡಿ ಮೋಡಿಗೆ ಇತಿಹಾಸದಲ್ಲೇ ವಿಶಿಷ್ಟ ದಾಖಲೆ ನಿರ್ಮಾಣ!
ದೇಶೀಯ ಕ್ರಿಕೆಟ್ ನಲ್ಲಿ ಅರ್ಜುನ್ ಗೋವಾ ಪರ ಆಡುತ್ತಿದ್ದಾರೆ. ಕಳೆದ ಋತುವಿನಲ್ಲಿ ಗೋವಾ ಪರ ಪದಾರ್ಪಣೆ ಮಾಡಿದ್ದ ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಸಚಿನ್ ತೆಂಡೂಲ್ಕರ್ ಅವರು ತಮ್ಮ ಚೊಚ್ಚಲ ರಣಜಿ ಟ್ರೋಫಿಯಲ್ಲಿ ಶತಕ ಗಳಿಸಿದ್ದರು ಎಂಬುದನ್ನು ಮರೆಯುವಂತಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ