Temba Bavuma : ಕೀರ್ತಿ  ಚಿಕ್ಕದಾದರು ಮೂರ್ತಿ ದೊಡ್ಡದು ಅನ್ನೋ ಪದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಸರಿಯಾಗಿದೆ. ಗಾತ್ರ ಮತ್ತು ಎತ್ತರದಲ್ಲಿ ತುಂಬಾ ಚಿಕ್ಕವರಾಗಿ ಕಂಡರು ಅವರ ಆಕ್ರಮಣಕಾರಿ ಆಟಕ್ಕೆ ಅವರೇ ಸಮ. ದಕ್ಷಿಣ ಆಫ್ರಿಕಾದ  ನಾಯಕರಾಗಿ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುಕೊಂಡು ಹೋಗುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಈ ಭಾರಿ ನಡೆದ ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡದೆ ಇದ್ದರು ನಾಯಕನಾಗಿ ತಂಡವನ್ನು ಸೆಮಿಫೈನಲ್‌ ಹಂತದವರೆಗೆ ತಂದರು.ಭಾರತದ ಮೇಲೆ ಆಡಿದ ಸೆಮಿಫೈನ್‌ ಪಂದ್ಯದಲ್ಲಿ ಸೋತು ವಿಶ್ವಕಪ್‌ ಆಸೆನ್ನು ಬಿಡಬೇಕಾಯಿತು.


ಇದನ್ನು ಓದಿ-ಐಪಿಎಲ್‌ ಇತಿಹಾಸದಲ್ಲಿ ಮೊದಲ ಮಹಿಳಾ ಹರಾಜುಗಾರ್ತಿಯಾಗಿ ಮಲ್ಲಿಕಾ ಸಾಗರ್‌ !


 ಟೆಂಬಾ ಬವುಮಾರನ್ನು ಅವರ ಗಾತ್ರದ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಆಗಾಗೆ ಅಪಹಾಸ್ಯಕ್ಕೆ ಗುರಮಾಡಲಾಗುತ್ತಿದೆ. ಆದರು ಇವರ ಉತ್ತಮ ಫಿಲ್ಡಿಂಗ್‌ ಚಮತ್ಕಾರದಿಂದ ಎಲ್ಲರನ್ನು ನಿಬ್ಬೆರಗಾಗದವರೇ ಇಲ್ಲ. ಮೈದಾನದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲು ಉತ್ತಮ ನಡವಳಿಕೆ ಸ್ಪೂರ್ತಿಧಾಯಕ ಮನಸ್ಥಿತಿ ಹೊಂದಿರುವ ಇವರು ಎಲ್ಲರಿಗು ಮಾದರಿಯಾಗಿದ್ದಾರೆ. 


 ಟೆಂಬಾ ಬವುಮಾ ಅವರ ಸಾಮಾಜಿಕ ಕಾರ್ಯಗಳು ಎಲ್ಲರ ಮನ ಗೆದ್ದಿದೆ. ಹೌದು, ದಕ್ಷಿಣ ಆಫ್ರಿಕಾದ ನಾಯಕ ಅಲ್ಲಿನ  ಬಡವರಿಗೆ ಸಹಾಯ ಮಾಡುವ ಎನ್‌ಜಿಓ (NGO) ವನ್ನು ನಡೆಸುತ್ತಿದ್ದಾರೆ ಎಂಬು ನಿಜಕ್ಕೂ ಹೆಮ್ಮೆ ಪಡುವ ವಿಷಯವಾಗಿದೆ.


ಇದನ್ನು ಓದಿ-ವಿರಾಟ್‌ ಕೊಹ್ಲಿ ಜೆರ್ಸಿ ನಂಬರ್ ಹಿಂದಿದೆ ಒಂದು ರೋಚಕ ಕತೆ...! 18ರ ರಹಸ್ಯ ಗೊತ್ತಾಗಬೇಕಾ ?


 ಈ ಹಿಂದೆ ದಕ್ಷಿಣ ಆಫ್ರಿಕಾದ ಬಡ ಆಟಗಾರರಿಗೆ ಸಹಾಯಮಾಡುವ ಉದ್ದೇಶದಿಂದ ಅವರಿಗೆ  55 ಲಕ್ಷ ರೂಪಾಯಿ ಮೌಲ್ಯದ ಕ್ರಿಕೆಟ್ ಉಪಕರಣಗಳನ್ನು ದೇಣಿಗೆ ನೀಡುವ ಮೂಲಕ ಎಲ್ಲೆಡೆ ಸುದ್ದಿಯಾಗಿದ್ದರು,55 ಲಕ್ಷ ಈ ಆಟಗಾರನಿಗೆ ದೊಡ್ಡ ಮೊತ್ತವೇ ಆಗಿದ್ದರು ತಮ್ಮ ಹೃದವಂತಿಕೆ ತನದಿಂದ ಅದನ್ನು ಬಡವರಿಗೆ ನೀಡಿದ್ದಾರೆ.
 
 ವಿರಾಟ್‌ ಕೊಹ್ಲಿಯವರು ಈ ರೀತಿಯ ಕಾರ್ಯಗಳಿಗೆ ಮುಂದಾಗಿದ್ದರು ಇದೀಗ  ಟೆಂಬಾ ಬವುಮಾ ಅವರು ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ.  ಬವುಮಾ ಅವರ ಈ ರೀತಿಯ ಸಾಮಾಜಿಕ ಕಳಕಳಿ ಮತ್ತು ತಮ್ಮ ದೇಶದ ಬಡ ಕ್ರಿಕೇಟ್‌ ಆಟಗಾರರಿಗೆ ಮಾಡುತ್ತಿರುವ ಸಹಾಯದ ಬಗ್ಗೆ ಎಲ್ಲಡೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಇದು ಇತರ ತಂಡಗಳ ಆಟಗಾರರಿಗೂ ಮಾದರಿಯಾಗ ಬೇಕಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.