ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಾರ್ಚ್ 17ರಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ಈ ಏಕದಿನ ಸರಣಿಯಲ್ಲಿ ದಿಢೀರ್ ಅಂತಾ ಒಬ್ಬ ಆಟಗಾರರನ್ನು ಕಡೆಗಣಿಸಲಾಗಿದೆ. ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ ಇದೀಗ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಬಿಸಿಸಿಐ ಏಕಾಏಕಿ ಟೀಂ ಇಂಡಿಯಾದ ಒಬ್ಬ ಆಟಗಾರನ ತಂಡದಿಂದ ಕೈಬಿಟ್ಟಿದೆ. ಮುಂದಿನ ದಿನಗಳಲ್ಲಿ ಈ ಆಟಗಾರನಿಗೆ ಅವಕಾಶ ಸಿಗದೇ ಹೋದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಬೇಕಾಗುತ್ತದೆ.


ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ ಅಂತ್ಯ?


ಟೀಂ ಇಂಡಿಯಾದಿಂದ ವೇಗದ ಬೌಲರ್ ಹರ್ಷಲ್ ಪಟೇಲ್‍ರನ್ನು ಬಿಸಿಸಿಐ ಇದ್ದಕ್ಕಿದ್ದಂತೆ ಕೈಬಿಟ್ಟಿದೆ. ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧ ನಡೆದ ಟಿ-20 ಮತ್ತು ಏಕದಿನ ಸರಣಿಯಲ್ಲಿ ಹರ್ಷಲ್ ಪಟೇಲ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಲಿಲ್ಲ. ಇದೀಗ ಮಾರ್ಚ್ 17ರಿಂದ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಈ ಆಟಗಾರನನ್ನು ಆಯ್ಕೆ ಮಾಡಿಲ್ಲ. ಭಾರತ ಟಿ-20 ಮತ್ತು ಏಕದಿನ ತಂಡದಲ್ಲಿ ಹರ್ಷಲ್ ಪಟೇಲ್ ಅವಕಾಶಕ್ಕೆ ಅರ್ಹರಲ್ಲವೆಂದು ಆಯ್ಕೆಗಾರರು ಸೂಚಿಸಿದ್ದಾರೆ. ಟೀಂ ಇಂಡಿಯಾ ಪರ ಹರ್ಷಲ್ ಪಟೇಲ್ ಇದುವರೆಗೆ 25 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಕೇವಲ 29 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: ಐಸಿಸಿ ಟೆಸ್ಟ್ ರ್ಯಾಂಕಿಂಗ್ ಟಾಪ್ 10 ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ..!


ಏಕಾಏಕಿ ಕಿಕ್ ಔಟ್ ಮಾಡಿದ ಬಿಸಿಸಿಐ!


ಹರ್ಷಲ್ ಪಟೇಲ್ ಕೆಲವು ಪಂದ್ಯಗಳಲ್ಲಿ ಅತ್ಯಂತ ದುಬಾರಿ ಬೌಲಿಂಗ್ ಮಾಡಿದ್ದರು. ಹೀಗಾಗಿ ಟೀಂ ಇಂಡಿಯಾದಲ್ಲಿ ಅವರಿಗೆ ಅವಕಾಶ ನೀಡುತ್ತಿಲ್ಲವೆಂದು ಹೇಳಲಾಗುತ್ತಿದೆ. 32 ವರ್ಷದ ವೇಗದ ಬೌಲರ್ ಹರ್ಷಲ್ ಪಟೇಲ್ ಅವರ ಕೈಯಿಂದ ಅವಕಾಶಗಳು ಕೈತಪ್ಪುತ್ತಿವೆ. ಈ ವೇಗದ ಬೌಲರ್‌ಗೆ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗದಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಬೇಕಾಗುತ್ತದೆ. ಟೀಂ ಇಂಡಿಯಾ ಈಗ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್ ಮತ್ತು ಶಿವಂ ಮಾವಿಯಂತಹ ಉತ್ತಮ ವೇಗದ ಬೌಲರ್‌ಗಳನ್ನು ಹೊಂದಿದೆ.


ನಿವೃತ್ತಿ ಘೋಷಿಸಬೇಕಾಗುತ್ತೆ!


ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಶಾರ್ದೂಲ್ ಠಾಕೂರ್ ಅವರಂತಹ ಮಾರಕ ವೇಗದ ಬೌಲರ್‌ಗಳು ಈಗ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ 32ರ ಹರೆಯದ ಹರ್ಷಲ್ ಪಟೇಲ್‍ಗೆ ಭವಿಷ್ಯದಲ್ಲಿ ಯಾವುದೇ ಅವಕಾಶ ಸಿಗುವ ಲಕ್ಷಣ ಕಾಣುತ್ತಿಲ್ಲ. ಮುಂದಿನ ಒಂದೆರಡು ವರ್ಷ ಹರ್ಷಲ್ ಪಟೇಲ್‍ಗೆ ಮತ್ತೊಂದು ಅವಕಾಶ ಸಿಗದಿದ್ದರೆ ಕ್ರಿಕೆಟ್‍ಗೆ ಗುಡ್‍ಬೈ ಹೇಳಿ ನಿವೃತ್ತಿ ಘೋಷಿಸಬೇಕಾಗುತ್ತದೆ. ಹರ್ಷಲ್ ಪಟೇಲ್ ತಮ್ಮ ಕೊನೆಯ 8 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ 6 ವಿಕೆಟ್ ಗಳಿಸಿದ್ದಾರೆ. ಅದೇ ರೀತಿ ಹರ್ಷಲ್ ತಮ್ಮ ಕೊನೆಯ 12 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಬಾರಿ 40ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಈ ಕಾರಣದಿಂದ ಹರ್ಷಲ್ ಪಟೇಲ್‍ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ.


ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ


ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನದ್ಕತ್


ಇದನ್ನೂ ಓದಿ: ಪೃಥ್ವಿ ನನ್ನ ʼಖಾಸಗಿ ಅಂಗಾಂಗʼಳನ್ನು ಟಚ್‌ ಮಾಡಿದ್ದ..! ಕ್ರಿಕೆಟಿಗನ ಮೇಲೆ ಸಪ್ನಾ ದೂರು


ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿ


ಮೊದಲ ODI, ಮಾರ್ಚ್ 17, ಮಧ್ಯಾಹ್ನ 1.30, ಮುಂಬೈ  


2ನೇ ODI, ಮಾರ್ಚ್ 19, ಮಧ್ಯಾಹ್ನ 1.30, ವಿಶಾಖಪಟ್ಟಣ


3ನೇ ODI, ಮಾರ್ಚ್ 22, ಮಧ್ಯಾಹ್ನ 1.30, ಚೆನ್ನೈ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.