BCCI New Food Menu: BCCI ಹೊಸ ಫುಡ್ ಮೇನ್ಯೂ ಕುರಿತು ಭುಗಿಲೆದ್ದ ವಿವಾದ, ಆಟಗಾರರಿಗೆ ನಾನ್-ವೆಜ್ ಊಟದಲ್ಲಿ ಕೇವಲ 'ಹಲಾಲ್' ಮೀಟ್

IND vs NZ: ಇತ್ತೀಚೆಗಷ್ಟೇ ಟೀಂ ಇಂಡಿಯಾದ (Team India) ಆಟಗಾರರಿಗಾಗಿ ಸಿದ್ಧಪಡಿಸಲಾಗಿರುವ ಊಟದ ಮೇನ್ಯೂ (Team India Food Menu) ಬಹಿರಂಗವಾಗಿದೆ. ಆಟಗಾರರು 'ಹಲಾಲ್' ಮಾಂಸವನ್ನು ಮಾತ್ರ ಸೇವಿಸಬೇಕೆಂದು ಬಿಸಿಸಿಐ (BCCI) ಕಟ್ಟುನಿಟ್ಟಾಗಿ ಹೇಳಿದೆ. ಇದಾದ ಬಳಿಕ ಇದೀಗ ವಿವಾದ ಭುಗಿಲೆದ್ದಿದೆ.

Written by - Nitin Tabib | Last Updated : Nov 23, 2021, 08:16 PM IST
  • ಬಿಸಿಸಿಐನ ಹೊಸ ಆಹಾರ ಮೇನ್ಯೂವಿನಿಂದ ಭುಗಿಲೆದ್ದ ವಿವಾದ.
  • ಆಟಗಾರರು ಹಲಾಲ್ ಮಾಂಸವನ್ನು ಮಾತ್ರ ಸೇವಿಸಬೇಕು.
  • ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ವಿವಾದ ಭುಗಿಲೆದ್ದಿದೆ.
BCCI New Food Menu: BCCI ಹೊಸ ಫುಡ್ ಮೇನ್ಯೂ ಕುರಿತು ಭುಗಿಲೆದ್ದ ವಿವಾದ, ಆಟಗಾರರಿಗೆ ನಾನ್-ವೆಜ್ ಊಟದಲ್ಲಿ ಕೇವಲ 'ಹಲಾಲ್' ಮೀಟ್ title=
#BCCI_Promotes_Halal (File Photo)

ನವದೆಹಲಿ: BCCI Food Menu Controversy - ಭಾರತ ಹಾಗೂ ನ್ಯೂಜಿಲ್ಯಾಂಡ್ (Ind Vs NZ)ತಂಡಗಳ ನಡುವೆ ನವೆಂಬರ್ 25 ರಂದು ಕಾನ್ಪುರ್ ನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿದೆ.  ಇತ್ತೀಚೆಗಷ್ಟೇ ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರಿಗಾಗಿ ಸಿದ್ಧಪಡಿಸಿರುವ ಊಟದ ಮೇನ್ಯೂ ಬಹಿರಂಗವಾಗಿದೆ. ಆಟಗಾರರಿಗೆ ಕೇವಲ ಹಲಾಲ್ ಮಾಂಸವನ್ನು ಮಾತ್ರ ಸೇವಿಸುವಂತೆ ಬಿಸಿಸಿಐ ಕಟ್ಟುನಿಟ್ಟಾಗಿ ಹೇಳಿದೆ. ಇದಾದ ನಂತರ ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ (BCCI Food Menu For Players) ಸೃಷ್ಟಿಯಾಗಿದೆ.

ಆಟಗಾರರ ಡಯಟ್ ಗೆ ಸಂಬಂಧಿಸಿದಂತೆ ವಿವಾದ
ನಮ್ಮ ಅಂಗಸಂಸ್ಥೆ ವೆಬ್‌ಸೈಟ್ WION ನಲ್ಲಿ, ಆಟಗಾರರ ಫಿಟ್‌ನೆಸ್ ದೃಷ್ಟಿಯಿಂದ, ಇನ್ನು ಮುಂದೆ ಎಲ್ಲರಿಗೂ ಹಲಾಲ್ ಮಾಂಸವನ್ನು ಮಾತ್ರ ನೀಡಲಾಗುವುದು ಎಂದು ಬಿಸಿಸಿಐ ನಿರ್ಧರಿಸಿದೆ ಎಂದು ಉಲ್ಲೇಖಿಸಲಾಗಿದೆ. ಅಂದರೆ ಯಾವುದೇ ಆಟಗಾರ ಬೀಫ್ ಸೇವಿಸಲು  ಸಾಧ್ಯವಾಗುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ, ಇದೀಗ ಜನರು ಸಾಮಾಜಿಕ ಮಾಧ್ಯಮದಲ್ಲಿ ಬಿಸಿಸಿಐ ಅನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬಿಸಿಸಿಐ ಹಲಾಲ್ ಮಾಂಸಕ್ಕೆ ಪ್ರಚಾರ ನೀಡುತ್ತಿದೆ (BCCI Promoting Halal Meat) ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ-Ind Vs NZ : ಕನ್ನಡಿಗ ಕೆಎಲ್ ರಾಹುಲ್ ಬದಲಿಗೆ ಟೀಂ ಇಂಡಿಯಾಗೆ ಈ ಆಟಗಾರ ಓಪನರ್!

ಸಾಮಾಜಿಕ ಮಾಧ್ಯಮದಲ್ಲಿ ಭುಗಿಲೆದ್ದ ಆಕ್ರೋಶ 
ಬಿಸಿಸಿಐ ಆಟಗಾರರನ್ನು ಹಲಾಲ್ ಮೀಚ್ ತಿನ್ನುವಂತೆ ಒತ್ತಾಯಿಸುತ್ತಿದೆ ಎಂಬ ಸುದ್ದಿ ಜನರಲ್ಲಿ ಹರಡಿದ ತಕ್ಷಣ ಟ್ವಿಟರ್‌ನಲ್ಲಿ #BCCI_Promotes_Halal ಟ್ರೆಂಡಿಂಗ್ ಆಗಿದೆ. ಇಲ್ಲಿ ಜನರು ಬಿಸಿಸಿಐ  ಹಲಾಲ್ ಮಾಂಸವನ್ನು ಬೆಂಬಲಿಸುತ್ತಿದೆ (BCCI Pramotes Halal) ಎಂಬ ಆರೋಪ ಜನರು ಬಿಸಿಸಿಐ ಮೇಲೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಿಂದೂ ಸಮುದಾಯದ ಜನರು ಕೂಡ ಬಿಸಿಸಿಐ ಅನ್ನು ಗುರಿಯಾಗಿಸಿದ್ದಾರೆ.

ಇದನ್ನೂ ಓದಿ-ಈ ಆಟಗಾರ ಟೀಂ ಇಂಡಿಯಾಗೆ ಹೊರೆಯಾ?: ಗೌತಮ್ ಗಂಭೀರ್ ಹೇಳಿಕೆಯಿಂದ ಸಂಚಲನ!

ಪೋರ್ಕ್ ಹಾಗೂ ಬೀಫ್ ಅನ್ನು ಮೇನ್ಯೂನಿಂದ ಹೊರಗಿಡಲಾಗಿದೆ
ಬಿಸಿಸಿಐ ಬಿಡುಗಡೆ ಮಾಡಿರುವ ಆಹಾರ ಮೆನುವಿನಲ್ಲಿ ವಿಶೇಷವಾಗಿ ಹಲಾಲ್ ಮಾಂಸ ತಿನ್ನಲು ಆಟಗಾರರಿಗೆ ಒತ್ತು ನೀಡಲಾಗಿದೆ. ಬಿಸಿಸಿಐ ಮೆನುವಿನಿಂದ ಬೀಫ್ ಮತ್ತು ಪೋರ್ಕ್ ಮಾಂಸಗಳನ್ನು ತೆಗೆದುಹಾಕಲಾಗಿದೆ. ವಾಸ್ತವದಲ್ಲಿ ಕೆಲ ಆಟಗಾರರು ಬಯೋ ಬಬಲ್‌ನಲ್ಲಿ ವಾಸಿಸುವುದರಿಂದ ಕ್ರಿಕೆಟ್ ಆಡಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೇ ವೇಳೆ, ಹಲಾಲ್ ಸರ್ಟಿಫೈಡ್  ಆಹಾರದ ಮೂಲಕ ಇಸ್ಲಾಮಿಕ್ ಕಾನೂನಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜನರು ಭಾವಿಸುತ್ತಿದ್ದಾರೆ. ಇದರಿಂದ ಹಿಂದೂ ಮತ್ತು ಸಿಖ್ ಧರ್ಮದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎನ್ನಲಾಗುತ್ತಿದೆ. ಮೊದಲ ಟೆಸ್ಟ್‌ಗಾಗಿ ಟೀಂ ಇಂಡಿಯಾ ಕಾನ್ಪುರದ ಹೋಟೆಲ್ ಲ್ಯಾಂಡ್‌ಮಾರ್ಕ್ ಟವರ್‌ನಲ್ಲಿ ಉಳಿದುಕೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಈ 3 ಭಾರತೀಯ ಕ್ರಿಕೆಟಿಗರ ವೃತ್ತಿಜೀವನಕ್ಕೆ ಕ್ಷಣಗಣನೆ ಶುರುವಾಗಿದೆಯೇ?: ಶೀಘ್ರವೇ ಗೇಟ್ ಪಾಸ್ ಸಾಧ್ಯತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News