Rahkeem Cornwall: ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಡೊಮಿನಿಕಾದಲ್ಲಿ ಆಡುತ್ತಿದೆ. ಪಂದ್ಯದ ಮೊದಲ ದಿನ ವೆಸ್ಟ್ ಇಂಡೀಸ್ ಇನ್ನಿಂಗ್ಸ್ 150 ರನ್ ಗಳಿಗೆ ಕುಸಿದಿತ್ತು. ಇದಾದ ನಂತರ ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕ್ರೀಸ್ ಗೆ ಆಗಮಿಸಿ. ವೆಸ್ಟ್ ಇಂಡೀಸ್ ಬೌಲರ್ ಗಳ ವಿರುದ್ಧ ಇಬ್ಬರೂ ಮೊದಲ ವಿಕೆಟ್ ಗೆ 229 ರನ್ ಸೇರಿಸಿದರು.
ಇದನ್ನೂ ಓದಿ: ಚೊಚ್ಚಲ ಟೆಸ್ಟ್’ನಲ್ಲಿ ಶತಕ ಬಾರಿಸುತ್ತಿದ್ದಂತೆ ಈ ಆಟಗಾರನ ಶತ್ರುತ್ವ ಕಟ್ಟಿಕೊಂಡ ಯಶಸ್ವಿ ಜೈಸ್ವಾಲ್!
ವೆಸ್ಟ್ ಇಂಡೀಸ್ ನ ರಹಕೀಮ್ ಕಾರ್ನ್‌ವಾಲ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದೈತ್ಯ ಆಟಗಾರ ಎಂದು ಕರೆಯಲ್ಪಟ್ಟಿದ್ದಾರೆ. ಆದರೆ ಡೊಮಿನಿಕಾದ ಶಾಖ ಮತ್ತು ತೇವಾಂಶವನ್ನು ತಡೆದುಕೊಳ್ಳಲು ಆತನಿಂದ ಸಾಧ್ಯವಾಗುತ್ತಿಲ್ಲ. ಕಾರ್ನ್ವಾಲ್ ಒಬ್ಬ ಸ್ಪಿನ್ ಬೌಲರ್. ಆದರೆ ಇವರು ಬೌಲಿಂಗ್ ಮಾಡುವಾಗ ಉಸಿರಾಟದ ತೊಂದರೆಯನ್ನು ಎದುರಿಸಿದ್ದರು. ವೈದ್ಯಕೀಯ ತಂಡ ಬಂದು ತಪಾಸಣೆ ನಡೆಸಿ, ಒಂದಷ್ಟು ಔಷಧವನ್ನೂ ಕೊಟ್ಟರೂ ಸಹ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ರಹಕೀಮ್ ಕಾರ್ನ್ವಾಲ್ ಕೇವಲ 11 ಓವರ್ ಬೌಲಿಂಗ್ ಮಾಡಿ, ನಂತರ ಮೈದಾನದಿಂದ ಹೊರನಡೆದರು.
ಈ ಪಂದ್ಯದಲ್ಲಿ ರಹಕೀಮ್ ಕಾರ್ನ್‌ವಾಲ್ ವೆಸ್ಟ್ ಇಂಡೀಸ್ ನ ಪ್ರಮುಖ ಸ್ಪಿನ್ನರ್ ಆಗಿದ್ದರು. ಯಶಸ್ವಿ ಜೈಸ್ವಾಲ್ ಪಂದ್ಯದ ಎರಡನೇ ದಿನದಂದು ಈ ಆಫ್ ಸ್ಪಿನ್ನರ್ ವಿರುದ್ಧ ಆಡಲು ಸಾಕಷ್ಟು ತೊಂದರೆ ಅನುಭವಿಸಿದರು. ಅವರ 11 ಓವರ್ ಗಳಲ್ಲಿ ಭಾರತದ ಬ್ಯಾಟ್ಸ್‌ಮನ್ ಗಳು ಕೇವಲ 22 ರನ್ ಗಳಿಸಿದ್ದರು. ಆದರೆ ಅವರು ನಿರ್ಗಮಿಸಿದ ಕೂಡಲೇ ಭಾರತ ತಂಡದ ದೊಡ್ಡ ಸಮಸ್ಯೆಯೇ ಕೊನೆಗೊಂಡಿತು. ಅರೆಕಾಲಿಕ ಸ್ಪಿನ್ನರ್ ಗಳು ವೆಸ್ಟ್ ಇಂಡೀಸ್ ಗೆ ಬೌಲಿಂಗ್ ಮಾಡಲು ಪ್ರಾರಂಭಿಸಿದರು.
ಇದನ್ನೂ ಓದಿ: RCB, CSK ಅಲ್ಲವೇ ಅಲ್ಲ… ಈ ತಂಡ ಇಂಡಿಯನ್ ಪ್ರೀಮಿಯರ್ ಲೀಗ್’ನ ಶ್ರೀಮಂತ ಫ್ರಾಂಚೈಸಿ-ಅತ್ಯಮೂಲ್ಯ ಟೀಂ!
ಭಾರತದ ಬ್ಯಾಟ್ಸ್‌ಮನ್ ಗಳು ಸಹ ಶಾಖದ ಕಾರಣದಿಂದ ತೊಂದರೆಗೀಡಾಗಿದ್ದಾರೆ. ಪಾನೀಯ ವಿರಾಮದ ಸಮಯದಲ್ಲಿ, ಬೆಂಚ್ ಮೇಲೆ ಕುಳಿತಿದ್ದ ಭಾರತೀಯ ಆಟಗಾರರು ರೋಹಿತ್ ಮತ್ತು ಯಶಸ್ವಿಗಾಗಿ ಕೊಡೆ ಹಿಡಿದಿದ್ದನ್ನು ಕಾಣಬಹುದು. ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ತನ್ನ ಟಿ-ಶರ್ಟ್ ಗೆ ತಣ್ಣೀರು ಸುರಿದುಕೊಳ್ಳುತ್ತಿದ್ದರು. ಆದರೆ ಉತ್ತಮ ಫಿಟ್ ನೆಸ್ ನಿಂದಾಗಿ ಭಾರತದ ಆಟಗಾರರು ಸಂಕಷ್ಟ ಎದುರಿಸುವುದು ಕೊಂಚ ಕಡಿಮೆ ಇದೆ. ಆದರೆ ಕಾರ್ನ್‌ವಾಲ್ ಮೈದಾನದಿಂದ ಹೊರಗೆ ಹೋಗಬೇಕಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ