IND vs NZ Test series: ಕೆ.ಎಲ್.ರಾಹುಲ್ ನಿರ್ಗಮನದಿಂದ ಟೀಂ ಇಂಡಿಯಾಕ್ಕೆ ಎದುರಾಗಿದೆ ಸಂಕಷ್ಟ..!
ಮಯಾಂಕ್ ಅಗರ್ವಾಲ್ ಮತ್ತು ಶುಭಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ(IND vs NZ Test series)ಯ ಮೊದಲ ಪಂದ್ಯ ನಾಳೆಯಿಂದ (ನ.25) ಕಾನ್ಪುರದಲ್ಲಿ ನಡೆಯಲಿದೆ. ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಗಾಯಗೊಂಡ ನಂತರ ಪ್ಲೇಯಿಂಗ್ 11ರ ಆಯ್ಕೆಗೆ ಸಂಬಂಧಿಸಿದಂತೆ ಟೀಂ ಇಂಡಿಯಾದ ಮುಂದೆ ಹೊಸ ಸಮಸ್ಯೆ ಉದ್ಭವಿಸಿದೆ. ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ(Rohit Sharma)ಗೆ ವಿಶ್ರಾಂತಿ ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಕ್ರಮಾಂಕವು ದೊಡ್ಡ ಸಮಸ್ಯೆಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಭಾರತ ಯಾವ 11 ಆಟಗಾರರು (ಪ್ಲೇಯಿಂಗ್ XI) ಆಡಲಿದ್ದಾರೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಇದು ಆರಂಭಿಕ ಜೋಡಿಯಾಗಲಿದೆ
ಮಯಾಂಕ್ ಅಗರ್ವಾಲ್ ಮತ್ತು ಶುಭಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಇಬ್ಬರೂ ಬ್ಯಾಟ್ಸ್ ಮನ್‌ಗಳು ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ(India Vs New Zealand 1st Test Match)ದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಗಾಯದ ಸಮಸ್ಯೆಯಿಂದ ಹೊರಗುಳಿದಿರುವ ಕನ್ನಡಿಗ ಕೆ.ಎಲ್.ರಾಹುಲ್(KL Rahul) ಬದಲಿಗೆ ಮಯಾಂಕ್ ಅಗರ್ವಾಲ್ ಆಡಲಿದ್ದಾರೆ. ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ರೋಹಿತ್ ಶರ್ಮಾ ಬದಲಿಗೆ ಶುಭಮನ್ ಗಿಲ್ ಆಡಲಿದ್ದಾರೆ.
ಇದು ಮಧ್ಯಮ ಕ್ರಮಾಂಕವಾಗಿರುತ್ತದೆ
ಇದೇ ವೇಳೆ ಚೇತೇಶ್ವರ ಪೂಜಾರ 3ನೇ ಸ್ಥಾನಕ್ಕೆ ಫಿಟ್ ಆಗಿದ್ದಾರೆ. ಆದರೆ 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ(Virat Kohli) ಬದಲಿಗೆ ಶ್ರೇಯಸ್ ಅಯ್ಯರ್‌ಗೆ ಅವಕಾಶ ನೀಡಬಹುದು. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. 2ನೇ ಟೆಸ್ಟ್ ಪಂದ್ಯದಲ್ಲಿ ರನ್ ಮಷಿನ್ ಮರಳಲಿದ್ದಾರೆ. ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡುವ ಒತ್ತಡಕ್ಕೆ ಸಿಲುಕಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಬದಲಿಗೆ ರಹಾನೆ ನಾಯಕನ ಕ್ಯಾಪ್ ತೊಟ್ಟಿದ್ದಾರೆ.
ವೃದ್ಧಿಮಾನ್ ಸಹಾ ವಿಕೆಟ್ ಕೀಪರ್
ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ 6ನೇ ಸ್ಥಾನಕ್ಕೆ ಆಯ್ಕೆಯಾಗುವುದು ಖಚಿತ. ಮೊದಲ ಟೆಸ್ಟ್ ಪಂದ್ಯ(1st Test Match)ದಲ್ಲಿ ರಿಷಭ್ ಪಂತ್ ಕೂಡ ವಿಶ್ರಾಂತಿ ಪಡೆದಿದ್ದಾರೆ. ಇದೇ ವೇಳೆ ಆಲ್ ರೌಂಡರ್ ರವೀಂದ್ರ ಜಡೇಜಾ 7ನೇ ಕ್ರಮಾಂಕದಲ್ಲಿ ಅವಕಾಶ ಪಡೆಯುವುದು ಖಚಿತವಾಗಿದೆ. ರವೀಂದ್ರ ಜಡೇಜಾ ಎಡಗೈ ಸ್ಪಿನ್ ಬೌಲಿಂಗ್ ಜೊತೆಗೆ ಉತ್ತಮ ಬ್ಯಾಟಿಂಗ್ ಕೂಡ ಮಾಡಲಿದ್ದಾರೆ. ಆಲ್ ರೌಂಡರ್ ಆಗಿ ಜಡೇಜಾ ತಂಡದ ಜೀವಾಳವಾಗಿದ್ದಾರೆ.
ಇದನ್ನೂ ಓದಿ: Harbhajan Singh: ಹರ್ಭಜನ್ ಸಿಂಗ್ ಮುಂಬೈನಲ್ಲಿರುವ ಮನೆ ಮಾರಿ ಎಷ್ಟು ಕೋಟಿ ಗಳಿಸಿದ್ದಾರೆ ಗೊತ್ತಾ!
ಇವರು ಸ್ಪಿನ್ ಬೌಲರ್‌ಗಳಾಗಿರುತ್ತಾರೆ
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಟೀಂ ಇಂಡಿಯಾದ ಸ್ಪಿನ್ ಬೌಲರ್ ಆಗಿ ಆಡಬಹುದು.
ಇವರು ವೇಗದ ಬೌಲರ್‌ಗಳಾಗಿರುತ್ತಾರೆ
ವೇಗದ ಬೌಲರ್‌ಗಳಿಗೆ ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಗೆ ಸ್ಥಾನ ನೀಡಬಹುದು. =
ಟೀಂ ಇಂಡಿಯಾ ಸ್ಕ್ವಾಡ್ ಈ ರೀತಿ ಇದೆ
ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್ , ಅಜಿಂಕ್ಯ ರಹಾನೆ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಆರ್ ಅಶ್ವಿನ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್
ಭಾರತ vs ನ್ಯೂಜಿಲೆಂಡ್ ಸರಣಿ ಪೂರ್ಣ ವೇಳಾಪಟ್ಟಿ
2 ಪಂದ್ಯಗಳ ಟೆಸ್ಟ್ ಸರಣಿ
1) ಮೊದಲ ಟೆಸ್ಟ್ ಪಂದ್ಯ – ನವೆಂಬರ್ 25 ರಿಂದ 29 - ಕಾನ್ಪುರ - ಬೆಳಗ್ಗೆ 9:30 ರಿಂದ ಪ್ರಾರಂಭ
2) 2ನೇ ಟೆಸ್ಟ್ ಪಂದ್ಯ – ಡಿಸೆಂಬರ್ 3 ರಿಂದ 7 - ಮುಂಬೈ - ಬೆಳಗ್ಗೆ 9:30 ರಿಂದ ಪ್ರಾರಂಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.