Team India World Record: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಭಾರತ ತಂಡ ತನ್ನ 91 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಸಂಭವಿಸದ ಇಂತಹ ಸಾಧನೆಯೊಂದನ್ನು ಬರೆದಿದೆ. ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು 1932 ರಲ್ಲಿ ಆಡಿತ್ತು. 1932 ರಿಂದ ಇಲ್ಲಿಯವರೆಗೆ, ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ವಿಕೆಟ್ ನಷ್ಟವಿಲ್ಲದೆ, ಎದುರಾಳಿ ತಂಡವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ, ಆದರೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಇತಿಹಾಸವನ್ನು ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬೌಲಿಂಗ್ ವೇಳೆ ಉಸಿರಾಟದ ತೊಂದರೆ: ಜೈಸ್ವಾಲ್’ಗೆ ಹಿಂಸೆ ಕೊಟ್ಟಿದ್ದ 140 ಕೆಜಿ ತೂಕದ ವಿಂಡೀಸ್ ದೈತ್ಯ ಟೆಸ್ಟ್’ನಿಂದ ಔಟ್!


ವೆಸ್ಟ್ ಇಂಡೀಸ್ ತಂಡವನ್ನು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 150 ರನ್ ಗಳಿಗೆ ಆಲೌಟ್ ಮಾಡಿತ್ತು. ಇದಾದ ಬಳಿಕ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 229 ರನ್ ಗಳಿಸಿದೆ. ಮೊದಲ ವಿಕೆಟ್‌ಗೆ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ 229 ರನ್ ಸೇರಿಸಿದರು. ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ ವೆಸ್ಟ್ ಇಂಡೀಸ್ ಸ್ಕೋರ್ ದಾಟಿ 79 ರನ್ ಗಳ ಮುನ್ನಡೆ ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಮೊದಲ ಇನಿಂಗ್ಸ್‌ ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಎದುರಾಳಿ ತಂಡವನ್ನು ಹಿಂದಿಕ್ಕಿ ಭಾರತ ಶ್ರೇಷ್ಠ ದಾಖಲೆ ಬರೆದಿದೆ. 1932 ರಿಂದ ಇಲ್ಲಿಯವರೆಗಿನ 91 ವರ್ಷಗಳ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ ನಲ್ಲಿ ಈ ಶ್ರೇಷ್ಠ ಸಾಧನೆಯನ್ನು ಮಾಡಿದೆ.


ಟೆಸ್ಟ್ ಕ್ರಿಕೆಟ್‌’ನಲ್ಲಿ ಟೀಂ ಇಂಡಿಯಾ ಇತಿಹಾಸ ಸೃಷ್ಟಿ:


ಯಶಸ್ವಿ ಜೈಸ್ವಾಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಶತಕಗಳು ಮತ್ತು ಇಬ್ಬರ ನಡುವಿನ ದಾಖಲೆಯ ಮೊದಲ ವಿಕೆಟ್ ಜೊತೆಯಾಟದ ನೆರವಿನಿಂದ, ಭಾರತವು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಗೆ 312 ರನ್ ಗಳಿಸಿ 162 ರನ್ ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಜೈಸ್ವಾಲ್ 143 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದು, ವಿರಾಟ್ ಕೊಹ್ಲಿ 36 ರನ್ ಗಳಿಸಿದ್ದರು. ಇಬ್ಬರೂ ಇದುವರೆಗೆ ಮೂರನೇ ವಿಕೆಟ್‌ ಗೆ 72 ರನ್‌ಗಳ ಮುರಿಯದ ಜೊತೆಯಾಟವಾಡಿದ್ದಾರೆ. ಇಡೀ ದಿನದ 90 ಓವರ್‌ ಗಳಲ್ಲಿ ಭಾರತ 232 ರನ್ ಗಳಿಸಲಷ್ಟೇ ಶಕ್ತವಾಯಿತು.


ಇದನ್ನೂ ಓದಿ: RCB, CSK ಅಲ್ಲವೇ ಅಲ್ಲ… ಈ ತಂಡ ಇಂಡಿಯನ್ ಪ್ರೀಮಿಯರ್ ಲೀಗ್’ನ ಶ್ರೀಮಂತ ಫ್ರಾಂಚೈಸಿ-ಅತ್ಯಮೂಲ್ಯ ಟೀಂ!


ಚೇತನ್ ಚೌಹಾಣ್ ಮತ್ತು ಸುನಿಲ್ ಗವಾಸ್ಕರ್ ಹಿಂದಕ್ಕೆ..


ಜೈಸ್ವಾಲ್ ಮೊದಲ ವಿಕೆಟ್‌ ಗೆ ರೋಹಿತ್ (103) ಅವರೊಂದಿಗೆ 229 ರನ್‌ ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು, ಇದು ಏಷ್ಯಾದ ಹೊರಗೆ ಭಾರತದ ಅತಿದೊಡ್ಡ ಮೊದಲ ವಿಕೆಟ್ ಜೊತೆಯಾಟವಾಗಿದೆ. ಈ ಜೋಡಿಯು ಚೇತನ್ ಚೌಹಾಣ್ ಮತ್ತು ಸುನಿಲ್ ಗವಾಸ್ಕರ್ ಜೋಡಿಯನ್ನು ಮೀರಿಸಿದೆ. ಆಗಸ್ಟ್ 1979 ರಲ್ಲಿ ದಿ ಓವಲ್‌ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ವಿಕೆಟ್‌ ಗೆ 213 ರನ್ ಸೇರಿಸಿದ್ರು. ಜೈಸ್ವಾಲ್ ಇದುವರೆಗೆ 350 ಎಸೆತಗಳನ್ನು ಎದುರಿಸಿದ ತಮ್ಮ ಇನ್ನಿಂಗ್ಸ್‌ ನಲ್ಲಿ 14 ಬೌಂಡರಿಗಳನ್ನು ಬಾರಿಸಿದ್ದಾರೆ. ರೋಹಿತ್ ಅವರ 221 ಎಸೆತಗಳ ಇನ್ನಿಂಗ್ಸ್‌ ನಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್‌ ಗಳು ಸೇರಿವೆ, ಕೊಹ್ಲಿ ಇದುವರೆಗೆ 96 ಎಸೆತಗಳ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಬಾರಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ