ಬ್ಯಾಟಿಂಗ್ನ ಮೂಲಕ ಎದುರಾಳಿಗಳ ಎದೆ ನಡುಗಿಸಿದ ನಿತೀಶ್ ರೆಡ್ಡಿ ಅವರ ಪ್ರೇಯಸಿ ಯಾರು ಗೊತ್ತಾ..?
Nitish Kumar Reddy girlfriend: ಆಸ್ಟ್ರೇಲಿಯಾ ನೆಲದಲ್ಲಿ ಅಪೂರ್ವ ಶತಕ ಸಿಡಿಸಿದ ಟೀಂ ಇಂಡಿಯಾದ ವೇಗಿ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ವಿಶ್ವ ಕ್ರಿಕೆಟ್ ನಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದಿದ್ದಾರೆ. ನಿನ್ನೆ ಇವರ ಆಟವನ್ನು ನೋಡಿದ ದೇಶದ ಜನ ಯುವ ಆಟಗಾರನ ಅಬ್ಬರದ ಆಟಕ್ಕೆ ಫಿದಾ ಆಗಿದ್ದಾರೆ.
Nitish Kumar Reddy girlfriend: ಆಸ್ಟ್ರೇಲಿಯಾ ನೆಲದಲ್ಲಿ ಅಪೂರ್ವ ಶತಕ ಸಿಡಿಸಿದ ಟೀಂ ಇಂಡಿಯಾದ ವೇಗಿ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ವಿಶ್ವ ಕ್ರಿಕೆಟ್ ನಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದಿದ್ದಾರೆ. ನಿನ್ನೆ ಇವರ ಆಟವನ್ನು ನೋಡಿದ ದೇಶದ ಜನ ಯುವ ಆಟಗಾರನ ಅಬ್ಬರದ ಆಟಕ್ಕೆ ಫಿದಾ ಆಗಿದ್ದಾರೆ.
ಹೀನಾಯವಾಗಿ ಸೋಲಿನ ಗಡಿ ತಲುಪುತ್ತಿದ್ದ ಟೀಂ ಇಂಡಿಯಾ ತಂಡಕ್ಕೆ ಬೆನ್ನೆಲುಬಾಗಿ ಇಂತ ನಿತೀಶ್ ರೆಡ್ಡಿಯವರು ವಾಷಿಂಗ್‌ಟನ್ ಅವರಿಗೆ ಬೆಂಬಲ ನೀಡುವ ಮೂಲಕ ಬ್ಯಾಟ್ ಬೀಸಲು ಆರಂಭಿಸಿದ್ದರು. ಈ ಅಬ್ಬರದ ಆಟದ ಮೂಲಕ ಶತಕ ಸಿಡಿಸಿದ ನಿತೀಸ್ ರೆಡ್ಡಿ ತಂಡವನ್ನು ಗೆಲ್ಲಿಸುವುದಷ್ಟೆ ಅಲ್ಲದೆ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಬಾರತ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿತೀಶ್ ರೆಡ್ಡಿ ಅವರು ಶತಕ ಸಿಡಿಸಿ ಸದ್ದು ಮಾಡಿದಾಗಿನಿಂದ, ಇವರು ಯಾರು? ಇವರ ಹಿನ್ನೆಲೆ ಏನು ಎಂಬುದನ್ನು ಕೆದಕಲು ಜನ ಶುರುಮಾಡಿದ್ದಾರೆ. ಇದೀಗ ನಿತೀಶ್ ರೆಡ್ಡಿ ಅವರ ತ್ಯಾಗದ ಕತೆ ಕೂಡ ಮುನ್ನೆಲೆಗೆ ಬಂದಿದೆ. ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ಮುತ್ಯಾಲ ರೆಡ್ಡಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಗನನ್ನು ಕ್ರಿಕೆಟಿಗನನ್ನಾಗಿ ಮಾಡುವ ಉದ್ದೇಶದಿಂದ ಮುತ್ಯಾಲ ರೆಡ್ಡಿ ಅವರು ತಮ್ಮ 25 ವರ್ಷದ ಸರ್ಕಾರಿ
ಕೆಲಸವನ್ನು ತ್ಯಜಿಸಿದರು. ಸಾಲದ ಸುಳಿಯಲ್ಲಿ ಸಿಲುಕಿ ಹೊರ ಬರಲಾರದೆ ಚಡಪಡಿಸಿದ್ದರು. ನಿನ್ನೆ ನಡೆದ ಪಂದ್ಯದಲ್ಲಿ ಮಗ ಶತಕ ಸಿಡಿಸಿದನ್ನು ಕಂಡ ನಿತೀಶ್ ರೆಡ್ಡಿ ಅವರ ಕಣ್ಣಲ್ಲಿ ಕಂಬನಿ ಹರಿದಿತ್ತು, ಒಂದೆ ಒಂದು ಶತಕ ಅಷ್ಟು ವರ್ಷಗಳಿಂದ ಪಟ್ಟ ಕಷ್ಟ ಚಿತ್ರಹಿಂಸೆ ಎಲ್ಲವನ್ನು ಮರೆಸಿತ್ತು.
ನಿತೀಶ್ ರೆಡ್ಡಿ ಅವರ ಗೆಳತಿ ಯಾರು..?
ಶತಕ ಸಿಡಿಸಿ ಅಬ್ಬರ ಸೃಷ್ಟಿಸುತ್ತಿದ್ದಂತೆ ಅಭಿಮಾನಿಗಳ, ನಿತೀಶ್ ರೆಡ್ಡಿಯವರ ಗೆಳತಿ ಯಾರು ಎಂಬ ಸೀಕ್ರೆಟ್ ತಿಳಿಯಲು ಉತ್ಸುಕರಾಗಿದ್ದಾರೆ. ಆದರೆ, ಎಲ್ಲರೂ ನಿರೀಕ್ಷಿಸುತ್ತಿರುವಂತೆ ನಿತೀಶ್ ರೆಡ್ಡಿಯವರಿಗೆ ಯಾವುದೇ ಗೆಳತಿ ಇಲ್ಲ, ಇವರು ಕೇವಲ ಕ್ರಿಕೆಟ್ ಅನ್ನು ಮಾತ್ರ ಪ್ರೀತಿಸುತ್ತಾರೆ. ಕೇವಲ 21 ವರ್ಷ ವಯಸ್ಸಿನ ನಿತೀಶ್ ಕುಮಾರ್ ರೆಡ್ಡಿ ಇನ್ನೂ ಯಾವುದೇ ಹುಡುಗಿಯನ್ನು ಪ್ರೀತಿಸಲಿಲ್ಲ. ಭವಿಷ್ಯದಲ್ಲಿ ಯಾರನ್ನಾದರೂ ಪ್ರೀತಿಸುತ್ತಾರಾ ಇಲ್ವಾ ಗೊತ್ತಿಲ್ಲ.
ಕ್ರಿಕೆಟ್ ಜೊತೆಗೆ ನಿತೀಶ್ ಕುಮಾರ್ ರೆಡ್ಡಿ ಸಿನಿಮಾ ಪ್ರೇಮಿ. ಇವರು ಹೆಚ್ಚಾಗಿ ತೆಲುಗು ಸಿನಿಮಾಗಳನ್ನು ನೋಡುತ್ತಾರೆ. ನಿತೀಶ್ ರೆಡ್ಡಿಯವರು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಪ್ಪಟ ಅಭಿಮಾನಿ. ಇದನ್ನು ಸ್ವತಃ ನಿತೀಶ್ ರೆಡ್ಡಿ ಅವರೇ ಹಲವಾರು ಭಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ ಮುತ್ಯಾಲ ರೆಡ್ಡಿ ಅವರು ಮಹೇಶ್ ಬಾಬು ಅವರ ತಂದೆ ದಿವಂಗತ ಕೃಷ್ಣ ಅವರನ್ನು ತುಂಬಾ ಇಷ್ಟಪಡುತ್ತಿದ್ದರಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.