Harman Preet Kaur Record: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಸೋಮವಾರ ವಿಶ್ವ ಕ್ರಿಕೆಟ್‌ನಲ್ಲಿ ಭವ್ಯವಾದ ಇತಿಹಾಸವನ್ನು ಬರೆದಿದ್ದಾರೆ. ಭಾರತೀಯ ಪುರುಷರ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನೂ ಈ ದಾಖಲೆ ಬರೆಯುವ ಮೂಲಕ ಹಿಂದಿಕ್ಕಿದ್ದಾರೆ.
Gqeberha ನ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ T20 ವಿಶ್ವಕಪ್ ನಲ್ಲಿ ಐರ್ಲೆಂಡ್ ಮಹಿಳೆಯರ ವಿರುದ್ಧ ಭಾರತದ ಅಂತಿಮ ಬಿ ಗುಂಪಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಈ ದಾಖಲೆಯನ್ನು ಬರೆದಿದ್ದಾರೆ.
ಇದನ್ನೂ ಓದಿ: IND vs AUS : ಟೀಂ ಇಂಡಿಯಾದ ಈ ಆಟಗಾರನ ಮಾತಿಗೆ ಎದ್ದುಬಿದ್ದು ನಕ್ಕ ಜಡೇಜಾ!
ಐರ್ಲೆಂಡ್ ವಿರುದ್ಧದ ಪಂದ್ಯದ ಆರಂಭದ ಮೊದಲು ಟಾಸ್ ನಲ್ಲಿ ಫೀಲ್ಡ್ ತೆಗೆದುಕೊಂಡಾಗ, ಹರ್ಮನ್‌ಪ್ರೀತ್ T20I ಸ್ವರೂಪದಲ್ಲಿ 150 ಪಂದ್ಯಗಳಲ್ಲಿ ಕಾಣಿಸಿಕೊಂಡ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.(ಪುರುಷ-ಮಹಿಳಾ ವಿಭಾಗ)
ಮಹಿಳಾ ಕ್ರಿಕೆಟ್‌ನಲ್ಲಿ 143 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ನ್ಯೂಜಿಲೆಂಡ್‌ನ ಸುಜಿ ಬೇಟ್ಸ್, ಮತ್ತು 115 ಪಂದ್ಯಗಳನ್ನು ಆಡಿರುವ ಸ್ಮೃತಿ ಮಂಧಾನಾ ನಂತರದ ಅತ್ಯುತ್ತಮ ಆಟಗಾರರಾಗಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ, ರೋಹಿತ್ 2007 ರಲ್ಲಿ ಮೊದಲ ಬಾರಿಗೆ ಭಾರತಕ್ಕಾಗಿ 148 ಪಂದ್ಯಗಳನ್ನು ಆಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮಹಿಳಾ T20 ವಿಶ್ವಕಪ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ರೋಹಿತ್ ಅವರ ಸಾಧನೆಯನ್ನು ಸರಿಗಟ್ಟಿದ್ದರು. ಕಳೆದ ವಾರ ಇಂಗ್ಲೆಂಡ್ ಪಂದ್ಯದಲ್ಲಿ ಕಾಣಿಸಿಕೊಂಡಾಗ ಅವರನ್ನು ಮೀರಿಸಿದ್ದಾರೆ.
"ನನ್ನ ತಂಡದ ಸಹ ಆಟಗಾರರಿಂದ ನಾನು ಭಾವನಾತ್ಮಕ ಸಂದೇಶವನ್ನು ಪಡೆದುಕೊಂಡಿದ್ದೇನೆ. ಬಿಸಿಸಿಐ ಮತ್ತು ಐಸಿಸಿಗೆ ಧನ್ಯವಾದಗಳು. ನಿಮ್ಮಿಂದಲೇ ನಾನು ಹಲವಾರು ಪಂದ್ಯಗಳನ್ನು ಆಡಲು ಸಾಧ್ಯವಾಯಿತು" ಎಂದು ಟಾಸಿಂಗ್ ಸಂದರ್ಭದಲ್ಲಿ ಹರ್ಮನ್ ಹೇಳಿದರು.
ಐರ್ಲೆಂಡ್ ವಿರುದ್ಧದ ಪಂದ್ಯದ ಕುರಿತು ಮಾತನಾಡುತ್ತಾ, ಭಾರತ ತಂಡದ ನಾಯಕಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ ಕೇವಲ ಒಂದು ಬದಲಾವಣೆಯನ್ನು ಮಾಡಿತ್ತು. ಅದೇನೆಂದರೆ ರಾಧಾ ಯಾದವ್ ಬದಲಿಗೆ ದೇವಿಕಾ ವೈದ್ಯಗೆ ಅವಕಾಶ ನೀಡಲಾಗಿತ್ತು.
ಐರ್ಲೆಂಡ್ ಪಂದ್ಯಕ್ಕಾಗಿ ಒಂದು ಬದಲಾವಣೆಯನ್ನು ಮಾಡಿದ್ದು, ಜಾರ್ಜಿನಾ ಡೆಂಪ್ಸೆ ಅವರು ಜೇನ್ ಮ್ಯಾಗೈರ್ ಬದಲಿಗೆ ಸೇರಿದ್ದಾರೆ.
ಇದನ್ನೂ ಓದಿ:IND vs AUS: ಟೀಂ ಇಂಡಿಯಾವನ್ನು ಸೋಲಿಸಲು ಆಸ್ಟ್ರೇಲಿಯಾ ಮಾಸ್ಟರ್ ಪ್ಲಾನ್! ಆಸೀಸ್ ಗೆ ಈ ಅನುಭವಿ ಕೋಚ್?
ಭಾರತವು ಐರ್ಲೆಂಡ್ ಅನ್ನು ಸೋಲಿಸುವ ಗುರಿಯನ್ನು ಹೊಂದಿತ್ತು. ಅಂತೆಯೇ ಗೆಲುವು ಸಾಧಿಸಿ ವಿಶ್ವಕಪ್‌ನ ಸೆಮಿಫೈನಲ್‌ಪ್ರವೇಶಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.